4 ಸಾವಿರ ರೂ.ಗೆ ಖರೀದಿಸಿದ ಕುರ್ಚಿ 82 ಲಕ್ಷಕ್ಕೆ ಮಾರಾಟ! – ಇದರ ವಿಶೇಷತೆ ಕೇಳಿ ಮಾಲೀಕನೇ ಶಾಕ್‌!

4 ಸಾವಿರ ರೂ.ಗೆ ಖರೀದಿಸಿದ ಕುರ್ಚಿ 82 ಲಕ್ಷಕ್ಕೆ ಮಾರಾಟ! – ಇದರ ವಿಶೇಷತೆ ಕೇಳಿ ಮಾಲೀಕನೇ ಶಾಕ್‌!

ನಮ್ಮ ದೈನಂದಿನ ಜೀವನದಲ್ಲಿ ಸಾಮಾನ್ಯವಾಗಿರುವ ಬಹಳಷ್ಟು ವಸ್ತುಗಳು ಅಮೂಲ್ಯವಾದ ರತ್ನಗಳ ಬೆಲೆಗೆ ಮಾರಾಟವಾಗುತ್ತಿರುವುದನ್ನು ನಾವು ಇಂಟರ್‌ನೆಟ್‌ನಲ್ಲಿ ಆಗಾಗ ನೋಡುತ್ತಿರುತ್ತೇವೆ. ಹಳೆ ಚಪ್ಪಲಿ, ಹಳೆಯ ಹರಿದು ಹೋದ ಬಟ್ಟೆ ಮುಂತಾದವುಗಳು ಲಕ್ಷಾಂತರ ರೂಪಾಯಿಗೆ ಮಾರಾಟವಾಗಿರುವುದನ್ನು ಕೇಳಿರುತ್ತೇವೆ. ಇಲ್ಲೊಬ್ಬ ವ್ಯಕ್ತಿಗೆ ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಏನೋ ಹುಡುಕಾಡುತ್ತಿರುವಾಗ ಹಳೇ ಕುರ್ಚಿಯೊಂದು ಕಣ್ಣಿಗೆ ಬಿದ್ದಿದೆ. ವಿಶೇಷವಾಗಿ ಕಂಡ ಈ ಕುರ್ಚಿಯ ಬೆಲೆ 4,000 ರೂಪಾಯಿ ಎಂದು ಉಲ್ಲೇಖಿಸಲಾಗಿತ್ತು. ಹಿಂದೂ ಮುಂದೂ ನೋಡದೆ ಈ ಕುರ್ಚಿ ಖರೀಸಿದ. ಬಳಿಕ ಕುರ್ಚಿಯನ್ನು ಲಕ್ಷಾಂತರ ರೂಪಾಯಿ ಬೆಲೆಗೆ ಮಾರಾಟ ಮಾಡಿದ್ದಾನೆ!

ಇದನ್ನೂ ಓದಿ: 25 ವರ್ಷಗಳ ಹಳೇ ಶೂ 18 ಕೋಟಿ ರೂ.  ಗೆ ಮಾರಾಟ! – ಏನಿದರ ವಿಶೇಷತೆ?

ಸಾಮಾನ್ಯವಾಗಿ ಯಾವುದೇ ವಸ್ತುಗಳನ್ನು ಖರೀಸಿದರೆ ಅದನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತೇವೆ. ಅದು ಇಷ್ಟವಾಗಿಲ್ಲ ಅಂದರೆ ಹಿಂದಿರುಗಿಸುತ್ತೇವೆ. ಇನ್ನೂ ಕೆಲವರು ಸ್ವಲ ಸಮಯ ಬಳಸಿ ಹಳೆಯದಾಯಿತು ಎಂದು ಅರ್ಧ ರೇಟ್‌ ಗೆ ಮಾರಾಟ ಮಾಡುತ್ತಾರೆ. ಆದರೆ ಲಾಸ್ ಎಂಜಲ್ಸ್‌ನ ಜಸ್ಟಿನ್ ಮಿಲ್ಲರ್ ಅನ್ನೋ ವ್ಯಕ್ತಿ ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಏನೋ ಹುಡುಕುತ್ತಿರುವಾಗ ಹಳೇ ಕುರ್ಚಿ ಕಣ್ಣಿಗೆ ಬಿದ್ದಿದೆ. ಲೆಥರ್ ಚೇರ್ ಮಿಲ್ಲರ್‌ಗೆ ಆಕರ್ಷಕವಾಗಿ ಕಂಡಿತ್ತು. ತಕ್ಷಣವೇ ಈ ಕುರ್ಚಿ ಖರೀದಿಸಲು ಮುಂದಾಗಿದ್ದಾನೆ. ಇದರ ಬೆಲೆ ಕೇವಲ 4,000 ರೂಪಾಯಿ ಎಂದು ನಮೂದಿಸಲಾಗಿತ್ತು. ಹೆಚ್ಚು ಯೋಚನೆ ಮಾಡದೇ ಈ ಕುರ್ಚಿ ಖರೀದಿಸಿದ್ದಾನೆ.

ಮನೆಗೆ ಪಾರ್ಸೆಲ್ ಮೂಲಕ ಆಗಮಿಸಿದ ಈ ಕುರ್ಚಿಯನ್ನು ತೆರೆದು ನೋಡಿದಾಗ ಮಿಲ್ಲರ್ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಕಾರಣ ಇದು ಹಳೇಯ ಕುರ್ಚಿ. ಇದರ ರಫ್ ಲೆದರ್, ಆಕರ್ಷಕ ವಿನ್ಯಾಸ ನೋಡಿದ ಮಿಲ್ಲರ್ ಇದನ್ನು ಹರಾಜಿಗೆ ಇಡಲು ನಿರ್ಧರಿಸಿದ್ದಾನೆ. ಹೀಗಾಗಿ ಹರಾಜಿನ ಪ್ರಖ್ಯಾತ ಸಂಸ್ಥೆ ಸೂಥಿಬೈಸ್‌ಗೆ ಈ ಕುರ್ಚಿಯನ್ನು ಕಳುಹಿಸಿದ. ಬಳಿಕ ಇದನ್ನು ಹರಾಜಿಗಿಡಲು ಹೇಳಿದ್ದಾನೆ. ಮಿಲ್ಲರ್ ಕಳುಹಿಸಿದ ಕುರ್ಚಿಯನ್ನು ಹರಾಜಿಗಿಡುವ ಮೊದಲೂ ಸೂಥಿಬೈಸ್ ಪರಿಶೀಲನೆ ನಡೆಸಿದೆ.

ಹಲವು ತಜ್ಞರು ಈ ಕುರ್ಚಿಯ ವಿಶೇಷತೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಇದು 1935ರಲ್ಲಿ ಖ್ಯಾತ ಡಿಸೈನರ್ ಫರ್ಟ್ಸ್ ಹೆನ್ನಿಂಗ್ಸನ್ ಡಿಸೈನ್ ಮಾಡಿದ ಕುರ್ಚಿ ಎಂದು ಬಹಿರಂಗವಾಗಿದೆ. ಇದರ ಇತಿಹಾಸ ಎಲ್ಲವನ್ನೂ ಪರಿಶೀಲಿಸಿ ಸೂಥಿಬೈಸ್ ಈ ಕುರ್ಚಿಗೆ 30,000 ರೂಪಾಯಿಯಿಂದ 50,000 ರೂಪಾಯಿ ಅಮೆರಿಕನ್ ಡಾಲರ್ ಬೆಲೆ ನಿಗದಿಪಡಿಸಿ ಹರಾಜಿಗೆ ಇಟ್ಟಿದೆ. ಈ ಕುರ್ಚಿ ಹರಾಜಿಗಿಟ್ಟ ಬೆನ್ನಲ್ಲೇ ಇದರ ಬೆಲೆ ಏರಿಕೆಯಾಗುತ್ತಲೇ ಹೋಯಿತು 85,000 ಅಮೆರಿಕನ್ ಡಾಲರ್ ಬೆಲೆಗೆ ದಿಡೀರ್ ಏರಿಕೆ ಕಂಡಿತು. ಕೊನೆಗೆ 1,07,950 ಅಮೆರಿಕನ್ ಡಾಲರ್ ಮೊತ್ತಕ್ಕೆ ಅಂದರೆ ಬರೋಬ್ಬರಿ 82 ಲಕ್ಷ ರೂಪಾಯಿಗೆ ಈ ಕುರ್ಚಿ ಹರಾಜಾಗಿದೆ.

ಕೇವಲ 4,000 ರೂಪಾಯಿಗೆ ಕುರ್ಚಿ ಖರೀದಿಸಿದ ಮಿಲ್ಲರ್ ಇದೀಗ 82 ಲಕ್ಷ ರೂಪಾಯಿ ಜೇಬಿಗಿಳಿಸಿದ್ದಾರೆ. ಈ ಮೊತ್ತವನ್ನು ಬ್ಯಾಂಕ್‌ನಲ್ಲಿ ಇಡುವುದಾಗಿ ಹೇಳಿದ್ದಾನೆ. ಹಲವು ಬಾರಿ ಹಳೇ ವಸ್ತುಗಳನ್ನು ಖರೀದಿಸಿದ್ದೇನೆ. ಪ್ರತಿ ವಸ್ತುಗಳನ್ನು ನೋಡಿ ನನ್ನ ಆಪ್ತರು, ಗೆಳೆಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹಲವು ವಸ್ತುಗಳನ್ನು ಖರೀದಿಸಿದ ಬೆಲೆಯಲ್ಲೇ ಮತ್ತೆ ಮಾರಾಟ ಮಾಡಿದ್ದೇನೆ. ಆದರೆ ಈ ಬಾರಿ ನನ್ನ ಖರೀದಿ ಇಷ್ಟು ದುಬಾರಿಯಾಗಿತ್ತು ಎಂದು ಊಹಿಸಿರಲಿಲ್ಲ ಎಂದು ಜಸ್ಟಿನ್ ಮಿಲ್ಲರ್ ಹೇಳಿದ್ದಾರೆ.

suddiyaana