ಚಿರತೆ ಸೆರೆ ಹಿಡಿಯಲು ಇಟ್ಟಿದ್ದ ಮೇಕೆ ಕದಿಯಲು ಹೋಗಿ ಬೋನಿನಲ್ಲಿ ಬಂಧಿಯಾದ ವ್ಯಕ್ತಿ!

ಅರಣ್ಯ ನಾಶ ಆಗ್ತಿದ್ದಂತೆ ಕಾಡು ಪ್ರಾಣಿಗಳು ನಾಡಿನತ್ತ ಮುಖ ಮಾಡಿವೆ. ಆಹಾರ ಅರಸುತ್ತಾ ಬರುವ ಕಾಡು ಪ್ರಾಣಿಗಳು ಜನರ ಮೇಲೆ ಕೂಡ ದಾಳಿ ಮಾಡುತ್ತಿವೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಅವುಗಳನ್ನ ಹಿಡಿದು ಸುರಕ್ಷಿತ ಪ್ರದೇಶಗಳಿಗೆ ಬಿಟ್ಟು ಬರುತ್ತಾರೆ. ಇದೀಗ ಇಲ್ಲೊಂದು ಕಡೆ ಚಿರತೆ ಸೆರೆ ಹಿಡಿಯಲು ಇಟ್ಟಿದ್ದ ಮೇಕೆ ಕದಿಯಲು ಹೋಗಿ ವ್ಯಕ್ತಿಯೊಬ್ಬ ಬೋನ್‌ನಲ್ಲೇ ಲಾಕ್ ಆಗಿದ್ದಾನೆ.
ಇದನ್ನೂ ಓದಿ: ದಿತ್ವಾಹ್ ಚಂಡಮಾರುತ ಎಫೆಕ್ಟ್! – ಮುಂದಿನ 48 ಗಂಟೆಗಳಲ್ಲಿ ತಮಿಳುನಾಡು, ಆಂಧ್ರ ಕರಾವಳಿಯಲ್ಲಿ ಭಾರೀ ಮಳೆ!
ಈ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಫಖರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಉಮ್ರಿ ಗ್ರಾಮದಲ್ಲಿ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆಯನ್ನು ಹಿಡಿಯಲೆಂದು ಮೇಕೆಯನ್ನ ಬೋನ್‌ನಲ್ಲಿ ಕಟ್ಟಿದ್ದರು. ಈ ಬೋನಿನ ಒಳಗೆ ಕಟ್ಟಿದ್ದ ಮೇಕೆಯನ್ನು ಕದಿಯಲೆಂದು ವ್ಯಕ್ತಿಯೊಬ್ಬ ತಡರಾತ್ರಿ ಬೋನಿನ ಕಡೆಗೆ ಹೋಗಿದ್ದಾನೆ. ಬಳಿಕ ಮೇಕೆಯನ್ನ ಹಿಡಿಯಲು ಬೋನಿನೊಳಗೆ ಪ್ರವೇಶಿಸಿದ್ದಾನೆ. ಅದರ ಒಳಗೆ ಕಾಲಿಟ್ಟ ತಕ್ಷಣ, ಬೋನಿನ ಸ್ವಯಂಚಾಲಿತ ಬಾಗಿಲು ಮುಚ್ಚಿಕೊಂಡಿದೆ. ಇದ್ರಿಂದಾಗಿ ಆತ ಅಲ್ಲೇ ಲಾಕ್ ಆಗಿದ್ದಾನೆ.
ಆತ ಬಾಗಿಲು ತೆರೆಯಲು ಪದೇ ಪದೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಹಲವಾರು ನಿಮಿಷಗಳ ಕಾಲ ಹೆಣಗಾಡಿದ ನಂತರ ಆತ ಮೊಬೈಲ್ ಫೋನ್ ತೆಗೆದುಕೊಂಡು ಸಹಾಯಕ್ಕಾಗಿ ಪರಿಚಯಸ್ಥರಿಗೆ ಕರೆ ಮಾಡಿದ್ದಾನೆ. ಮಾಹಿತಿ ಪಡೆದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ವಲ್ಪ ಸಮಯದ ನಂತರ ಅರಣ್ಯ ಸಿಬ್ಬಂದಿ ಆಗಮಿಸಿ, ಬೋನಿನ ಬಾಗಿಲು ತೆರೆದು ಆತನನ್ನು ಬಿಡಿಸಿದ್ದಾರೆ.

ನೋಡಿರಿ

