ಎಂಆರ್ ಐ ಸ್ಕ್ಯಾನ್ ವೇಳೆ ಗುಂಡೇಟು.. ವಕೀಲ ಸಾವು – ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣನಾ..!?

ಎಂಆರ್ ಐ ಸ್ಕ್ಯಾನ್ ವೇಳೆ ಗುಂಡೇಟು.. ವಕೀಲ ಸಾವು – ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣನಾ..!?

ಆಧುನಿಕ ವೈದ್ಯಕೀಯ ತಂತ್ರಜ್ಞಾನ ಮನುಷ್ಯನ ಪಾಲಿಗೆ ಆಪದ್ಬಾಂಧವ. ಆದರೆ ಸರಿಯಾದ ಕಾಳಜಿ ತೆಗೆದುಕೊಳ್ಳದಿದ್ದರೆ ಅದೇ ತಂತ್ರಜ್ಞಾನ ನಮ್ಮ ಪ್ರಾಣಕ್ಕೆ ಕಂಟಕವಾಗಬಹುದು ಅನ್ನೋದಕ್ಕೆ ಬ್ರೆಜಿಲ್ ನಲ್ಲಿ ನಡೆದ ಒಂದು ಘಟನೆಯೇ ಉದಾಹರಣೆಯಾಗಿದೆ.

ಬ್ರೆಜಿಲ್ ನಲ್ಲಿ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (MRI ) ಯಂತ್ರವೂ ಒಬ್ಬ ವ್ಯಕ್ತಿಯ ಸಾವಿಗೆ ಕಾರಣವಾಗಿದೆ. ಆದರೆ ಅದಕ್ಕೆ ಕಾರಣ ಆತನ ಬಳಿ ಇದ್ದ ಕೈ ಬಂದೂಕು. ಎಂಆರ್ ಐ ಯಂತ್ರವು ತನ್ನ ಕಾಂತೀಯ ಕ್ಷೇತ್ರದ ಕಾರಣದಿಂದ ಕೈ ಬಂದೂಕನ್ನ ಪ್ರಚೋದಿಸಿ ಗನ್​ನಿಂದ ಮಾಲೀಕನ ಹೊಟ್ಟೆಗೆ ಗುಂಡು ಹಾರಲು ಕಾರಣವಾಗಿದೆ. ಜೀವನ್ಮರಣದ ಹೋರಾಟದ ನಂತರವೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವ್ಯಕ್ತಿಯು ಸುರಕ್ಷಿತ ಕ್ರಮಗಳನ್ನ ನಿರ್ಲಕ್ಷಿಸಿದ್ದನೋ ಅಥವಾ MRI ಯಂತ್ರದ ಬಳಿ ಬಂದಾಗ ಗನ್ ಹೊರಗಿಡಲು ಮರೆತಿದ್ದನೋ ಎಂದು ತಿಳಿದಿಲ್ಲ.

ಇದನ್ನೂ ಓದಿ : 11 ಮಕ್ಕಳಾಗಿದ್ದಕ್ಕೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಪತ್ನಿ – ಸಿಟ್ಟಿಗೆದ್ದ ಪತಿರಾಯ ಮಾಡಿದ್ದೇನು ?

ಲಿಯಾಂಡ್ರೊ ಮಥಿಯಾಸ್ ಡಿ ನೋವಾಸ್ ಎಂಬ 40 ವರ್ಷದ ವ್ಯಕ್ತಿ ವಕೀಲರಾಗಿದ್ರು. ಅವರು ಜನವರಿ 16 ರಂದು MRI ಸ್ಕ್ಯಾನ್‌ಗಾಗಿ ಬ್ರೆಜಿಲ್‌ನ ಸಾವೊ ಪಾಲೊದಲ್ಲಿರುವ ಲ್ಯಾಬೊರೇಟರಿಗೆ ತನ್ನ ತಾಯಿಯನ್ನು ಕರೆದೊಯ್ದಿದ್ದರು. ಲ್ಯಾಬೊರೇಟರಿ ಸಿಬ್ಬಂದಿ ಪ್ರಕಾರ ಎಲ್ಲಾ ಲೋಹೀಯ ವಸ್ತುಗಳನ್ನ ಸ್ಕ್ಯಾನಿಂಗ್ ಕೊಠಡಿಯ ಹೊರಗೆ ಬಿಡಲು ತಿಳಿಸಲಾಗಿತ್ತು. ಪರೀಕ್ಷಾ ಕೊಠಡಿಗೆ ಪ್ರವೇಶಿಸುವ ಮೊದಲು ಪಾಲಿಸಬೇಕಾಗಿರುವ ಪ್ರೊಟೋಕಾಲ್ ಗಳ ಕುರಿತು ಸೂಚನೆ ನೀಡಲಾಗಿತ್ತು. ಹಾಗಿದ್ದರೂ ವ್ಯಕ್ತಿಯ ನಿರ್ಲಕ್ಷ್ಯದಿಂದ ಈ ದುರ್ಘಟನೆ ನಡೆಯಿತಾ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಹೊರ ಬಿದ್ದಿಲ್ಲ.

MRI ಯಂತ್ರವು ಮನುಷ್ಯನ ಆಂತರಿಕ ಅಂಗಗಳನ್ನು ನಿಖರವಾಗಿ ಚಿತ್ರಿಸಲು ಕಾಂತೀಯ ಕ್ಷೇತ್ರವನ್ನ ಉತ್ಪಾದಿಸುತ್ತದೆ. ಈ ಕಾಂತೀಯ ಕ್ಷೇತ್ರವು ಲೋಹೀಯ ವಸ್ತುಗಳನ್ನು ಅದರ ಕಡೆಗೆ ಎಳೆಯಲು ಅಥವಾ ಕನಿಷ್ಠ ಅವುಗಳ ಮೇಲೆ ಕಾಂತೀಯ ಪ್ರಭಾವವನ್ನ ಉಂಟುಮಾಡುವ ಸಾಮರ್ಥ್ಯವನ್ನ ಹೊಂದಿರುತ್ತದೆ. ಹಾಗಾಗಿ ವ್ಯಕ್ತಿಯ ಬಳಿಯಿದ್ದ ಗನ್ MRI ಯಂತ್ರದ ಕಾಂತೀಯ ಕ್ಷೇತ್ರದಿಂದ ಪ್ರಭಾವಗೊಂಡು ಗುಂಡು ಸಿಡಿದು ಸಾವನ್ನಪ್ಪಿದ್ದಾನೆ.

suddiyaana