ಗೆಳೆಯನನ್ನು ಕ್ರಿಮಿನಲ್ ಕೇಸ್‌ನಲ್ಲಿ ಸಿಲುಕಿಸಲು ತನ್ನ ತೋಳಿಗೆ ತಾನೇ ಗುಂಡು ಹಾರಿಸಿಕೊಂಡ ಭೂಪ!

ಗೆಳೆಯನನ್ನು ಕ್ರಿಮಿನಲ್ ಕೇಸ್‌ನಲ್ಲಿ ಸಿಲುಕಿಸಲು ತನ್ನ ತೋಳಿಗೆ ತಾನೇ ಗುಂಡು ಹಾರಿಸಿಕೊಂಡ ಭೂಪ!

ಸ್ನೇಹಕ್ಕಾಗಿ ಎಂಥಾ ತ್ಯಾಗಕ್ಕೂ ಸಿದ್ದ ಎಂಬುವುದರ ಕುರಿತು ಗೆಳೆಯರ ಬಗ್ಗೆ ಸಾಕಷ್ಟು ಸಿನಿಮಾಗಳಲ್ಲಿ ನೋಡಿದ್ದೇವೆ. ಅಷ್ಟೇ ಯಾಕೆ ಪೌರಾಣಿಕ ಕಥೆಗಳಲ್ಲೂ ಕೇಳಿದ್ದೇವೆ. ನಿಜ ಜೀವನದಲ್ಲೂ ಇಂತಹ ಅನೇಕ ನಿರ್ದಶನಗಳು ನಡೆದಿವೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಫ್ರೆಂಡ್‌ಶಿಪ್‌ಗೆ ಬೆಲೆಯೇ ಇಲ್ಲ ಅನ್ನುವಂತಾಗಿದೆ. ಕಷ್ಟಕಾಲದಲ್ಲಿ ಬುಜದ ಮೇಲೆ ಕೈ ಇಟ್ಟು, ನಿನ್ನೊಂದಿಗೆ  ನಾನಿದ್ದೇನೆ ಅಂತಾ ಹೇಳಿದ ಸ್ನೇಹಿತನ ಬೆನ್ನ ಹಿಂದೆಯೇ ಕೆಲವರು ಪಿತೂರಿಗಳನ್ನು ನಡೆಸುತ್ತಿದ್ದಾರೆ. ಕಷ್ಟದ ಹಾದಿಯಲ್ಲಿ ಮುನ್ನುಗ್ಗಲು ಸಹಾಯ ಮಾಡಿದ ಸ್ನೇಹಿತನನ್ನೇ ಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. ಇದೀಗ ಇಂತಹದ್ದೇ ಒಂದು ಘಟನೆ ನಡೆದಿದೆ. ಸ್ನೇಹಿತನನ್ನು ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸುವ ಸಲುವಾಗಿ ವ್ಯಕ್ತಿಯೊಬ್ಬ ತನ್ನ ತೋಳಿಗೆ ತಾನೇ ಗುಂಡು ಹಾರಿಸಿಕೊಂಡಿದ್ದಾನೆ.

ಇದನ್ನೂ ಓದಿ: ಜಾಮೀನು ಮೂಲಕ ಜೈಲಿನಿಂದ ಹೊರಬಂದ ಕರವೇ ನಾರಾಯಣಗೌಡ – ರಿಲೀಸ್‌ ಆದ ಕೂಡಲೇ ಕಾರ್ಯಕರ್ತರ ಬಳಿ ಕ್ಷಮೆ ಕೇಳಿದ್ಯಾಕೆ?

ಅಷ್ಟಕ್ಕೂ ಆಗಿದ್ದೇನು?

ಹೌದು, ಈ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಕಷ್ಟಕಾಲದಲ್ಲಿ ನೆರವಾದ ಸ್ನೇಹಿತನಿಗೆ ಇಲ್ಲೊಬ್ಬ ಕಾಟ ಕೊಡಲು ಮುಂದಾಗಿದ್ದಾನೆ. ಸ್ನೇಹಿತನನ್ನು ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸುವ ಸಲುವಾಗಿ ವ್ಯಕ್ತಿಯೊಬ್ಬ ತನ್ನ ತೋಳಿಗೆ ತಾನೇ ಗುಂಡು ಹಾರಿಸಿಕೊಂಡಿದ್ದಾನೆ. ದಾದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಂತ್ ಮಂಡಿ ಪ್ರದೇಶದಲ್ಲಿ ಬೆಳಗ್ಗೆ 8.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಘಟನೆಯ ಹಿನ್ನೆಲೆ

ತನುಜ್ ನಗರ್ ಎಂಬ ವ್ಯಕ್ತಿ, ಎರಡು ವರ್ಷಗಳ ಹಿಂದೆ ರಿಷಬ್ ಗುಪ್ತಾಗೆ ಸುಮಾರು 15 ಲಕ್ಷ ರೂಪಾಯಿ ಸಾಲ ನೀಡಿದ್ದರು. ಸಾಲದ ಮರುಪಾವತಿ ವಿಳಂಬವಾದ ಆರೋಪವಿತ್ತು. ನಾಗರ್ ಅವರ ಕರೆಯ ಮೇರೆಗೆ ಮರುಪಾವತಿಗಾಗಿ ಗುಪ್ತಾ ಅವರ ಮನೆಗೆ ಬಂದಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಬ್ಬರು ಒಳಗೆ ಮಾತನಾಡುತ್ತಿದ್ದಾಗ ಗುಪ್ತಾ ಅವರ ಮನೆಯ ಹೊರಗೆ ನಿಂತಿದ್ದ ಇನ್ನೊಬ್ಬ ಸ್ನೇಹಿತ ನಾಗರ್ ಜೊತೆಗಿದ್ದ. ಅವರು ಮಾತನಾಡುತ್ತಿರುವ ವೇಳೆ ನಾಗರ್ ಬಂದೂಕನ್ನು ಹೊರತೆಗೆದು ತನ್ನ ತೋಳಿಗೆ ಗುಂಡು ಹಾರಿಸಿಕೊಂಡಿದ್ದ, ನಂತರ ಅವನು ಮನೆಯಿಂದ ಓಡಿಹೋಗಿದ್ದಾನೆ ಎಂದು ಅಧಿಕಾರಿ ಹೇಳಿದರು.

ಗುಪ್ತಾ ಅವರನ್ನು ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸಲು ಇದನ್ನು ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಾಗರ್ ನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಇದೀಗ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗುತ್ತಿದೆ.

ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ, ಆದರೆ ಯಾವುದೇ ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸುವ ಮೊದಲು ನಿಜವಾದ ವಿಷಯ ಹಾಗೂ ಬಂದೂಕಿಗೆ ಸಂಬಂಧಿಸಿದ ದಾಖಲೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Shwetha M