80 ಲಕ್ಷ ರೂ. ಆಫರ್ ಕೊಟ್ರೂ ಮಾಸ್ಕ್ ತೆಗೆಯದ ಮಹಿಳೆ – ಅಸಲಿ ಕಾರಣ ಏನು ಗೊತ್ತಾ..?

80 ಲಕ್ಷ ರೂ. ಆಫರ್ ಕೊಟ್ರೂ ಮಾಸ್ಕ್ ತೆಗೆಯದ ಮಹಿಳೆ – ಅಸಲಿ ಕಾರಣ ಏನು ಗೊತ್ತಾ..?

ಕೊರೊನಾಗೂ ಮುನ್ನ ಕೆಲವರು ವಾಯುಮಾಲಿನ್ಯ ಅಂತಾ ಮಾಸ್ಕ್ ಬಳಸುತ್ತಿದ್ದರು. ಆಗೆಲ್ಲಾ ಮಾಸ್ಕ್ ಹಾಕಿದವರನ್ನ ಜನ ವಿಚಿತ್ರವಾಗಿ ನೋಡುತ್ತಿದ್ದರು. ಕೊರೊನಾ ಬಂದ ಬಳಿಕ ಮಾಸ್ಕ್ ಹಾಕದೇ ಇರುವವರನ್ನ ಯಾಕೆ ಹಾಕಿಲ್ಲ ಅಂತಾ ತರಾಟೆಗೆ ತೆಗೆದುಕೊಳ್ಳುತ್ತಿದ್ರು. ಇದೀಗ ಕೊವಿಡ್ 19 ಸೋಂಕಿನ ಅಬ್ಬರ ಕಡಿಮೆಯಾಗಿದ್ದು ಬಹುತೇಕ ಮಂದಿ ಮಾಸ್ಕ್​ನೇ ಮರೆತಿದ್ದಾರೆ. ಇದೀಗ ಇದೇ ಮಾಸ್ಕ್ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ.

ಕೋವಿಡ್ (covid) ಬಂದ ಮೇಲೆ ಹೆಚ್ಚಿನ ಜನರು ಮಾಸ್ಕ್‌ನಿಂದ (Mask)ತಮ್ಮ ಮುಖವನ್ನು ಮುಚ್ಚಿಕೊಳ್ಳುವ ಪ್ರಕ್ರಿಯೆಗೆ ಇಷ್ಟವಿಲ್ಲದಿದ್ದರೂ ಒಪ್ಪಿಸಿಕೊಂಡರು. ಆದರೆ ಈಗ ಸೋಂಕು ಬಹುತೇಕ ಕಡಿಮೆ ಆಗಿದೆ. ಆದರೆ ಕೆಲವರು ಮಾಸ್ಕ್‌ ಹಾಕುವುದನ್ನು ಬಿಟ್ಟಿಲ್ಲ. ಅದು ಎಂದಿನಂತೆ ರೂಢಿಯಾಗಿದೆ. ಆದ್ರೆ ಇದೇ ಮಾಸ್ಕ್‌ನ್ನು  ತೆಗೆಯುವಂತೆ ಹೇಳಿ ಯಾರಾದರೂ ಲಕ್ಷಗಟ್ಟಲೆ ಹಣದ ಆಫರ್ ನೀಡಿದರೆ ಹೇಗಿರುತ್ತೆ ಹೇಳಿ. ಹೀಗೆ ಮಾಸ್ಕ್‌ ಧರಿಸಿ ವಿಮಾನವೇರಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕೋಟ್ಯಧಿಪತಿಯೋರ್ವ ಮಾಸ್ಕ್‌ ತೆಗೆದರೆ 80 ಲಕ್ಷ ರೂಪಾಯಿ ಹಣ ನೀಡುವ ಆಫರ್ ಮಾಡಿದ್ದಾನೆ. ಆದರೆ ಮಹಿಳೆ ಹಣದ ಆಸೆಗೆ ಬಲಿಯಾಗದೇ ಆತನ ಆಫರ್ ಅನ್ನು ಅಷ್ಟೇ ವೇಗವಾಗಿ ತಿರಸ್ಕರಿಸಿದ್ದಾಳೆ.

ಇದನ್ನೂ ಓದಿ : ಹೆಚ್3ಎನ್2 ವೈರಸ್ ಹೆಚ್ಚಳ – ಹತ್ತು ದಿನ ಶಾಲೆಗಳಿಗೆ ರಜೆ ಘೋಷಣೆ

ಮಹಿಳೆಗೆ ಹಣದ ಆಮಿಷವೊಡ್ಡಿದ ಸ್ಟೀವ್ ಕಿಸ್ಚೆರ್ ಸರಣಿ ಟ್ವಿಟ್‌ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದಾರೆ. ನಾನು  ಡೆಲ್ಟಾ ವಿಮಾನದಲ್ಲಿ ಪ್ರಯಾಣಿಸುತ್ತಿದೆ. ನನ್ನ ಪಕ್ಕದಲ್ಲಿ ಫಸ್ಟ್‌ಕ್ಲಾಸ್‌ನಲ್ಲಿ ಕುಳಿತಿದ್ದ ಮಹಿಳೆ 100000 ಡಾಲರ್ ( ಭಾರತದ 82 ಲಕ್ಷ ರೂಪಾಯಿ) ಗಾಗಿ ತಮ್ಮ ಮಾಸ್ಕ್ ತೆಗೆಯಲು ನಿರಾಕರಿಸಿದರು. ಆಕೆ ಫಾರ್ಮಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸ್ಟೀವ್ ಬರೆದುಕೊಂಡಿದ್ದಾರೆ. ಸ್ಟೀವ್ ಪ್ರಕಾರ, ಮಹಿಳೆ ಆತನ ಪ್ರಸ್ತಾಪವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾಳೆ. ಆದರೂ ಸ್ಟೀವ್ ಆಕೆಗೆ ಮುಖವಾಡವನ್ನು ತೆಗೆಯುವಂತೆ ಕೇಳುವುದನ್ನು ಮುಂದುವರೆಸುತ್ತಲೇ ಇದ್ದರು. ವಿಮಾನದಲ್ಲಿ ಬೆಳಗಿನ ಉಪಾಹಾರ ನೀಡಿದಾಗ ಈ ಮಹಿಳೆ ಮುಖವಾಡವನ್ನು ತೆಗೆದಿದ್ದಾರೆ ಎಂದು ಸ್ಟೀವ್ ಹೇಳಿಕೊಂಡಿದ್ದಾರೆ.

ಸ್ಟೀವ್ ಪ್ರಕಾರ, ಆತ ನೀಡಿದ 80 ಲಕ್ಷದ  ಪ್ರಸ್ತಾಪವನ್ನು ಸಂಪೂರ್ಣವಾಗಿ ಮಹಿಳೆ ತಿರಸ್ಕರಿಸಿದಳು. ಆದರೂ ಸ್ಟೀವ್ ಮುಖವಾಡವನ್ನು ತೆಗೆಯುವಂತೆ ಕೇಳುವುದನ್ನು ಮುಂದುವರೆಸಿದರು. ಆದರೆ ಸ್ಟೀವ್ ಟ್ವಿಟ್‌ಗೆ ಸಾಮಾಜಿಕ ಜಾಲತಾಣ ಬಳಕೆದಾರರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.  ವಿಮಾನ ಪ್ರಯಾಣದಲ್ಲಿ ಮಹಿಳೆಯರಿಗೆ ಈ ರೀತಿ ಹಣದ ಆಫರ್ ಮಾಡುವುದು ನಿಮ್ಮ ಅಭ್ಯಾಸವೇ ಎಂದು ಪ್ರಶ್ನಿಸಿದ್ದಾರೆ.

suddiyaana