ಇಳಿಬೇಕು… ಬಾಗಿಲು ತೆರೆಯಿರಿ ಪ್ಲೀಸ್… ಸೆಲ್ಫಿ ತೆಗೆಯಲು ಹೋಗಿ ಪೇಚಿಗೆ ಸಿಲುಕಿದ
ಜಗತ್ತಲ್ಲಿ ಸೆಲ್ಫಿ ಪ್ರಿಯರಿಗೇನು ಕಡಿಮೆಯಿಲ್ಲ. ಕೂತಲ್ಲಿ, ನಿಂತಲ್ಲಿ, ಹೋದಲ್ಲಿ, ಬಂದಲ್ಲಿ ಎಲ್ಲಾ ಕಡೆ ಕೆಲವರು ಸೆಲ್ಫಿ ತೆಗೆದುಕೊಳ್ಳುತ್ತಾರೆ. ಈ ಸೆಲ್ಫಿ ಗೀಳು ವಯಸ್ಕರನ್ನು ಬಿಟ್ಟಿಲ್ಲ. ಇಲ್ಲೊಬ್ಬ ವ್ಯಕ್ತಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪೇಚಿಗೆ ಸಿಲುಕಿದ್ದಾನೆ.
ವಿಶಾಖಪಟ್ಟಣಂ ಮತ್ತು ಸಿಕಂದರಾಬಾದ್ ಗೆ ಪ್ರಯಾಣಿಸುವ ವಂದೇ ಭಾರತ್ ರೈಲು ನಿಲ್ದಾಣದಲ್ಲಿ ನಿಂತಿತ್ತು. ಈ ವೇಳೆ ವ್ಯಕ್ತಿಯೊಬ್ಬ ಸೆಲ್ಫಿ ತೆಗೆಯಲು ರೈಲಿನ ಒಳಗೆ ಹೋಗಿದ್ದಾನೆ. ಒಂದೆರಡು ಫೋಟೋ ಕ್ಲಿಕ್ಕಿಸುತ್ತಿರುವಾಗ ರೈಲಿನ ಬಾಗಿಲು ಬಂದ್ ಆಗಿದೆ. ಅಲ್ಲದೇ ಕ್ಷಣಮಾತ್ರದಲ್ಲೇ ರೈಲು ಮುಂದಕ್ಕೆ ಚಲಿಸಿದೆ. ಬಳಿಕ ಆತ ರೈಲ್ವೇ ಅಧಿಕಾರಿಗಳೊಂದಿಗೆ ಅಳಲನ್ನು ತೋಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಪ್ರಿಯತಮನನ್ನು ಬಿಟ್ಟು ಬೆಡ್ ಶೀಟ್ ನೇ ಮದುವೆಯಾದ ಯುವತಿ! – ಹಿಂಗೂ ಆಗುತ್ತಾ?
ರಾಜಮಂಡ್ರಿಯಲ್ಲಿ ರೈಲು ಹತ್ತಿದ ವ್ಯಕ್ತಿ ಏನು ಮಾಡಲಾಗದೇ ಮುಂದಿನ ನಿಲ್ದಾಣದಲ್ಲಿ ಇಳಿದು ಮತ್ತೆ ರಾಜಮಂಡ್ರಿಗೆ ವಾಪಸ್ ಆಗಿದ್ದಾನೆ. ಈ ವೇಳೆ ವಿಧಿಯಿಲ್ಲದೆ ಟಿಕೆಟ್ ಖರೀದಿಸಿ ಪ್ರಯಾಣಿಸಿದ್ದಾನೆ ಎಂದು ಹೇಳಲಾಗುತ್ತಿದೆ.
Crazy selfie 🤳 enthusiasm 😄😄
Doors closed, he had to travel 200 kms due to selfieA suggestion to @SCRailwayIndia @RailMinIndia; implementing Public Address system about doors closing in xx time could be a helpful feature for actually boarding passengers with luggage, etc. pic.twitter.com/obuidVjXia
— Vijay Gopal (@VijayGopal_) January 17, 2023