ಆಟವಾಡುತ್ತಿದ್ದ ಮಕ್ಕಳ ಮೇಲೆ ಕುದಿಯುವ ಎಣ್ಣೆ ಸುರಿದ ಪಾಪಿ! – ಐದು ಮಕ್ಕಳ ಸ್ಥಿತಿ ಗಂಭೀರ!

ಆಟವಾಡುತ್ತಿದ್ದ ಮಕ್ಕಳ ಮೇಲೆ ಕುದಿಯುವ ಎಣ್ಣೆ ಸುರಿದ ಪಾಪಿ! – ಐದು ಮಕ್ಕಳ ಸ್ಥಿತಿ ಗಂಭೀರ!

ಮಕ್ಕಳೆಲ್ಲಾ ಒಟ್ಟಾಗಿ ಸೇರಿದ್ರೆ, ಆಟದ ಜೊತೆ ತುಂಟಾಟ ಕೂಡ ಕಾಮನ್.‌ ಕೆಲವೊಮ್ಮೆ ಮಕ್ಕಳು ಏನಾದ್ರೂ ಕಿತಾಪತಿ ಮಾಡುತ್ತಾರೆ. ಇದು ಹಿರಿಯರಿಗೆ ಕಿರಿಕಿರಿ ಅನ್ನಿಸುವುದು ಸಹಜ. ಆದ್ರೀಗ ಇಲ್ಲೊಂದು ಕಡೆ ಆಟವಾಡುತ್ತಿದ್ದ ಮಕ್ಕಳ ಮೇಲೆ ದುಷ್ಕರ್ಮಿಯೊಬ್ಬ ಬಿಸಿ ಎಣ್ಣೆ ಚೆಲ್ಲಿರುವ ಘಟನೆ ನಡೆದಿದೆ. ಐದು ಮಕ್ಕಳ ಸ್ಥಿತಿ ಈಗ ಚಿಂತಾಜನಕಾವಾಗಿದೆ.

ಇದನ್ನೂ ಓದಿ: ಭಾಗ್ಯಲಕ್ಷ್ಮೀ ಶೂಟಿಂಗ್ ವೇಳೆ ನಟಿ ಸುಷ್ಮಾ ರಾವ್ ತಲೆಗೆ ಪೆಟ್ಟು! – ನಟಿಗೆ ಏನಾಯ್ತು?

ಈ ಘಟನೆ ಉತ್ತರಪ್ರದೇಶದ  ಉನ್ನಾವೋದಲ್ಲಿ ನಡೆದಿದೆ. ವಿಶಾಲ್ ಮಕ್ಕಳ ಮೇಲೆ ಬಿಸಿ ಎಣ್ಣೆ ಎರಚಿದಾತ. ಗಾಯಗೊಂಡ ಮಕ್ಕಳನ್ನು ಸುಧೀರ್ (14), ರೌನಕ್ (11), ಸುಮಿತ್ (14), ಶ್ಯಾಂಬಾಬು (10) ಮತ್ತು ಮನೋಜ್ (12) ಎಂದು ಗುರುತಿಸಲಾಗಿದೆ. ಸುಧೀರ್ ಮತ್ತು ಮನೋಜ್ ಸ್ಥಿತಿ ಗಂಭೀರವಾಗಿದೆ

ಏನಿದು ಘಟನೆ?

ಉನ್ನಾವೋದ ಹಸನ್‌ಪುರ್ ಡ್ರಾಗ್ಪಾಲ್ ಖೇಡಾ ಗ್ರಾಮದಲ್ಲಿ ಕಳೆದ ತಿಂಗಳಾಂತ್ಯದಲ್ಲಿ ಹಿರಾಲಾಲ್ ಎಂಬವರು ಸಾವನ್ನಪ್ಪಿದ್ದರು. ಅವರ ತೆರಾಹ್ವಿ ಅಂದರೆ 13ನೇ ದಿನದ ಸಮಾರಂಭದಲ್ಲಿ ಐವರು ಮಕ್ಕಳು ಅಲ್ಲೇ ಆಟವಾಡುತ್ತಿದ್ದರು. ಈ ವೇಳೆ ವಿಶಾಲ್ ಮೇಲೆ ಕೆಲವು ಮಕ್ಕಳು ಆಕಸ್ಮಿಕವಾಗಿ ನೀರು ಸುರಿದಿದ್ದಾರೆ. ಇದರಿಂದ ಕೋಪಗೊಂಡ ವಿಶಾಲ್ ಹತ್ತಿರದಲ್ಲೇ ಇದ್ದ ಕುದಿಯುವ ಎಣ್ಣೆಯ ಪ್ಯಾನ್ ಅನ್ನು ತೆಗೆದುಕೊಂಡು ಮಕ್ಕಳ ಮೇಲೆ ಎಸೆದಿದ್ದಾನೆ. ಬಳಿಕ ಅಲ್ಲಿಂದ ಎಸ್ಕೇಪ್‌ ಆಗಿದ್ದಾನೆ.

ಮಕ್ಕಳ ಕಿರುಚಾಟ ಕೇಳಿ ಓಡಿ ಬಂದ ಸ್ಥಳೀಯರು ಮಕ್ಕಳನ್ನು ಕೂಡಲೇ ಉನ್ನಾವೊದಿಂದ ಸುಮಾರು 65 ಕಿ.ಮೀ ದೂರದಲ್ಲಿರುವ ಲಕ್ನೋದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾರೆ. ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿದ್ದು, ಪರಾರಿಯಾಗಿರುವ ವಿಶಾಲ್ ನನ್ನು ಹುಡುಕಲಾಗುತ್ತಿದೆ. ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

Shwetha M

Leave a Reply

Your email address will not be published. Required fields are marked *