ವಾಷಿಂಗ್ ಮಷಿನ್ ಸ್ಫೋಟ.. ಕೂದಲೆಳೆ ಅಂತರದಲ್ಲಿ ವ್ಯಕ್ತಿ ಪಾರು – ಅಬ್ಬಬ್ಬಾ ದೃಶ್ಯವೇ ಭಯಾನಕ!

ವಾಷಿಂಗ್ ಮಷಿನ್ ಸ್ಫೋಟ.. ಕೂದಲೆಳೆ ಅಂತರದಲ್ಲಿ ವ್ಯಕ್ತಿ ಪಾರು – ಅಬ್ಬಬ್ಬಾ ದೃಶ್ಯವೇ ಭಯಾನಕ!
ವಾಷಿಂಗ್ ಮಷಿನ್ ಸ್ಫೋಟ.. ಕೂದಲೆಳೆ ಅಂತರದಲ್ಲಿ ವ್ಯಕ್ತಿ ಪಾರು - ಅಬ್ಬಬ್ಬಾ ದೃಶ್ಯವೇ ಭಯಾನಕ!

ಬದುಕು ನೀರ ಮೇಲಿನ ಗುಳ್ಳೆ ಅನ್ನೋ ಮಾತಿದೆ. ಯಾಕಂದ್ರೆ ಜೀವನದಲ್ಲಿ ಯಾವಾಗ ಏನಾಗುತ್ತೆ ಅನ್ನೋದನ್ನ ಊಹಿಸೋಕೂ ಸಾಧ್ಯವಿಲ್ಲ. ಕೆಲವೊಮ್ಮೆ ಸಾವಿನ ಮನೆ ಕದ ತಟ್ಟಿ ಕೆಲವರು ಪವಾಡಸದೃಶ ರೀತಿಯಲ್ಲಿ ಪಾರಾಗುತ್ತಾರೆ. ಇಂಥಾದ್ದೇ ಒಂದು ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ಸದ್ದು ಮಾಡ್ತಿದೆ. ಜಸ್ಟ್ ಎರಡ್ಮೂರು ಸೆಕೆಂಡ್ ಗಳಲ್ಲಿ ಸಾವಿನಿಂದ ಬಚಾವಾಗಿದ್ದಾನೆ.

ಇದನ್ನೂ ಓದಿ : 2030ರ ವೇಳೆಗೆ ಸಾವು ಗೆಲ್ಲುವ ತಂತ್ರಜ್ಞಾನ ಯಶಸ್ವಿಯಾಗುತ್ತಾ – ಭವಿಷ್ಯವಾಣಿ ನಿಜವಾಗುತ್ತಾ?

ಕೆಲವೊಮ್ಮೆ ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಸನ್ನಿವೇಶಗಳು ಎದೆ ಝಲ್ ಅನ್ನಿಸುವಂತಿರುತ್ತವೆ. ಅಪಾಯದಿಂದ ಪಾರಾದವರಿಗೆ ಅದೇ ಪದೇಪದೆ ನೆನಪಾಗುತ್ತಿರುತ್ತದೆ. ಬಹುಶಃ ಈ ವ್ಯಕ್ತಿಯ ಬದುಕಿನಲ್ಲೂ ಈ ಕ್ಷಣವನ್ನು ಎಂದೂ ಮರೆಯಲು ಸಾಧ್ಯವೇ ಇಲ್ಲ. ಯಾಕೆಂದರೆ, ಒಂದೆರಡು ಸೆಕೆಂಡು ತಡವಾಗಿದ್ದರೂ ಅಲ್ಲೇನಾಗುತ್ತಿತ್ತು ಎಂದು ಊಹಿಸುವುದಕ್ಕೂ ಸಾಧ್ಯವಿಲ್ಲ.

ಹೌದು. ಮನೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಸ್ಫೋಟಗೊಂಡು ಅವಾಂತರಗಳು ಸೃಷ್ಟಿಯಾಗುವುದು ಹೊಸದೇನೂ ಅಲ್ಲ. ಇಂತಹ ದೃಶ್ಯಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲೂ ಕಾಣಸಿಗುತ್ತವೆ. ಇದು ಕೂಡಾ ಅದೇ ಸಾಲಿಗೆ ಸೇರುವಂತಹ ದೃಶ್ಯ. ಈ ದೃಶ್ಯವನ್ನು ಕಂಡಾಗ ಒಂದು ಕ್ಷಣ ಎದೆ ನಡುಗಿ ಹೋಗುತ್ತದೆ. ಇದು ವಾಷಿಂಗ್ ಮಷಿನ್ ಸ್ಫೋಟಗೊಳ್ಳುವ ದೃಶ್ಯ. ಜತೆಗೆ, ಈ ಘಟನೆಯಲ್ಲಿ ವ್ಯಕ್ತಿಯೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಟ್ವಿಟ್ಟರ್ ಖಾತೆಯೊಂದರಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಾಷಿಂಗ್ ಮಷಿನ್ ಕಾರ್ಯನಿರ್ವಹಿಸುತ್ತಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಆಗ ಅದೇ ಕೋಣೆಯೊಳಗಿನಿಂದ ವ್ಯಕ್ತಿಯೊಬ್ಬರು ಬರುವುದು ಕಾಣಿಸುತ್ತದೆ. ಹೀಗೆ ಬಂದ ವ್ಯಕ್ತಿ ಬಾಗಿಲು ತೆರೆದು ಹೊರಗೆ ಹೋಗುತ್ತಾರೆ. ಇದಾದ ಕೆಲವೇ ಸೆಕೆಂಡುಗಳಲ್ಲಿ ವಾಷಿಂಗ್ ಮಷಿನ್ ಸ್ಫೋಟಗೊಂಡು ಬೆಂಕಿ ಕೆನ್ನಾಲಿಗೆ ಚಾಚುತ್ತದೆ. ಈ ದೃಶ್ಯವೇ ಭಯಾನಕವಾಗಿದೆ.

ಈ ವಿಡಿಯೋ ಈಗ ಎಲ್ಲರನ್ನೂ ಬೆಚ್ಚಿಬೀಳುವಂತೆ ಮಾಡಿದೆ. ಬೇರೆ ಬೇರೆ ಸೋಶಿಯಲ್ ಮೀಡಿಯಾ ಖಾತೆಗಳಲ್ಲೂ ಈ ವಿಡಿಯೋ ಹರಿದಾಡುತ್ತಿದೆ. ಜತೆಗೆ, ಈ ವಿಡಿಯೋ ಸಾಕಷ್ಟು ವೀಕ್ಷಣೆಯನ್ನೂ ಗಳಿಸಿದೆ. ಈ ದೃಶ್ಯ ಕಂಡ ನೆಟ್ಟಿಗರು ಅಚ್ಚರಿ, ಆಘಾತ ವ್ಯಕ್ತಪಡಿಸಿದ್ದಾರೆ. ಜತೆಗೆ, ಈ ವ್ಯಕ್ತಿ ಅಪಾಯದಿಂದ ಪಾರಾಗಿದ್ದಕ್ಕೆ ಸಮಾಧಾನ ವ್ಯಕ್ತಪಡಿಸಿದ್ದಾರೆ.

suddiyaana