ಉದ್ಯೋಗಿಗೆ ಸಿಕ್ತು ಬಂಪರ್ ಲಾಟರಿ – ವೇತನದ ಜೊತೆಗೆ 1 ವರ್ಷ ರಜೆ ನೀಡಿದ ಕಂಪನಿ!

ಉದ್ಯೋಗಿಗೆ ಸಿಕ್ತು ಬಂಪರ್ ಲಾಟರಿ – ವೇತನದ ಜೊತೆಗೆ 1 ವರ್ಷ ರಜೆ ನೀಡಿದ ಕಂಪನಿ!

ಉದ್ಯೋಗದಲ್ಲಿರುವವರು ಸಾಕಷ್ಟು ಒತ್ತಡದಿಂದ ಕೂಡಿರುತ್ತಾರೆ. ಹೀಗಾಗಿ ವಾರದಲ್ಲಿ ಒಂದೆರಡು ರಜೆಯಾದ್ರೂ ಸಿಗಲಿ, ಒಳ್ಳೆ ನಿದ್ದೆ ಮಾಡಬೇಕು ಅಂತಾ ಹಾತೊರೆಯುತ್ತಿರುತ್ತಾರೆ. ಹೀಗಿರುವಾಗ ದಿಢೀರ್ ಅಂತಾ ಸಂಬಳದ ಜೊತೆಗೆ ತಿಂಗಳಾನುಗಟ್ಟಲೆ ರಜೆ ಸಿಕ್ಕಿದ್ರೆ ಹೇಗಿರುತ್ತೆ ಅಲ್ವಾ? ಇಲ್ಲೊಬ್ಬ ವ್ಯಕ್ತಿಗೆ ಸಂಬಳದ ಜೊತೆಗೆ ವರ್ಷದ 365 ದಿನಗಳ ಕಾಲ ಕಂಪನಿ ರಜೆ ಘೋಷಿಸಿದೆ!

ಇದನ್ನೂ ಓದಿ: ತಿಮ್ಮಪ್ಪನ ಭಕ್ತರಿಗೆ ಬಂಪರ್ ಆಫರ್! – 990 ರೂ. ಪಾವತಿಸಿದರೆ ಒಂದೇ ದಿನದಲ್ಲಿ ಬಾಲಾಜಿ ದರ್ಶನ!

ಹೌದು, ಚೀನಾದ ಕಂಪನಿಯೊಂದು ತನ್ನ ಉದ್ಯೋಗಿಗೆ ಸಂಬಳದ ಜೊತೆಗೆ 1 ವರ್ಷಗಳ ಕಾಲ ರಜೆಯನ್ನು ನೀಡಿದ್ದು, ಉದ್ಯೋಗಿ ಫುಲ್ ಖುಷ್ ಆಗಿದ್ದಾರೆ. ಶೆನ್​ಜೆನ್​ ಗ್ವಾಂಗ್​ಡಾಂಗ್​ನಲ್ಲಿ ಕಂಪನಿಯು ವಾರ್ಷಿಕ ಡಿನ್ನರ್ ಆಯೋಜಿಸಿತ್ತು. ಈ ವೇಳೆ ಕಂಪನಿಯ ಮ್ಯಾನೇಜಿರಿಯಲ್ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬನಿಗೆ ಚೆಕ್ ಒಂದನ್ನು ನೀಡಿದ್ದು, ಅದರಲ್ಲಿ 365 ದಿನಗಳ ಕಾಲ ವೇತನ ಸಹಿತ ರಜೆ ಎಂದು ಬರೆದಿತ್ತು.

ಕೊವಿಡ್​ 19 ನಿಂದಾಗಿ ಕಳೆದ 3 ವರ್ಷಗಳಿಂದ ಕಚೇರಿಯಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದಿರಲಿಲ್ಲ. ಹೀಗಾಗಿ ಉದ್ಯೋಗಿಗಳಿಗೆ ಕೆಲಸ ಒತ್ತಡದಿಂದ ದೂರ ಮಾಡಲು ಕಂಪನಿ ಲಕ್ಕಿ ಡ್ರಾ ಕಾರ್ಯಕ್ರಮವನ್ನು ನಡೆಸಿತ್ತು. ಈ ವೇಳೆ ಬಹುಮಾನವನ್ನು ಎನ್​ಕ್ಯಾಶ್​ ಮಾಡಲು ಅಥವಾ ರಜೆಯನ್ನು ಆನಂದಿಸಲು ಬಯಸುತ್ತೀರಾ ಎನ್ನುವ ಪ್ರಶ್ನೆಯನ್ನು ಉದ್ಯೋಗಿಗೆ ಕೇಳಲಾಗಿದೆ ಈ ವಿಡಿಯೋ ಭಾರಿ ವೈರಲ್ ಆಗಿದೆ.

ಈ ಬಹುಮಾನವನ್ನು ಕೆಲವರು ಏಪ್ರಿಲ್ ಫೂಲ್ ಎಂದು ಹೇಳಿದರೆ ಇನ್ನೂ ಕೆಲವರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ಕಾಲದಲ್ಲಿ ಎಲ್ಲರನ್ನೂ ನೌಕರಿಯಿಂದ ತೆಗೆದು ಹಾಕಲಾಗುತ್ತಿದೆ. ಈ ಸಮಯದಲ್ಲಿ ಇಂತಹ ಆಫರ್ ಕೊಟ್ಟಿದ್ದು ಸತ್ಯವೇ ಎಂದು ಪ್ರಶ್ನಿಸುತ್ತಿದ್ದಾರೆ. 2022ರಲ್ಲಿ ಮತ್ತೊಂದು ಕಂಪನಿಯ ಉದ್ಯೋಗಿ 365 ದಿನಗಳ ರಜೆಯನ್ನು ಲಕ್ಕಿ ಡ್ರಾದಲ್ಲಿ ಗೆದ್ದಿದ್ದರು. ಉದ್ಯೋಗಿ ತನ್ನ ಬಹುಮಾನದ ಒಂದು ಭಾಗವನ್ನು ಎನ್​ಕ್ಯಾಶ್​ ಮಾಡಿ ಮತ್ತೊಂದು ಭಾಗವನ್ನು ಧಾನ ಮಾಡಿದ್ದರು ಎಂದು ಚೀನಾ ಮಾಧ್ಯಮ ವರದಿ ಮಾಡಿತ್ತು.

suddiyaana