ಬೈಕ್ ಓಡಿಸುವಾಗ ಏನೋ ಸಪ್ಪಳ ಬಂತೆಂದು ಹೆಲ್ಮೆಟ್‌ ನೋಡಿದವನಿಗೆ ಶಾಕ್‌! –  ಹೆಲ್ಮೆಟ್‌ ಒಳಗೆ ಬೆಚ್ಚಗೆ ಕುಳಿತಿದ್ದ ನಾಗಪ್ಪ!

ಬೈಕ್ ಓಡಿಸುವಾಗ ಏನೋ ಸಪ್ಪಳ ಬಂತೆಂದು ಹೆಲ್ಮೆಟ್‌ ನೋಡಿದವನಿಗೆ ಶಾಕ್‌! –  ಹೆಲ್ಮೆಟ್‌ ಒಳಗೆ ಬೆಚ್ಚಗೆ ಕುಳಿತಿದ್ದ ನಾಗಪ್ಪ!

ನಮ್ಮ ದೈನಂದಿನ ಕಾರ್ಯಚಟುವಟಿಕೆಯಲ್ಲಿ ನಾವು ಸಾಕಷ್ಟು ವಿಷಯಗಳ ಬಗ್ಗೆ ಅಷ್ಟಾಗಿ ಗಮನ ಹರಿಸೋದಿಲ್ಲ. ಎಲ್ಲಿಗಾದರೂ ಹೋಗಿ ಬಂದಾಗ ಶೂ, ಹೆಲ್ಮೆಟ್ ಅನ್ನು ಮನೆ ಹೊರಗೆ ಬಿಟ್ಟು ಹೋಗುತ್ತೇವೆ. ಆಚೆ ಹೋಗುವಾಗ ಕೂಡ ಶೂ ಅಥವಾ ಹೆಲ್ಮೆಟ್‌ ನ ಒಳಭಾಗವನ್ನು ಒಂದು ಕ್ಷಣವೂ ಕಣ್ಣಾಯಿಸುವುದಿಲ್ಲ. ಹೀಗೆ ಮಾಡುವುದು ಎಷ್ಟು ಅಪಾಯಕಾರಿ ಎಂಬುದು ವೈರಲ್ ಆದ ವಿಡಿಯೋದಿಂದ ಗೊತ್ತಾಗುತ್ತದೆ. ಇದರಲ್ಲಿರುವ ದೃಶ್ಯವನ್ನು ನೋಡುವಾಗ ಎದೆ ಧಗ್ ಅನ್ನೋದು ಗ್ಯಾರಂಟಿ.

ಹಾವುಗಳ ರಕ್ತ ತಣ್ಣಗಿರುತ್ತದೆ ಎಂದು ವಿಜ್ಞಾನ ಹೇಳುತ್ತದೆ. ಹಾಗಾಗಿ ಅವು ಬೆಚ್ಚಗಿರುವ ಸ್ಥಳಗಳನ್ನು ಆಯ್ಕೆಮಾಡಿಕೊಳ್ಳುತ್ತವೆ. ಮನೆ ಸಂದಿ ಒಳಗೆ, ಕಾರಿನೊಳಗೆ, ಸ್ಕೂಟರ್‌ನೊಳಗೆ ಹಾವು ಅಡಗಿ ಕುಳಿತುಕೊಳ್ಳುವುದು ಹೊಸದೇನೂ ಅಲ್ಲ. ಸಾಕಷ್ಟು ಸಲ ಇಂತಹ ಘಟನೆಗಳು ನಡೆದಿವೆ. ಆದರೆ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋವೊಂದು ಭಾರಿ ವೈರಲ್‌ ಆಗುತ್ತಿದೆ. ಈ ವಿಡಿಯೋ ಎಂತವರನ್ನು ಬೆಚ್ಚಿ ಬೀಳಿಸುವಂತಿದೆ. ನಾಗರ ಹಾವೊಂದು ಹೆಲ್ಮೆಟ್​ ಒಳಗೆ ಸೇರಿಕೊಂಡಿದೆ.

ಇದನ್ನೂ ಓದಿ:ಬೋರ್‌ವೆಲ್‌ ನಲ್ಲಿ ನೀರಿನ ಬದಲು ಹಾಲು! – ಬಿಳಿ ದ್ರವ ಸಂಗ್ರಹಿಸಲು ಮುಗಿಬಿದ್ದ ಜನ!

ಹೌದು, ವ್ಯಕ್ತಿಯೊಬ್ಬರು ತಲೆಗೆ ಹೆಲ್ಮೆಟ್​ ಹಾಕದೆ ಗಾಡಿಯಲ್ಲಿ ಹೆಲ್ಮೆಟ್​ ಇಟ್ಟುಕೊಂಡು ಬೈಕ್​ ಅನ್ನು ಚಲಾಯಿಸುತ್ತಿದ್ದರು. ತುಂಬಾ ಹೊತ್ತಿನಿಂದ ಏನೋ ಸಪ್ಪಳಬರುತ್ತಿದೆಯಲ್ಲಾ ಎಲ್ಲಿಂದ ಎಂದು ಆಲೋಚನೆ ಮಾಡಿದ್ದಾರೆ. ಆಗ ಬೈಕ್ ಮುಂದೆ ಇಟ್ಟಿದ್ದ ಹೆಲ್ಮೆಟ್​ ನೋಡಿದಾಗ ಹಾವು ಹೆಲ್ಮೆಟ್​ನಿಂದ ಇಣುಕಿದೆ. ಕೂಡಲೇ ಬೈಕ್‌ ನಿಲ್ಲಿಸಿ ಹೆಲ್ಮೆಟ್‌ ಅನ್ನು ಕೆಳಗೆ ಇಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗಿದೆ.

ಈ ವೀಡಿಯೋವನ್ನು ಸಾಮಾಜಿಕ ಜಾಲತಾಣ Instagram ನಲ್ಲಿ ಹಂಚಿಕೊಂಡಿದ್ದಾರೆ . ಇದನ್ನು d_shrestha10 ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವೇಳೆ ರಸ್ತೆಯಲ್ಲಿ ಹೆಲ್ಮೆಟ್ ಎಸೆದಿರುವುದು ಕಂಡು ಬಂದಿದೆ. ಅದರೊಳಗಿಂದ ಹಾವೊಂದು ಇಣುಕಿ ನೋಡುತ್ತಿತ್ತು. ಅವನ ಹೆಲ್ಮೆಟ್‌ನಲ್ಲಿ ಹಾವು ಇದೆ ಎಂದು ಯಾರೋ ಇದ್ದಕ್ಕಿದ್ದಂತೆ ಅರಿತು ಅದನ್ನು ರಸ್ತೆಗೆ ಎಸೆದರಂತೆ. ಒಂದು ವೇಳೆ ಬೈಕ್‌ ಚಾಲಕ ಹೆಲ್ಮೆಟ್‌ ಪರೀಕ್ಷಿಸದೇ ಧರಿಸುತ್ತಿದ್ದರೆ ಆತ ಹಾವಿನ ಕಡಿತಕ್ಕೆ ಒಳಗಾಗುವ ಸಾಧ್ಯತೆ ಇತ್ತು. ಸದ್ಯ ಬೈಕ್‌ ಸವಾರ ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾನೆ.

 

View this post on Instagram

 

A post shared by Dev Shrestha (@d_shrestha10)

ಇದೇನೇ ಇರಲಿ ನೀವು ಮನೆಯಲ್ಲಿ ಶೂ ಧರಿಸುವಾಗ, ಹೆಲ್ಮೆಟ್​ ಹಾಕಿಕೊಳ್ಳುವಾಗ, ಶೂ ರ್ಯಾಕ್​ನಲ್ಲಿ, ಮನೆಯ ಮೂಲೆಗಳನ್ನು ಪದೇ ಪದೇ ಚೆಕ್ ಮಾಡುತ್ತಿರುವುದು ಒಳಿತು. ಕೇವಲ ಹಾವಲ್ಲ ಚೇಳು ಸೇರಿದಂತೆ ಯಾವುದೇ ವಿಷಜಂತುಗಳ ಕಡಿತದಿಂದ ನೀವು ತಪ್ಪಿಸಿಕೊಳ್ಳಬಹುದು.

Shwetha M