ವಿಚ್ಛೇದನ ಕೇಳಿದ ಪತ್ನಿ ಬಳಿ ತನ್ನ ಕಿಡ್ನಿ ವಾಪಸ್ ಕೊಡು ಅಂತಾ ಕೇಳಿದ ಪತಿರಾಯ!

ವಿಚ್ಛೇದನ ಕೇಳಿದ ಪತ್ನಿ ಬಳಿ ತನ್ನ ಕಿಡ್ನಿ ವಾಪಸ್ ಕೊಡು ಅಂತಾ ಕೇಳಿದ ಪತಿರಾಯ!

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಮಾತಿದೆ. ಆದ್ರೆ ಇತ್ತೀಚೆಗೆ ಸಣ್ಣ ಪುಟ್ಟ ಜಗಳಕ್ಕೂ ವಿಚ್ಛೇದನ ಪಡೆಯುವವರಿದ್ದಾರೆ. ಇದೀಗ ಇಲ್ಲೊಂದು ದಂಪತಿ ವಿಚ್ಛೇದನ ಪಡೆಯಲು ಮುಂದಾಗಿದ್ದು, ವಿಚ್ಛೇದನದ ವೇಳೆ ‘ನನ್ನ ಕಿಡ್ನಿಯನ್ನು ನನಗೆ ಮರಳಿಸಲಿ’ಅಂತಾ ಪತಿರಾಯ ತನ್ನ ಪತ್ನಿ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದಾನೆ.

ಇದನ್ನೂ ಓದಿ: ಕೊಟ್ಟ ಮಾತನ್ನು ಉಳಿಸಿಕೊಂಡ ಡ್ರೋನ್ ಪ್ರತಾಪ್ – ರನ್ನರ್ ಅಪ್ ಆಗಿ ಗೆದ್ದಿದ್ದ ಎಲೆಕ್ಟ್ರಿಕ್ ಬೈಕ್ ಬಡ ಯುವಕನಿಗೆ ದಾನ

ಅಚ್ಚರಿಯಾದ್ರೂ ಸತ್ಯ. ಈ ಘಟನೆ ಅಮೆರಿಕದಲ್ಲಿ ನಡೆದಿದೆ. ಸುಮಾರು 2001 ರಲ್ಲಿ ಪತ್ನಿಯ ಎರಡು ಕಿಡ್ನಿಯೂ ವಿಫಲವಾಗಿತ್ತು. ಈ ವಿಚಾರ ತಿಳಿದು ಆಕೆಯನ್ನು  ಬದುಕುಳಿಸುವ ಸಲುವಾಗಿ 2001 ರಲ್ಲಿ ಪತಿ ತನ್ನ ಒಂದು ಕಿಡ್ನಿಯನ್ನು ದಾನ ಮಾಡಿದ್ದ. ಆದರೆ ವರ್ಷಗಳ ನಂತರ ಇಬರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಬಂದ ಕಾರಣ ವಿಚ್ಛೇದನ ಪಡೆದುಕೊಳ್ಳಲು ಪತ್ನಿ ಕೋರ್ಟ್​​​​ ಮೆಟ್ಟಿಲೇರಿದ್ದಾಳೆ. ಇದರಿಂದ ಕೋಪಗೊಂಡ ಪತಿ ಕಿಡ್ನಿ ವಾಪಸ್ ಕೇಳಿದ್ದಾನೆ. ಇದಲ್ಲದೆ ಕಿಡ್ನಿ ವಾಪಸ್​​ ಕೊಡಲು ಆಗದ್ದಿದ್ದಲ್ಲಿ 1.2 ಮಿಲಿಯನ್ ಪೌಂಡ್(12.56ಕೋಟಿ ರೂ.) ಹಣ ನೀಡಬೇಕಾಗಿ ಬೇಡಿಕೆಯಿಟ್ಟಿದ್ದಾನೆ.

ಡೈಲಿ ಸ್ಟಾರ್ ವರದಿಯ ಪ್ರಕಾರ, 1990ರಲ್ಲಿ ರಿಚರ್ಡ್ ಬಟಿಸ್ಟಾ(ಪತಿ) ಮತ್ತು ಡೊನ್ನೆಲ್ (ಪತ್ನಿ) ವಿವಾಹವಾಗಿದ್ದರು. ಇವರಿಗೆ ಮೂರು ಮಕ್ಕಳಿದ್ದಾರೆ. ಆದರೆ 2001 ರಲ್ಲಿ, ಡೊನ್ನೆಲ್​​ಗೆ ತೀವ್ರ ಅನಾರೋಗ್ಯ ಕಾಡಿದೆ. ಕಡೆಗೆ ಆಕೆಯ ಎರಡು ಕಿಡ್ನಿಯೂ ವಿಫಲವಾಗಿದೆ ಎಂದು ವೈದ್ಯರು ಘೋಷಿಸಿದ್ದರು. ಈ ವೇಳೆ ತನ್ನ ಪತ್ನಿಯ ಜೀವ ಉಳಿಸಲು ಬಟಿಸ್ಟಾ ಮುಂದಾಗಿದ್ದು, ತನ್ನ ಒಂದು ಕಿಡ್ನಿಯನ್ನು ದಾನ ಮಾಡಿದ್ದಾನೆ. ಆದರೆ ಇದಾದ ಕೆಲವೇ ವರ್ಷಗಳ ಬಳಿಕ ಪತ್ನಿ ಡೊನ್ನೆಲ್ ವಿಚ್ಛೇದನ ಪಡೆಯಲು ಕೋರ್ಟ್​​​​ಗೆ ಅರ್ಜಿ ಸಲ್ಲಿಸಿದ್ದಳು. ಇದರಿಂದ ಸಾಕಷ್ಟು ನೋವುಂಡ ಪತಿ ನನ್ನ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಆರೋಪಿಸಿದ್ದಾನೆ. ಅಲ್ಲದೆ ಕಿಡ್ನಿ ವಾಪಸ್ ಇಲ್ಲವೇ ಹಣ ಕೊಡಿ ಎಂದು ಹೇಳಿದ್ದಾನೆ.

ಆದರೆ ರಿಚರ್ಡ್ ಗೆ ನ್ಯಾಯ ಸಿಗಲಿಲ್ಲ. ಕಿಡ್ನಿಯನ್ನು ವಾಪಸ್ ನೀಡಲು ಸಾಧ್ಯವಿಲ್ಲ ಎಂದು ವೈದ್ಯಕೀಯ ತಜ್ಞರು ಸ್ಪಷ್ಟಪಡಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕಿಡ್ನಿ ವಾಪಸ್ ಕೊಡಲು ಸಾಧ್ಯವಿಲ್ಲ . ಡೊನ್ನೆಲ್ ತನ್ನ ಮೂತ್ರಪಿಂಡವನ್ನು ಹಿಂದಿರುಗಿಸಲು ಎರಡನೇ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಇದರಿಂದ ಅವರ ಪ್ರಾಣಕ್ಕೂ ಅಪಾಯವಿದೆ. ಆದ್ದರಿಂದ ಮೂತ್ರಪಿಂಡವನ್ನು ಮರಳಿ ನೀಡಲು ಸಾಧ್ಯವಿಲ್ಲ ಎಂದು ತಜ್ಞರ ಹೇಳಿಯನ್ನು ಆಧರಿಸಿ ಕೋರ್ಟ್​ ತೀರ್ಪು ನೀಡಿದೆ.

Shwetha M