ಎಮ್ಮೆಗೂ ಬಂತು ಕಾಲ! – ಎಸಿಯಲ್ಲೇ ಜೀವನ.. ಅಬ್ಬಬ್ಬಾ.. ಎಮ್ಮೆಗಳ ಲೈಫ್ ಎಷ್ಟೊಂದು ಬಿಂದಾಸ್?

ದೇಶದ ಹಲವು ಭಾಗಗಳಲ್ಲಿ ತಾಪಮಾನ ಹೆಚ್ಚಾಗಿದೆ. ಬಿಸಿಲಿನ ಝಳಕ್ಕೆ ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ಹೊರಗೆ ಸುಡು ಸುಡು ಬಿಸಿಲಿದ್ರೆ, ಸೆಕೆಯಿಂದಾಗಿ ಮನೆಯೊಳಗೂ ಕೂರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ದಿನವಿಡಿ ಫ್ಯಾನ್, ಕೂಲರ್, ಎಸಿ ಹಾಕಿಕೊಂಡು ಇರುವಂತೆ ಆಗಿದೆ. ಇನ್ನು ಪ್ರಾಣಿ, ಪಕ್ಷಿಗಳ ಕತೆ ಕೇಳಬೇಕೆ? ಮೂಕ ಜೀವಿಗಳ ರೋದನೆ ಎಂತವರನ್ನು ಮರುಗಿಸುವಂತೆ ಮಾಡಿಬಿಡುತ್ತದೆ. ಇದೀಗ ಇಲ್ಲೊಬ್ಬರು ರೈತ ಎಮ್ಮೆ ಕೊಟ್ಟಿಗೆಗೆ ಎಸಿ ಹಾಕಿಸಿದ್ದಾರೆ.
ಇದನ್ನೂ ಓದಿ: ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಅಂತಾ ನದಿಯಲ್ಲಿ ಕಾರು ಓಡಿಸಿದ! – ವಿಡಿಯೋ ವೈರಲ್ ಆಗುತ್ತಿದ್ದಂತೆ ಆತನಿಗೆ ಕಾದಿತ್ತು ಶಾಕ್!
ಹೌದು, ಬೇಸಿಗೆಕಾಲದಲ್ಲಿ ಮನುಷ್ಯರಷ್ಟೇ ಅಲ್ಲ ಪ್ರಾಣಿಗಳಿಗೂ ಬಿಸಿಲಿನ ಬೇಗೆ ಎದುರಾಗಿದೆ. ಆದ್ದರಿಂದ ಇಲ್ಲೊಬ್ಬ ರೈತ ತಾನು ಸಾಕಿದ ಎಮ್ಮೆಗಳ ಕೊಟ್ಟಿಗೆಗೆ ಎಸಿ ಹಾಕಿಸಿದ್ದಾನೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಸಾಕಿದ ಎಮ್ಮೆಗಳನ್ನು ಕೇವಲ ಕೆಲಸಕ್ಕೆ ಮಾತ್ರ ಬಳಸದೇ ಅವುಗಳ ಬಗ್ಗೆಯೂ ಕಾಳಜಿ ತೋರಿಸಿರುವುದು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
manjeetmalik567 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ವೈರಲ್ ಆದ ವಿಡಿಯೋದಲ್ಲಿ ಒಂದು ಕೋಣೆಯಲ್ಲಿ ಮೂರು ಎಮ್ಮೆಗಳು ಮತ್ತು ಎರಡು ಕರುಗಳು ಇರುವುದನ್ನು ನೋಡಬಹುದು. ಅಚ್ಚರಿಯ ಸಂಗತಿಯೆಂದರೆ ಎಸಿಯ ಜೊತೆಗೆ ಲೈಟ್, ಫ್ಯಾನ್ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರೂ ಅಚ್ಚರಿಗೊಂಡಿದ್ದು, ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.