ಮಾಜಿ ಪ್ರೇಯಸಿ ಮದುವೆಗೆ ಬಾಂಬ್ ಇಟ್ಟು ಗಿಫ್ಟ್ ಕೊಟ್ಟ ಮಾಜಿ ಪ್ರಿಯಕರ – ಮುಂದೇನಾಯ್ತು ಗೊತ್ತಾ?

ಮಾಜಿ ಪ್ರೇಯಸಿ ಮದುವೆಗೆ ಬಾಂಬ್ ಇಟ್ಟು ಗಿಫ್ಟ್ ಕೊಟ್ಟ ಮಾಜಿ ಪ್ರಿಯಕರ – ಮುಂದೇನಾಯ್ತು ಗೊತ್ತಾ?

ಛತ್ತೀಸ್ ಗಢ: ಯುವತಿಯೊಬ್ಬಳ ಮಾಜಿ ಪ್ರಿಯಕರ ಕೊಟ್ಟ ಗಿಫ್ಟ್​​ನಿಂದಾಗಿ ಆಕೆಯ ಪತಿ ಮತ್ತು ಸಹೋದರನೇ ಬಲಿಯಾಗಿರುವ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ. ಹೇಮೇಂದ್ರ ಮೇರಾವಿ ಎಂಬಾತ ತನ್ನ ವಿವಾಹದಲ್ಲಿ ಪತ್ನಿಗೆ ಉಡುಗೊರೆಯಾಗಿ ಸಿಕ್ಕ ಥಿಯೇಟರ್​​ ಮ್ಯೂಸಿಕ್​ ಸಿಸ್ಮ್ ಅನ್ನು ಮನೆಗೆ ಕೊಂಡೊಯ್ದಿದ್ದ. ಬಳಿಕ ಸಹೋದರ ಮ್ಯೂಸಿಕ್​ ಸಿಸ್ಟಮ್​​ನ್ನ ಪ್ಲಗ್​​ಗೆ ಕನೆಕ್ಟ್  ಮಾಡಿ ಸ್ವಿಚ್ ಆನ್​ ಮಾಡುತ್ತಲೇ ಮ್ಯೂಸಿಕ್ ಸ್ಟಿಸಮ್ ಸ್ಫೋಟಗೊಂಡಿದೆ.

ಇದನ್ನೂ ಓದಿ:ಉತ್ಸವದ ವೇಳೆ ನಡೆಯಿತು ದುರಂತ – ದೇವಸ್ಥಾನದ ಕೊಳದಲ್ಲಿ ಮುಳುಗಿ 5 ಮಂದಿ ಸಾವು

ಸ್ಫೋಟದ ತೀವ್ರತೆಗೆ ಮನೆಯ ಚಾವಣಿಯೇ ಕುಸಿದು ಬಿದ್ದಿದೆ. ಅಷ್ಟೇ ಅಲ್ಲದೇ  ಆಗಷ್ಟೇ ವಿವಾಹವಾದ ಹೇಮೇಂದ್ರ ಮತ್ತು ಆತನ ಸಹೋದರ ಮೃತಪಟ್ಟಿದ್ದಾರೆ. ತನಿಖೆ ವೇಳೆ, ಯುವತಿಯ ಮಾಜಿ ಪ್ರಿಯಕರ ಸ್ಫೋಟಕ ತುಂಬಿದ್ದ ಮ್ಯೂಸಿಕ್ ಸ್ಟಿಸ್ಟಮ್​​​ನ್ನ ಆಕೆಗೆ ಉಡುಗೊರೆಯಾಗಿ ನೀಡಿರೋ ವಿಚಾರ ಗೊತ್ತಾಗಿದೆ. ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಏನಿದು ಘಟನೆ?

ಎಪ್ರಿಲ್ 1 ರಂದು ಹೇಮೇಂದ್ರ ಮೆರಾವಿ ಅವರ ವಿವಾಹವಾಗಿದ್ದು ಈ ವೇಳೆ ಸಾಕಷ್ಟು ಉಡುಗೊರೆಗಳು ಬಂದಿತ್ತು. ಮದುವೆಯ ಕಾರ್ಯಕ್ರಮಗಳು ಮುಗಿದ ಬಳಿಕ ಅಂದರೆ ಸೋಮವಾರ ಮನೆಮಂದಿ ಸೇರಿಕೊಂಡು ಮದುವೆಗೆ ಬಂದಿರುವ ಉಡುಗೊರೆಗಳನ್ನು ಪರಿಶೀಲಿಸುತ್ತಿದ್ದರು. ಈ ವೇಳೆ ಉಡುಗೊರೆಯಾಗಿ ಬಂದಿದ್ದ ಹೋಮ್ ಥಿಯೇಟರ್ ಕೂಡಾ ಬಂದಿತ್ತು. ಮದುಮಗ ಹಾಗೂ ಆತನ ಸಹೋದರ ಸೇರಿ ಹೋಮ್ ಥಿಯೇಟರ್ ನ ವಯರ್ ಸೆಟ್ ಮಾಡಿ ಪ್ಲಗ್ ಸ್ವಿಚ್ ಹಾಕಿದ ಕೂಡಲೆ ಹೋಮ್ ಥಿಯೇಟರ್ ಸ್ಪೋಟಗೊಂಡಿದೆ. ಈ ವೇಳೆ ಹೇಮೇಂದ್ರ ಮೆರಾವಿ ಸ್ಥಳದಲ್ಲೇ ಮೃತಪಟ್ಟರೆ ಸಹೋದರ ಸೇರಿ ಐದು ಮಂದಿ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸಹೋದರ ರಾಜ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಉಳಿದ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

suddiyaana