ಈ ವ್ಯಕ್ತಿ ಬೆಡ್ನಲ್ಲಿ ಮಲಗಿಕೊಂಡೇ ಊರೂರು ಸುತ್ತುತ್ತಾನೆ!

ಮಾನವನಿಗೆ ಎಲ್ಲದರಲ್ಲೂ ಸುಖ ಹುಡುಕೋ ಬಯಕೆ. ತನ್ನ ಅಗತ್ಯತೆಗಳಿಗೆ ತಕ್ಕಂತೆ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಾನೆ. ಹಿಂದೆ ಚಾಪೆ ಮೇಲೆ ಮಲಗುತ್ತಿದ್ದವರು ಇಂದು ಐಷಾರಾಮಿ ಬೆಡ್ಗಳ ಮೊರೆ ಹೋಗುತ್ತಿದ್ದಾರೆ. ಆದರೂ ತಾವು ಕುಳಿತಲ್ಲೇ, ಮಲಗಿದಲ್ಲೇ ಎಲ್ಲವೂ ಬೇಕು ಅಂತಾ ಬಯಸುತ್ತಾರೆ. ಅಂತವರಿಗೆಂದೇ ಚೀನಾದ ಯುವಕನೋರ್ವ ಚಕ್ರಗಳಿರುವ ಬ್ಯಾಟರಿಯಿಂದ ಕಾರ್ಯ ನಿರ್ವಹಿಸಬಲ್ಲ ಬೆಡ್ಡೊಂದನ್ನು ನಿರ್ಮಿಸಿದ್ದಾನೆ. ಈ ಬೆಡ್ ನಲ್ಲಿ ಮಲಗಿಕೊಂಡು ಎಲ್ಲಿಗೆ ಬೇಕಾದರೂ ಹೋಗಬಹುದಂತೆ!
ಹೌದು, ಚೀನಾದ ಯುನ್ನಾನ್‌ನ, ಝು ಜಿಯಾನ್ಕಿಯಾಂಗ್ ಎಂಬಾತ ಬ್ಯಾಟರಿ ಚಾಲಿತ ಹಾಸಿಗೆಯೊಂದನ್ನು ಕಂಡುಹಿಡಿದಿದ್ದಾನೆ. ಮಲಗಿಕೊಂಡಿದ್ದಾಗ ನಿಮಗೇನಾದರು ಬೇಕು ಅನಿಸಿದರೆ ನೀವು ಎದ್ದು ಹೋಗಬೇಕೆಂದಿಲ್ಲ. ಈ ಹಾಸಿಗೆಯೇ ನಿಮ್ಮನ್ನು ಎಲ್ಲಾ ಕಡೆ ಕರೆದುಕೊಂಡು ಹೋಗುತ್ತೆ.
ಇದನ್ನೂ ಓದಿ: ಈ ಮಹಿಳೆ ನಿದ್ರೆ ಮಾಡಿದ್ರೆ 4 ದಿನವಾದ್ರೂ ಎಚ್ಚರವಾಗಲ್ಲ – ‘ಸ್ಲೀಪಿಂಗ್ ಬ್ಯೂಟಿʼಯ ಸೀಕ್ರೆಟ್ ಏನು?
ಝು ಚೈನೀಸ್ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಡೌಯಿನ್‌ನಲ್ಲಿ ತನ್ನ ಹಾಸಿಗೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾನೆ. ಅದು ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈತ ಹಂಚಿಕೊಂಡ ವಿಡಿಯೋದಲ್ಲಿ ವ್ಯಕ್ತಿ ತನ್ನ ಸಾಕು ನಾಯಿಗಳೊಂದಿಗೆ ಹಾಸಿಗೆಯ ಮೇಲೆ ಮಲಗಿಕೊಂಡೆ ರಸ್ತೆಯಲ್ಲಿ ಸಾಗುವುದು, ಅಷ್ಟೇ ಅಲ್ಲದೇ ಆತ ಹಾಸಿಗೆಯ ಮೇಲೆ ಕುಳಿತು ಮೀನು ಹಿಡಿಯುವ ದೃಶ್ಯಗಳು ವೈರಲ್ ಆಗಿದೆ.
ಈ ಹಾಸಿಗೆಯಲ್ಲಿ ಬ್ರೇಕ್‌ಗಳಿವೆ, ಅದನ್ನು ಜಾಯ್‌ಸ್ಟಿಕ್‌ನಿಂದ ನಿಯಂತ್ರಿಸಬಹುದು ಮತ್ತು ಹಾಸಿಗೆಯ ವೇಗವು ಸರಾಸರಿ ಮನುಷ್ಯನ ವಾಕಿಂಗ್ ವೇಗವನ್ನು ಹೋಲುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ ಈ ಹಾಸಿಗೆಯು 30 ಮೈಲುಗಳವರೆಗೆ ಚಲಿಸಬಹುದು ಅಂತಾ ಆತ ಹೇಳಿದ್ದಾನೆ.
ಬಾಲ್ಯದಲ್ಲಿ ತನಗೆ ಹಾಸಿಗೆಯಿಂದ ಎದ್ದೇಳಲು ಕಷ್ಟವಾಗುತ್ತಿತ್ತು. ಹೀಗಾಗಿ ನಾನು ತಡವಾಗಿ ಶಾಲೆಗೆ ತಲುಪುತ್ತಿದ್ದೆ. ಆ ಕ್ಷಣದಲ್ಲಿ ನಾನು ಮಲಗಿಕೊಂಡೆ ಶಾಲೆಗೆ ಹೋಗಲು ಸಾಧ್ಯವಾದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಭಾವಿಸಿದೆ. ಇದರ ಪರಿಣಾಮವೇ ಈ ಬೆಡ್ ಅನ್ನು ತಯಾರಿಸಲಾಗಿದೆ ಅಂತಾ ಝು ಹೇಳಿದ್ದಾರೆ.
ಝು ಅವರ ಈ ಹೊಸ ಸಂಶೋಧನೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವರು, ಇದು ಸೋಮಾರಿತನವನ್ನು ಪ್ರೋತ್ಸಾಹಿಸುತ್ತಿದೆ. ಆದರೆ ಈ ಹಾಸಿಗೆ ಹಿಡಿದವರಿಗೆ ಹಾಗೂ ದಿವ್ಯಾಂಗರಿಗೆ ಈ ಬೆಡ್ ಸಹಕಾರಿಯಾಗಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ನಿಮ್ಮ ಕಾಲುಗಳ ಮೌಲ್ಯವನ್ನು ನೀವು ತಿಳಿದುಕೊಳ್ಳಲು ಬಯಸಿದರೆ ಹಾಸಿಗೆ ಹಿಡಿದಿರುವ ಅಥವಾ ಅನಾರೋಗ್ಯದಿಂದ ಬಳಲುತ್ತಿರುವವರನ್ನು ಕೇಳಿ. ಅವರು ತಮ್ಮ ಕಾಲುಗಳ ಮೇಲೆ ನಿಲ್ಲಲು ಮತ್ತು ಓಡಾಡಲು ಬಯಸುತ್ತಾರೆ. ಆದ್ದರಿಂದ ನಮ್ಮ ಸೃಷ್ಠಿಕರ್ತನಿಗೆ ಸದಾ ಕೃತಜ್ಞರಾಗಿರಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
A whole new level of couch potato — Zhu Jianqiang went viral after he created this bed, which you can stay in all day pic.twitter.com/W1qjluxFcM
— NowThis (@nowthisnews) June 26, 2022