ಚೀನಾದಲ್ಲಿ ಶುರುವಾಯ್ತು man mum ಟ್ರೆಂಡ್! – 5 ನಿಮಿಷ ತಬ್ಬಿಕೊಳ್ಳಲು 600 ರೂಪಾಯಿ ಚಾರ್ಜ್!

ಅಪ್ಪಿಕೊಳ್ಳುವುದು ಈಗ ಟ್ರೆಂಡ್ ಆಗಿಬಿಟ್ಟಿದೆ. ಸ್ನೇಹಿತರಂತೂ ಎಲ್ಲೇ ಸಿಕ್ಕಿದರೂ ಒಬ್ಬರಿಗೊಬ್ಬರು ಅಪ್ಪಿಕೊಂಡು ವಿಶ್ ಮಾಡುತ್ತಾರೆ. ಇದು ಬರೀ ಫ್ಯಾಶನ್ ಮಾತ್ರವಲ್ಲ ಇದರಿಂದ ಆರೋಗ್ಯಕ್ಕೂ ಲಾಭಗಳಿವೆ. ಇದೀಗ ಚೀನಾದಲ್ಲಿ ಹೊಸ ಟ್ರೆಂಡ್‌ವೊಂದು ಶುರುವಾಗಿದೆ. ‘man mum’ ಅನ್ನೋ ಹೊಸ ಟ್ರೆಂಡ್ ಹುಟ್ಟಿಕೊಂಡಿದೆ.
ಇದನ್ನೂ ಓದಿ: ತಾಯಿ ಅನಾರೋಗ್ಯ.. ಲಕ್ಷ್ಮೀ ನಿವಾಸಕ್ಕೆ ಶ್ವೇತಾ ಗುಡ್‌ಬೈ – ಲಕ್ಷ್ಮೀ ಪಾತ್ರಕ್ಕೆ ನಟಿ ಮಾಧುರಿ ಎಂಟ್ರಿ!
ಜೀವನದ ಜಂಜಾಟ, ಕೆಲಸದ ಒತ್ತಡ, ಡೆಡ್‌ಲೈನ್‌ಗಳು, ಬಿಡುವಿಲ್ಲದೆ ಬದುಕುವವರು ಮಾನಸಿಕ ಸ್ಥೈರ್ಯವನ್ನೇ ಕಳೆದುಕೊಂಡಿರುತ್ತಾರೆ. ಇಂತಹವರಿಗೆ ತಾಳ್ಮೆ, ಸಹನೆ, ಪ್ರೀತಿಯಂದ ಸಾಂತ್ವನ ಹೇಳುವವರ ಅಗತ್ಯವಿದೆ. ಹೀಗಾಗಿಯೇ ಚೀನಾದಲ್ಲಿ ಈ ‘man mum’ ಟ್ರೆಂಡ್ ಶುರುವಾಗಿದೆ. ಇದರ ಅರ್ಥ ಇಷ್ಟೇ ಅಮ್ಮನ ಅಪ್ಪುಗೆ. ಮನುಷ್ಯತ್ವ, ತಾಯ್ತನ, ಮಮತೆ, ಪ್ರೀತಿಯಿಂದ 5 ನಿಮಿಷಗಳ ಕಾಲ ತಬ್ಬಿಕೊಳ್ಳುವುದು.
‘man mum’ ಅನ್ನೋದು ಹೊಸದಾಗಿದ್ರು, ಚೀನಾದ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಯಾವ ಪುರುಷರು ಅಮ್ಮನ ಅಪ್ಪುಗೆಗಾಗಿ ಪ್ರೀತಿಯಿಂದ ತಬ್ಬಿಕೊಳ್ಳಲು ಬಯಸುತ್ತಾರೋ ಅವರನ್ನ ತಬ್ಬಿಕೊಂಡು ಸಂತೈಸಲಾಗುತ್ತಿದೆ. ಚೀನಾದ ಯುವತಿಯರು 5 ನಿಮಿಷದ ‘man mum’ಗೆ ಒಪ್ಪಿಕೊಂಡು 20-50 ಯುವಾನ್ ಚಾರ್ಜ್ ಮಾಡುತ್ತಿದ್ದಾರೆ. 20-50 ಯುವಾನ್ ಅಂದ್ರೆ ಭಾರತೀಯ ರೂಪಾಯಿಯಲ್ಲಿ 250-600 ರೂಪಾಯಿಗಳು. ಇಷ್ಟು ದುಡ್ಡು ಕೊಟ್ಟರೂ ತಬ್ಬಿಕೊಳ್ಳಲು ಯುವತಿಯರು ಒಪ್ಪಿಕೊಳ್ಳೋದಿಲ್ಲ. 5 ನಿಮಿಷ ತಬ್ಬಿಕೊಳ್ಳುವ ಯುವಕರು ಕೆಲವೊಂದು ಗುಣ-ಲಕ್ಷಣ ಮತ್ತು ಷರತ್ತುಗಳನ್ನು ಪೂರೈಸಬೇಕು.
5 ನಿಮಿಷ ತಬ್ಬಿಕೊಳ್ಳಲು ಬಯಸುವ ಯುವಕರು, ಯುವತಿಯರು ಇಷ್ಟಪಡುವ ಸ್ವಭಾವ ಹೊಂದಿರಬೇಕು. ನೋಡಲು ಚೆನ್ನಾಗಿರಬೇಕು. ಗುಡ್ ಲುಕ್ಕಿಂಗ್, ಹ್ಯಾಂಡ್ಸಮ್, ಸೌಮ್ಯತೆ, ತಾಳ್ಮೆಯನ್ನು ಮೊದಲಿಗೆ ನಿರೀಕ್ಷೆ ಮಾಡಲಾಗುತ್ತದೆ. ಎಲ್ಲಾ ಓಕೆ ಆದ ಮೇಲೆ ಮಾಲ್‌ಗಳು, ಸಬ್‌ವೇ ಸ್ಟೇಷನ್ ಸೇರಿದಂತೆ ಸಾರ್ವಜನಿಕ ಜಾಗಗಳಲ್ಲಿ ಈ ರೀತಿ ತಬ್ಬಿಕೊಳ್ಳಲಾಗುತ್ತಿದೆ.
ಝೌ ಎಂಬ ಯುವಕ ಹೀಗೆ ಚಾಟ್ ಆ್ಯಪ್‌ಗಳಲ್ಲಿ 34 ಯುವತಿಯರಿಗೆ ಇಂತಹ ಅವಕಾಶ ಕೊಟ್ಟು ಬರೋಬ್ಬರಿ 21,000 ರೂಪಾಯಿಗಳನ್ನು ಸಂಪಾದಿಸಿದ್ದಾನೆ. ನನ್ನಿಂದ ಕೆಲವು ಮಹಿಳೆಯರು ನಿರಾಳರಾಗುವ ಅವಕಾಶ ಸಿಕ್ಕಿದೆ. ಆದರೆ ಇದನ್ನೇ ಫುಲ್ ಟೈಮ್ ಕೆಲಸ ಮಾಡಿಕೊಳ್ಳುವ ಆಸೆ ನನಗಿಲ್ಲ ಎಂದಿದ್ದಾರೆ. ಕೆಲವರು 5 ನಿಮಿಷ ತಬ್ಬಿಕೊಂಡ ಬಳಿಕ ಗಿಫ್ಟ್‌ಗಳನ್ನು ಕೊಟ್ಟು ಹೋಗಿದ್ದಾರೆ.
ಸೋಷಿಯಲ್ ಮೀಡಿಯಾ ಚಾಟ್ ಆ್ಯಪ್‌ಗಳಲ್ಲಿ ಸ್ಥಳ ಹಾಗೂ ಸಮಯ ನಿಗದಿ ಮಾಡಿಕೊಳ್ಳಲಾಗುತ್ತದೆ. ಯುವತಿಯ ಷರತ್ತುಗಳು ಪೂರೈಸಿದ ಯುವಕರು 5 ನಿಮಿಷ ತಬ್ಬಿಕೊಳ್ಳುವ ಮುಖಾಂತರ ಚೀನಾದಲ್ಲಿ ಒತ್ತಡ ಹಾಗೂ ಹಲವಾರು ಮಾನಸಿಕ ಖಿನ್ನತೆಗಳಿಂದ ಹೊರ ಬರುತ್ತಿದ್ದಾರೆ ಎನ್ನಲಾಗಿದೆ.

ನೋಡಿರಿ

