ಮಂಚದ ಒಳಗೆ ಪ್ರಿಯಕರ.. ಕೋಣೆಯೊಳಗೆ ಯುವತಿ! – ಹೆಂಡತಿ ಗುಟ್ಟು ಗಿಫ್ಟ್‌ ಸಿಕ್ಕ ಮಂಚದಲ್ಲಿ ರಟ್ಟು!  

ಮಂಚದ ಒಳಗೆ ಪ್ರಿಯಕರ.. ಕೋಣೆಯೊಳಗೆ ಯುವತಿ! – ಹೆಂಡತಿ ಗುಟ್ಟು ಗಿಫ್ಟ್‌ ಸಿಕ್ಕ ಮಂಚದಲ್ಲಿ ರಟ್ಟು!  

ಪ್ರೀತಿಗೆ ಕಣ್ಣಿಲ್ಲ.. ಪ್ರೀತಿ ಕುರುಡು ಅನ್ನೋ ಮಾತಿದೆ. ಒಮ್ಮೆ ಪ್ರೀತಿಯಲ್ಲಿ ಬಿದ್ರೆ ಸಾಕು.. ಮನೆಯಲ್ಲಿ ಪ್ರೀತಿಗೆ ವಿರೋಧ ಇದ್ರೂ ಮದುವೆಯಾಗುತ್ತಾರೆ. ಇನ್ನು ಯುವತಿ ಮನೆಯಲ್ಲಿ ಪ್ರೀತಿಗೆ ನಿರಾಕರಿಸಿದ್ರೆ, ಮನೆಯಲ್ಲಿ ತೋರಿಸಿದವರನ್ನೇ ಮದುವೆಯಾಗುತ್ತಾರೆ. ಇದೀಗ ಇಲ್ಲೊಂದು ಕಡೆ ಯುವತಿ ಮನೆಯವರು ತೋರಿಸಿದ ಯುವಕನನ್ನ ಮದುವೆಯಾಗಿದ್ದಾಳೆ. ಮದುವೆಯಾಗಿ ಗಂಡನ ಮನೆಗೆ ಬರ್ತಿದ್ದಂತೆ ಆಕೆಯ ಪ್ರೇಮ ಪುರಾಣ ರಿವೀಲ್‌ ಆಗಿದೆ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ಸೀರೆ ಕದ್ದಿದ್ದಾಳೆಂದು ಮಹಿಳೆಗೆ ಬೂಟ್ ಕಾಲಿನಲ್ಲಿ ಒದ್ದ ಅಂಗಡಿ ಮಾಲೀಕ!  

ಯುವಕನೊಬ್ಬ ಮದುವೆಯಾಗಿ ಹೆಂಡತಿಯನ್ನ ಮನೆಗೆ ಕರ್ಕೊಂಡು ಬಂದಿದ್ದ.   ವಧುವಿಗೆ ತನ್ನ ಮದುವೆಯಲ್ಲಿ ವರದಕ್ಷಿಣೆ ರೂಪದಲ್ಲಿ ಮಂಚವನ್ನ ಕೊಡಲಾಗಿತ್ತು. ಮದುವೆಯಾದ ದಿನದಿಂದಲೂ ಆಕೆ ಈ ಮಂಚವನ್ನು ಮುಟ್ಟಲು ಯಾರಿಗೂ ಬಿಟ್ಟಿರಲಿಲ್ಲ. ಯಾವಾಗಲೂ ಕೂಡ ಮಂಚದ ಮೇಲಿನ ಹಾಸಿಗೆಯನ್ನು ತಾನೇ ಬದಲಾಯಿಸಿಕೊಂಡು ಅದರ ಮೇಲೆ ಕುಳಿತಿರುತ್ತಿದ್ದಳು. ಆದರೆ, ಒಂದು ದಿನ ಮನೆಯವರ ಮುಂದೆ ಮಹಾ ರಹಸ್ಯ ಬಯಲಾಗಿದೆ. ಮಂಚ ಓಪನ್‌ ಮಾಡಿ ನೋಡಿದ ಗಂಡ ಶಾಕ್‌ ಆಗಿದ್ದಾನೆ. ಮಂಚದ ಒಳಗೆ ಅಡಗಿ ಕುಳಿತಿದ್ದ ವಧುವಿನ ಬಾಯ್‌ಫ್ರೆಂಡ್‌ ಸಿಕ್ಕಿಬಿದ್ದಿದ್ದೇನೆ.  ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಈ ವೀಡಿಯೊವನ್ನು @silent_boy_ap_dhakad_602 ಖಾತೆ ಹಂಚಿಕೊಂಡಿದೆ.  ಈ ವಿಡಿಯೋಗೆ ಮದುವೆಯಲ್ಲಿ ಸಿಕ್ಕ ಹಾಸಿಗೆಯಿಂದ ಗೆಳೆಯ ಎದ್ದ! ಎಂದು   ಕ್ಯಾಪ್ಶನ್‌ ನೀಡಲಾಗಿದೆ. ವೈರಲ್‌ ಆದ ವಿಡಿಯೋದಲ್ಲಿ ಮದುವೆಯ ನಂತರ ತನ್ನ ಅತ್ತೆಯ ಬಳಿಗೆ ಬಂದ ವಧು ಹಾಸಿಕೆಯನ್ನು ಜೋಡಿಸುತ್ತಿದ್ದಳು. ಆ ಸಮಯದಲ್ಲಿ, ಪತಿ ಮತ್ತು ಆಕೆಯ ಅತ್ತೆಯಂದಿರು ಬೆಡ್‌ರೂಮ್‌ಗೆ ಪ್ರವೇಶಿಸಿದರು. ಇದರಿಂದಾಗಿ, ವಧುವಿನ ಮುಖದಲ್ಲಿ ಭಯ ಕೂಡ ಆವರಿಸಿತು. ಆಕೆ ಭಯಭೀತಳಾದಂತೆ ಕಾಣುತ್ತಿದ್ದಳು. ಅದರ ಬೆನ್ನಲ್ಲಿಯೇ ಮದುಮಗ ಮಂಚದ ಮೇಲಿದ್ದ ಬೆಡ್‌ ಹಾಗೂ ಅದರ ಮೇಲಿನ ಬೆಡ್‌ಶೀಟ್‌ಅನ್ನು ತೆಗೆಯುತ್ತಾನೆ. ಬೆಡ್‌ಅನ್ನು ಎತ್ತಿ, ಮಂಚದ ಬಾಕ್ಸ್‌ಅನ್ನು ತೆರೆದಾಗ ಅದರಲ್ಲಿ ಒಬ್ಬ ವ್ಯಕ್ತಿ ಮಲಗಿರುವುದು ಕಂಡಿದೆ. ಆತ ವಧುವಿನ ಬಾಯ್‌ಫ್ರೆಂಡ್‌ ಎನ್ನುವುದು ಗೊತ್ತಾಗಿದೆ.

ಗೊತ್ತಾಗಿದ್ದು ಹೇಗೆ?

ಮಲಗುವ ಕೋಣೆಯನ್ನು ಅನುಮಾನಾಸ್ಪದ ಶಬ್ದ ಬಂದಾಗ ಎಲ್ಲರೂ ವಧುವಿನ ಕೋಣೆಗೆ ಹೊಕ್ಕಿದ್ದಾರೆ. ಆ ಸಮಯಲ್ಲಿ ಯುವತಿ ಕೋಣೆಯಲ್ಲಿ ಒಬ್ಬಂಟಿಯಾಗಿದ್ದಳು. ಇದರಿಂದಾಗಿ ಗಂಡನಿಗೆ ಅನುಮಾನ ಬಂದಿತ್ತು. ಇಡೀ ಕೋಣೆಯವನ್ನು ಸಂಪೂರ್ಣವಾಗಿ ಚೆಕ್‌ ಮಾಡಿದ ಬಳಿಕ ಮಂಚವನ್ನು ಪರಿಶೀಲನೆ ಮಾಡಲಾಗಿದೆ. ಅದರ ಒಳಗೆ ವಧುವಿನ ಬಾಯ್‌ಫ್ರೆಂಡ್‌ ಎದ್ದು ಬಂದಿದ್ದಾನೆ. ಇದರ ನಂತರ, ಅಲ್ಲಿಯ ಜನರು ಸೇರಿ ವಧುವಿನ ಬಾಯ್‌ಫ್ರೆಂಡ್‌ ಗೆ ಸರಿಯಾಗಿ ಧರ್ಮದೇಟು ನೀಡಿದ್ದಾರೆ.

Shwetha M