ಒಂದೇ ಬಾರಿಗೆ ಬರೋಬ್ಬರಿ 37 ಇಟ್ಟಿಗೆಗಳು ಪೀಸ್ ಪೀಸ್!
ಗಿನ್ನೆಸ್ ದಾಖಲೆ ಅನ್ನೊ ಪದ ಕೇಳಿದಾಗಲೇ ಇದು ಸಾಮಾನ್ಯರಲ್ಲಿ ಅಸಮಾನ್ಯರು ಮಾಡೋ ಸಾಧನೆ ಅಂತಾ ಹಲವರು ಹೇಳುತ್ತಾರೆ. ಇನ್ನೂ ಕೆಲವರು ಗಿನ್ನೆಸ್ ಪುಟದಲ್ಲಿ ಹೆಸರು ಗಳಿಸಬೇಕು ಅಂತಾ ಕನಸು ಕಾಣುತ್ತಿರುತ್ತಾರೆ. ಹೀಗಾಗಿ, ಜೀವನದಲ್ಲಿ ಒಮ್ಮೆಯಾದರೂ ಗಿನ್ನೆಸ್ ರೆಕಾರ್ಡ್ ಮಾಡಬೇಕು. ಹಳೆಯ ದಾಖಲೆಗಳನ್ನು ಮುರಿಯಬೇಕು ಅಂತಾ ಕೆಲವರು ಪ್ರಯತ್ನಿಸುತ್ತಿರುತ್ತಾರೆ. ಇದೀಗ ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ 37 ಇಟ್ಟಿಗೆಗಳನ್ನು ಒಂದೇ ಬಾರಿ ಒಡೆಯುವ ಮೂಲಕ ಗಿನ್ನೆಸ್ ದಾಖಲೆ ಬರೆದಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ: ಮರಿಯ ಕುತ್ತಿಗೆ ಹಿಡಿದಿತ್ತು ಸಿಂಹ – ಕಂದನನ್ನು ಕಾಪಾಡಿದ್ದೇಗೆ ಗೊತ್ತಾ ಜಿರಾಫೆ?
ವೈರಲ್ ಆದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಎತ್ತರದ ಮೇಜಿನ ಮೇಲೆ ನಿಂತಿದ್ದಾನೆ. ಆತನ ಮುಂದೆ ಸುಮಾರು 37 ದೊಡ್ಡ ಗಾತ್ರದ ಇಟ್ಟಿಗೆಗಳನ್ನು ಕಬ್ಬಿಣದ ಸ್ಟ್ಯಾಂಡ್ ಮೇಲೆ ಇಡಲಾಗಿದೆ. ನೋಡ ನೋಡುತ್ತಿದ್ದಂತೆ ಆ ವ್ಯಕ್ತಿ 37 ಇಟ್ಟಿಗೆಗಳನ್ನು ಒಂದೇ ಬಾರಿಗೆ ಪುಡಿ ಪುಡಿ ಮಾಡಿದ್ದಾನೆ. ಇದನ್ನು ನೋಡಿದ ನೆಟ್ಟಿಗರು ಇಲ್ಲಿವರೆಗೆ ಯಾರೂ ಕೂಡ ಒಂದೇ ಬಾರಿಗೆ ಇಷ್ಟು ಇಟ್ಟಿಗೆಗಳನ್ನು ಪುಡಿ ಮಾಡಲು ಸಾಧ್ಯವಾಗಿಲ್ಲ. ಇದೇ ಮೊದಲ ಬಾರಿಗೆ ಈ ವ್ಯಕ್ತಿ ಇಷ್ಟು ಇಟ್ಟಿಗೆಗಳನ್ನು ಒಡೆದುಹಾಕಿದ್ದಾನೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ಟರ್ಕಿಯ ಮುಗ್ಲಾ ಸಿಟ್ಕಿ ಕೊಕ್ಮನ್ ವಿಶ್ವವಿದ್ಯಾಲಯದ ಅಟಾಟರ್ಕ್ ಸಾಂಸ್ಕೃತಿಕ ಕೇಂದ್ರದಲ್ಲಿ ಈ ವ್ಯಕ್ತಿ ಸುಮಾರು 37 ಇಟ್ಟಿಗೆಗಳನ್ನು ಒಡೆದಿದ್ದಾನೆ. ಈ ಕುರಿತಂತೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
View this post on Instagram