ಕುತ್ತಾ ಎಂದು ನಮೂದಿಸಿದ ಅಧಿಕಾರಿಗಳಿಗೆ ಬೌ… ಬೌ… ಬೌ… ಪಾಠ – ವಿಡಿಯೋ ವೈರಲ್
ಶ್ವಾನದಂತೆ ಬೊಗಳಿ ಆಕ್ರೋಶ ಹೊರಹಾಕಿದ ಯುವಕ

ಬಂಕುರಾ: ರೇಷನ್ ಕಾರ್ಡ್ ನಲ್ಲಿ ದತ್ತಾ ಬದಲಿಗೆ ಕುತ್ತಾ ಎಂದು ಬರೆದು ಎಡವಟ್ಟು ಮಾಡಿದ ಸರಕಾರಿ ಅಧಿಕಾರಿಯ ವಿರುದ್ದ ವ್ಯಕ್ತಿಯೊಬ್ಬ ಶ್ವಾನ ಬೊಗಳಿದಂತೆ ಬೊಗಳಿ ಆಕ್ರೋಶ ಹೊರಹಾಕಿದ ಘಟನೆ ನಡೆದಿದ್ದು, ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ: ಹರಿದ, ಕೊಳಕು ಶೂ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
ಶ್ರೀಕಾಂತಿ ದತ್ತಾ ಎಂಬ ವ್ಯಕ್ತಿಯ ಹೆಸರು ಪಡಿತರ ಚೀಟಿಯಲ್ಲಿ ಶ್ರೀಕಾಂತಿ ಕುತ್ತಾ ಎಂದು ತಪ್ಪಾಗಿ ಪಡಿತರ ಚೀಟಿಯಲ್ಲಿ ನಮೂದಿಸಲಾಗಿತ್ತು. ಈ ತಪ್ಪನ್ನು ಸರಿಪಡಿಸಲು ಶ್ರೀಕಾಂತಿ ಮೂರು ಮೂರು ಬಾರಿ ಅಧಿಕಾರಿಗಳ ಬಳಿ ಅರ್ಜಿ ಕೊಟ್ಟರೂ ಹೆಸರು ಮಾತ್ರ ಶ್ರೀಕಾಂತಿ ಕುತ್ತಾ ಎಂದೇ ನಮೂದಿಸಲಾಗಿತ್ತು. ಇದರಿಂದ ಮನನೊಂದ ಶ್ರೀಕಾಂತಿ ದತ್ತಾ, ಇನ್ನು ಅಧಿಕಾರಿಗಳಿಗೆ ಅರ್ಜಿ ಕೊಟ್ಟು ಪ್ರಯೋಜನವಿಲ್ಲ. ಇದಕ್ಕೆ ಬೇರೆ ರೀತಿಯಲ್ಲೇ ಪ್ರತಿಭಟನೆ ನಡೆಸಬೇಕು ಎಂದು ನಿರ್ಧರಿಸಿದ್ದಾನೆ. ಅಧಿಕಾರಿ ಕಾರಿನಲ್ಲಿ ಬರುತ್ತಿದ್ದ ವೇಳೆ ಕಾರಿನ ಬಳಿ ಪಡಿತರ ಚೀಟಿ ಹಾಗೂ ಅರ್ಜಿಯನ್ನು ಹಿಡಿದು ನಿಂತ ಶ್ರೀಕಾಂತಿ ಅಧಿಕಾರಿ ಬಳಿ ಮಾತನಾಡದೆ ನಾಯಿಯ ರೀತಿಯಲ್ಲೇ ಬೌ… ಬೌ… ಬೌ… ಎಂದು ಬೊಗಳಿದ್ದಾನೆ.
Man in West Bengal Barks in front of an Officer after the name in Ration Card appeared as ‘Kutta’ Instead of ‘Dutta’#WestBengal pic.twitter.com/CDPQp9XksE
— Yash (@Yashfacts28) November 19, 2022
ಇದರಿಂದ ಮುಜುಗರಗೊಂಡ ಅಧಿಕಾರಿ ಕೂಡಲೇ ಅರ್ಜಿದಾರನ ಹೆಸರನ್ನು ತಿದ್ದುಪಡಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದಾದ ಎರಡೇ ದಿನಕ್ಕೆ ಪಡಿತರ ಚೀಟಿಯಲ್ಲಿ ಶ್ರೀಕಾಂತಿ ಕುತ್ತಾ ಇದ್ದ ಹೆಸರು ಶ್ರೀಕಾಂತಿ ದತ್ತಾ ಎಂದು ಬದಲಾಯಿಸಿದ್ದಾರೆ ಎಂದು ತಿಳಿದುಬಂದಿದೆ.