ಮರದಲ್ಲಿ ಅಗೆದಷ್ಟು ಬರ್ತಿದೆ ನಾಣ್ಯಗಳು! – ಹಣ ಬಿಡುವ ಮರ ಇರೋದೆಲ್ಲಿ?

ಮರದಲ್ಲಿ ಅಗೆದಷ್ಟು ಬರ್ತಿದೆ ನಾಣ್ಯಗಳು! – ಹಣ ಬಿಡುವ ಮರ ಇರೋದೆಲ್ಲಿ?

ಯಾರಾದ್ರೂ ಪದೇ ಪದೆ ಸಾಲ ‌ಕೇಳಿದ್ರೆ ಹಣ ಏನು ಮರದಲ್ಲಿ ಬೆಳೆಯುತ್ತಾ ಅಂತ ಪ್ರಶ್ನೆ ಮಾಡ್ತಿರುತ್ತಾರೆ. ಜೊತೆಗೆ ಯಾರಾದ್ರೂ ಸಿಕ್ಕಾಪಟ್ಟೆ ದುಡ್ಡು ಮಾಡಿದ್ರೂ ಇವ್ರು ಮರದಲ್ಲಿ ದುಡ್ಡು ಬೆಳೀತಿರಬೇಕು ಅಂತ ತಮಾಷೆ ಮಾಡ್ತಾರೆ. ಆದ್ರೀಗ ನಿಜಕ್ಕೂ ಮರವೊಂದರಲ್ಲಿ ನಾಣ್ಯ ಸಿಗುತ್ತಿದೆ. ಜನರು ಮರವೊಂದರಲ್ಲಿ ನಾಣ್ಯಗಳನ್ನು ಅಗೆದು ತೆಗೆಯುತ್ತಿರುವ ದೃಶ್ಯವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ಬಿಜೆಪಿ ಭದ್ರಕೋಟೆಯಲ್ಲಿ ಕಮಲ ಅರಳುತ್ತಾ ಅಥವಾ ಕೈ ಮೇಲಾಗುತ್ತಾ ? – ಕರಾವಳಿಯಲ್ಲಿ ಬಿಜೆಪಿಗೆ ಭಯ ಯಾಕೆ?

ಸಾಮಾನ್ಯವಾಗಿ ಮನೆಗಳಲ್ಲಿ ಮನಿ ಪ್ಲಾಂಟ್‌ ಬೆಳೆಯುತ್ತಾರೆ. ಮನೆಯಲ್ಲಿ ದುಡ್ಡು ಚೆನ್ನಾಗಿ ಓಡಾಡ್ತಿರಲಿ ಅಂತ ವಾಸ್ತು ಪ್ರಕಾರ ಈ ಮನಿ ಪ್ಲಾಂಟ್ ಬೆಳೀತಾರೆ. ಅದ್ರೆ ಅದರಲ್ಲೇನು ದುಡ್ಡು ಬೆಳೆಯಲ್ಲ.  ಆದರೆ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮರದಲ್ಲಿ ನಾಣ್ಯಗಳು ಸಿಗುವ ವಿಡಿಯೋ ನಿಜನಾ ಎಂಬ ಕುತೂಹಲ ಮೂಡಿಸಿದೆ. ಈ ವೀಡಿಯೋ ಅಪ್‌ಲೋಡ್ ಮಾಡಿದವರು,‌ ಮೊದಲು ಒಬ್ಬ ಮರವನ್ನು ಕೆತ್ತಿ ನಾಣ್ಯ ತೆಗೆಯುವುದನ್ನು ತೋರಿಸಿ, ನಂತರ ಒಬ್ನೇ ಅಲ್ಲ ಇಡೀ ಕುಟುಂಬವೇ ಮರದಿಂದ ದುಡ್ಡು ಕೀಳುತ್ತಿರುವುದನ್ನು ತೋರಿಸಿದ್ದಾರೆ.

ಈ ವಿಡಿಯೋದಲ್ಲಿ ಬಿಹಾರದ ರಾಜಗೀರ್ ನಲ್ಲಿರುವ ಹಣದ ಮರ ಎಂದು ಟ್ಯಾಗ್ ಮಾಡಲಾಗಿದೆ. ಇಷ್ಟಕ್ಕೂ ಇಂತ ಮರಗಳು ಧಾರ್ಮಿಕ ನಂಬಿಕೆಯ‌ ಮರಗಳು ಅಂತ  ಗೊತ್ತಾಗಿದೆ. ಅಂದ್ರೆ ನೂರಾರು ವರ್ಷಗಳ ಹಿಂದಿನಿಂದಲೂ ಇಂತಹ ಮರಗಳಿಗೆ ಜನರು ನಾಣ್ಯ ಎಸೆಯುತ್ತಾ ಬಂದಿರುತ್ತಾರೆ. ತಾವು ಬಯಸಿದ್ದು ಸಿಗುತ್ತದೆ, ಇಷ್ಟಾರ್ಥ ಸಿದ್ದಿಸುತ್ತದೆ ಎಂಬ ಕಾರಣಕ್ಕೆ ಇಲ್ಲಿ ಹಣವನ್ನು ಮರಕ್ಕೆ ಎಸೆಯುತ್ತಾರೆ. ನೂರಾರು ವರ್ಷಗಳಿಂದ ಮರಕ್ಕೆ ನಾಣ್ಯಗಳನ್ನು ಎಸೆದಿರೋದ್ರಿಂದ ಮರದ‌ ತುಂಬೆಲ್ಲಾ ನಾಣ್ಯವೇ ತುಂಬಿರುತ್ತೆ. ಹೀಗಾಗಿಯೇ ಬಿಹಾರದ ಮರದಲ್ಲೂ ದುಡ್ಡು ಸಿಕ್ಕಿರಬೇಕು.

ನಾಣ್ಯಗಳ ಮರದ ವಿಡಿಯೋ ವೀಕ್ಷಿಸಿದ ಒಬ್ಬೊಬ್ಬರು ಒಂದೊಂದು ಕಾಮೆಂಟ್‌ ಮಾಡ್ತಿದ್ದಾರೆ. ಮರದ ಮೇಲೆ ಹಣ ಬೆಳೆಯುತ್ತೆ ಅಂತ ಓದಿದ್ದೆ, ಆದ್ರೆ ಇಂದು ನೋಡುತ್ತಿದ್ದೇನೆಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು ಕೊನೆಗೂ ರಿಯಲ್‌ ಮನಿ ಪ್ಲಾಂಟ್‌ ಸಿಕ್ಕಿಬಿಡ್ತು ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಹಾಗಂತ ಭಾರತದಲ್ಲಿ ಮಾತ್ರ ಇಂತ ಮರ ಇರೋದಲ್ಲ.. ಇಂಗ್ಲೆಂಡ್‌ನ ಉತ್ತರ ವೇಲ್ಸ್‌ನ ಪೋರ್ಟ್ ಮೇರಿಯನ್‌ ಎಂಬ ಸ್ಥಳದಲ್ಲೂ ನಾಣ್ಯಗಳಿರುವ ಮರಗಳನ್ನು ನೋಡಬಹುದು. ಪ್ರಕೃತಿಯನ್ನು ಆರಾಧಿಸುವ ಪದ್ಧತಿಯಲ್ಲಿ ಮರಗಳಿಗೆ ಹೀಗೆ ನಾಣ್ಯಗಳನ್ನುಎಸೆಯುವ ಪದ್ಧತಿ ಇದೆ. ಆರೋಗ್ಯ ವೃದ್ಧಿ, ಅದೃಷ್ಟ ಬರಲಿ ಎಂದು ಅಲ್ಲಿನ ಜನ ಹೀಗೆ ಮರಕ್ಕೆ ನಾಣ್ಯಗಳನ್ನು ಎಸೆಯುತ್ತಾರೆ.

Shwetha M