ಅಮೆಜಾನ್ ನಲ್ಲಿ ಬುಕ್ ಮಾಡಿದ್ದು ಮ್ಯಾಕ್​ಬುಕ್ ಪ್ರೊ – ಗ್ರಾಹಕನ ಕೈ ಸೇರಿದ್ದು ಪೆಡಿಗ್ರಿ!

ಅಮೆಜಾನ್ ನಲ್ಲಿ ಬುಕ್ ಮಾಡಿದ್ದು ಮ್ಯಾಕ್​ಬುಕ್ ಪ್ರೊ – ಗ್ರಾಹಕನ ಕೈ ಸೇರಿದ್ದು ಪೆಡಿಗ್ರಿ!

ವಾಷಿಂಗ್ಟನ್:‌  ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಶಾಪಿಂಗ್ ಟ್ರೆಂಡ್ ಆಗಿದೆ. ನಾವು ಕುಳಿತಲ್ಲಿಂದಲೇ ನಮಗೆ ಬೇಕಾದ ವಸ್ತುಗಳನ್ನು ಖರೀದಿಸಬಹುದು. ಅಲ್ಲದೇ ನಾವು ಏನನ್ನು ಬುಕ್ ಮಾಡಿರುತ್ತೇವೆಯೋ ಆ ವಸ್ತು ನಮ್ಮ ಕೈ ಸೇರುತ್ತದೆ. ಅದು ಸಾಮಾನ್ಯ. ಆದರೆ ಇಲ್ಲೊಬ್ಬ ಆರ್ಡರ್ 1,20,000 ರೂ. ಮೌಲ್ಯದ ಆ್ಯಪಲ್ ಮ್ಯಾಕ್​ಬುಕ್ ಪ್ರೋ. ಆತನ ಕೈಗೆ ಲಭಿಸಿದ್ದು ಮಾತ್ರ ಬೇರೆ ವಸ್ತು!

ಇದನ್ನೂ ಓದಿ: ಊಟಕ್ಕಾಗಿ ಕೇಳಿದ್ದು 500 ರೂಪಾಯಿ, ಸಿಕ್ಕಿದ್ದು 51 ಲಕ್ಷ ರೂಪಾಯಿ!

ಇತ್ತೀಚೆಗೆ ಯುಕೆ ಡರ್ಬಿಶೈರ್ ಮೂಲದ ಅಲನ್ ವುಡ್  ಎಂಬಾತ ತನ್ನ ಮಗಳಿಗೆ ಕನಸಿನ ಆ್ಯಪಲ್ ಮ್ಯಾಕ್​ಬುಕ್ ಖರೀದಿಸಲು ಬರೋಬ್ಬರಿ 1,20,000 ರೂ. ಒಟ್ಟು ಮಾಡಿ ಅಮೆಜಾನ್‌ ನಿಂದ ಆರ್ಡರ್‌ ಮಾಡಿದ್ದಾನೆ. ಅಮೆಜಾನ್‌ ನಿಂದ ಎರಡು ಬಾಕ್ಸ್‌ ಗಳು ಬಂದಿವೆ. ಇನ್ನೇನು ಆ್ಯಪಲ್ ಮ್ಯಾಕ್​ಬುಕ್ ತೆಗೆದು ನೋಡಬೇಕು ಎಂದು ಬಾಕ್ಸ್ ಓಪನ್ ಮಾಡಿದ್ದಾನೆ. ಆದರೆ ಅದರೊಳಗೆ ಇದ್ದ ವಸ್ತುವನ್ನು ಕಂಡು ಆತ ಶಾಕ್‌ ಆಗಿದ್ದಾನೆ.

ಅಮೆಜಾನ್‌ನ ಪ್ಯಾಕೇಜ್‌ನಲ್ಲಿ ಮ್ಯಾಕ್​ಬುಕ್ ಪ್ರೊ ಬದಲಿಗೆ ಎರಡು ಬಾಕ್ಸ್‌  ನಾಯಿಗೆ ಹಾಕುವ ಪೆಡಿಗ್ರಿಯನ್ನು ಕಳುಹಿಸಿಕೊಡಲಾಗಿದೆ. ಇದರಲ್ಲಿ 24 ಪ್ಯಾಕೆಟ್‌ಗಳ “ಮಿಕ್ಸ್ಡ್ ಸೆಲೆಕ್ಷನ್ ಇನ್ ಜೆಲ್ಲಿ” ಫ್ಲೇವರ್‌ಗಳಿತ್ತು. ಇದನ್ನು ಅಲನ್‌  ನೋಡಿ ಶಾಕ್ ಆಗಿದ್ದಾರೆ.

ಈ ಕುರಿತು ಮಾತನಾಡಿದ ಅಲನ್ ವುಡ್, “ಮೊದಲಿಗೆ ನಾನು ಗೊಂದಲವನ್ನು ಪರಿಹರಿಸಬಹುದೆಂದು ನಂಬಿದ್ದೆ, ಆದರೆ ಅಮೆಜಾನ್ ಗ್ರಾಹಕ ಸೇವೆಯೊಂದಿಗೆ ಮಾತನಾಡಿದ ನಂತರ, ಅವರು ನನಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.  ನಾಯಿಯ ಆಹಾರವನ್ನು ಗೋದಾಮಿಗೆ ಹಿಂತಿರುಗಿಸಿದೆ. ಆದರೆ ಅದು ಯಾವುದೇ ವ್ಯತ್ಯಾಸವನ್ನು ಮಾಡಲಿಲ್ಲ”ಎಂದು ಹೇಳಿದರು.

ಈ ಸಮಸ್ಯೆ ಕುರಿತು ಸುಮಾರು 15 ಗಂಟೆಗೂ ಹೆಚ್ಚು ಕಾಲ ಗ್ರಾಹಕ ಸಿಬ್ಬಂದಿಯೊಂದಿಗೆ ಅಲನ್‌ ಮಾತನಾಡಿದ್ದಾರೆ. ಪ್ರತಿ ಬಾರಿ ಯಾವುದೇ ಸರಿಯಾದ ಉತ್ತರ ಸಿಕ್ಕಿಲ್ಲ. ಇದುವೆರಗೂ ಈ ರೀತಿಯ ಸಮಸ್ಯೆ ಅಲನ್‌ ಗೆ ಆಗಿಲ್ಲ. ಕಂಪೆನಿ ಶೀಘ್ರದಲ್ಲಿ ಅಲನ್‌ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿದೆ. ಆದರೆ ಇದುವರೆಗೆ ಅದು ಆಗಿಲ್ಲ ಎಂದು ವರದಿ ತಿಳಿಸಿದೆ.

suddiyaana