ಇಲಿ ಹಿಡಿಯೋಕೆ ಮನೆಗೆ ಹಾವನ್ನೇ ಬಿಟ್ಟ ಮಾಲೀಕ – ಯಪ್ಪೋ ಮುಂದೇನಾಯ್ತು ಗೊತ್ತಾ..?

ಇಲಿ ಹಿಡಿಯೋಕೆ ಮನೆಗೆ ಹಾವನ್ನೇ ಬಿಟ್ಟ ಮಾಲೀಕ – ಯಪ್ಪೋ ಮುಂದೇನಾಯ್ತು ಗೊತ್ತಾ..?

ಮನೆಯಲ್ಲಿ ಅಪ್ಪಿ ತಪ್ಪಿ ಒಂದು ಇಲಿ ಸೇರಿಕೊಂಡ್ರೆ ನೆಮ್ಮದಿಯೇ ಇರಲ್ಲ. ಅಂತಹದರಲ್ಲಿ ನಾಲ್ಕೈದು ಇಲಿಗಳು ಸೇರಿಕೊಂಡ್ರೆ ಹೇಗಾಗ್ಬೇಡ ಹೇಳಿ. ಹೀಗೆ ಇಲಿಗಳ ಕಾಟಕ್ಕೆ ಬೇಸತ್ತು ಇಲ್ಲೊಬ್ಬ ಹಾವನ್ನೇ ಮನೆಯೊಳಗೆ ಬಿಟ್ಟುಕೊಂಡಿದ್ದಾನೆ.

ಕೆಲ ಮನೆಗಳಲ್ಲಿ ಇಲಿಗಳು ಸರ್ವೇಸಾಮಾನ್ಯ ಬಿಡಿ. ಕೆಲವರು ಇಲಿ ಹಿಡಿಯೋಕೆ ಬೋನ್, ಇಲಿ ಪಾಷಾಣ ಅಂತಾ ಏನೇನೋ ಮಾಡ್ತಾರೆ. ಇನ್ನೂ ಕೆಲವರು ಇಲಿ ಕಾಟಕ್ಕೆ ಬೇಸತ್ತು ಮನೆಯಲ್ಲಿ ಒಂದು ಬೆಕ್ಕು ಇರಲಿ ಅಂತಾ ಸಾಕಿಕೊಳ್ತಾರೆ. ಆದರೆ ಇಲ್ಲೊಬ್ಬ ಇಲಿ ಹಿಡಿಯೋಕೆ ಮಾಡಿರೋ ಐಡಿಯಾನೇ ಬೆಚ್ಚಿ ಬೀಳಿಸುವಂತಿದೆ.  ಮನೆಯಲ್ಲಿದ್ದ ಇಲಿಗಳನ್ನ ಓಡಿಸೋಕೆ ಹಾವನ್ನ ತಂದು ಬಿಟ್ಟಿದ್ದಾನೆ. ಇದೇನಪ್ಪ ಇಲಿಗಳನ್ನ ಓಡಿಸೋಕೆ ಯಾರಾದ್ರೂ ಮನೆಗೆ ಹಾವನ್ನ ಬಿಡ್ತಾರಾ ಅಂತಾ ಅಚ್ಚರಿ ಪಡ್ಬೇಡಿ. ಮುಂದೇನಾಯ್ತು ಅನ್ನೋದನ್ನ ಮುಂದೆ ಓದಿ.
ಇದನ್ನೂ ಓದಿ:ಉಂಡು ಹೋದ ಓಡಿ ಹೋದ – ಫೈವ್ ಸ್ಟಾರ್ ಹೋಟೆಲ್​ಗೇ ₹23 ಲಕ್ಷ ದೋಖಾ!  

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ಸಿಕ್ಕಾಪಟ್ಟೆ ಕಮೆಂಟ್ ಮಾಡ್ತಿದ್ದಾರೆ. ಕೆಲವರು ಗುಡ್ ಐಡಿಯಾ ಅಂದ್ರೆ ಇನ್ನೂ ಕೆಲವರು ಇದು ಡೇಂಜರಸ್ ಪ್ಲ್ಯಾನ್ ಎಂದಿದ್ದಾರೆ. ಇನ್ನೂ ಕೆಲವರು ಈ ವಿಡಿಯೋ ನಕಲಿ ಇದನ್ನ ಮಾರ್ಫ್ ಮಾಡಲಾಗಿದೆ. ಹಾಗೇ ವಿಡಿಯೋ ಎಡಿಟ್ ಮಾಡಿ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗೇ ಮನೆಯೊಳಗೆ ಹಾವು ಬಿಟ್ಟಿದ್ದೀರಿ ಅದನ್ನ ಹೇಗೆ ಹಿಡಿಯುತ್ತೀರಿ ಎಂದು ಕಮೆಂಟ್ ಮಾಡಿದ್ದಾರೆ. ಅಸಲಿಗೆ ಇದು ಯಾವಾಗ ನಡೆದಿದೆ, ಎಲ್ಲಿ ನಡೆದಿರೋ ಘಟನೆ ಅನ್ನೋ ಬಗ್ಗೆ ನಿರ್ಧಿಷ್ಟ ಮಾಹಿತಿ ಇಲ್ಲ. ಆದ್ರೆ ವಿಡಿಯೋ ವೈರಲ್ ಆದ ಬಳಿಕ ಮಿಲಿಯನ್​ಗಟ್ಟಲೆ ವೀಕ್ಷಣೆ ಹಾಗೂ ಲಕ್ಷಗಟ್ಟಲೆ ಲೈಕ್ಸ್ ಪಡೆದುಕೊಂಡಿದೆ.

suddiyaana