ಪ್ರೀತಿಯ ನಾಯಿ ಬರ್ತಡೇಗೆ ಭರ್ಜರಿ ಗಿಫ್ಟ್ – ಬರೋಬ್ಬರಿ ₹16 ಲಕ್ಷದ ಮನೆ ಕಟ್ಟಿದ ಯುವಕ!

ಪ್ರೀತಿಯ ನಾಯಿ ಬರ್ತಡೇಗೆ ಭರ್ಜರಿ ಗಿಫ್ಟ್ – ಬರೋಬ್ಬರಿ ₹16 ಲಕ್ಷದ ಮನೆ ಕಟ್ಟಿದ ಯುವಕ!

ಈಗಂತೂ ಮನುಷ್ಯರಿಗಿಂತ ಸಾಕುಪ್ರಾಣಿಗಳನ್ನೇ ಜನ ಹೆಚ್ಚೆಚ್ಚು ಪ್ರೀತಿಸುತ್ತಾರೆ. ವಾಕಿಂಗ್, ಸಲೂನ್ ಅಂತಾ ಕಾರಿನಲ್ಲಿ ಹೊರಗೆ ಕರೆದೊಯ್ದು ಸುತ್ತಾಡಿಸುತ್ತಾರೆ. ಬರ್ತಡೇ, ಫೆಸ್ಟ್ ಅಂತಾ ಸಾಕಷ್ಟು ಹಣ ಖರ್ಚು ಮಾಡ್ತಾರೆ. ಆದರೆ ಇಲ್ಲೊಬ್ಬ ಸಾಕುನಾಯಿಯ ಹುಟ್ಟುಹಬ್ಬಕ್ಕೆ ಅದ್ಧೂರಿ ಗಿಫ್ಟ್ ನೀಡಿದ್ದಾರೆ.

ಸಾಕುಪ್ರಾಣಿಗಳೆಂದರೆ ಕೆಲವರಿಗೆ ಅತೀ ಹೆಚ್ಚು ಪ್ರೀತಿ. ಹೀಗಾಗಿ ತನ್ನ ಪ್ರೀತಿಯ ಸಾಕು ಪ್ರಾಣಿಗೆ ಏನು ಬೇಕಾದರೂ ಮಾಡುತ್ತಾರೆ. ಅದರ ರಕ್ಷಣೆಗೆ ಸಂಬಂಧಿಸಿ ಎಲ್ಲವನ್ನು ಮಾಡುತ್ತಾರೆ. ಇಲ್ಲೊಬ್ಬ ವ್ಯಕ್ತಿ ತಾನು ಸಾಕಿದ ನಾಯಿಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾನೆ. ಬ್ರೆಂಟ್ ರಿವೆರಾ ಎನ್ನುವ ವ್ಯಕ್ತಿ ತನ್ನ ಮನೆಯ ಸಾಕುನಾಯಿ ‘ಚಾರ್ಲಿ’ ಹುಟ್ಟುಹಬ್ಬಕ್ಕೆ ವಿಶೇಷವಾದ ಉಡುಗೊರೆಯನ್ನು ನೀಡಿದ್ದಾರೆ. ಪ್ರಾಣಿ ಪ್ರಿಯರಾಗಿರುವ ಬ್ರೆಂಟ್ ರಿವೆರಾ ಈ ಬಾರಿ ತನ್ನ ಚಾರ್ಲಿಗೆ ಏನಾದರೂ ದೊಡ್ಡ ಉಡುಗೊರೆ ನೀಡಬೇಕೆನ್ನುವ ನಿಟ್ಟಿನಲ್ಲಿ ಅದಕ್ಕಾಗಿ ಹೆಚ್ಚು ಹಣ ಖರ್ಚು ಮಾಡಲು ನಿರ್ಧರಿಸಿದ್ದಾರೆ. ತನ್ನ ಚಾರ್ಲಿಗೆ ಯಾವ ಕೊರತೆಯೂ ಉಂಟಾಗಬಾರದೆನ್ನುವ ನಿಟ್ಟಿನಲ್ಲಿ ಮನೆಯೊಂದನ್ನು ನಿರ್ಮಿಸಲು ಮುಂದಾಗಿದ್ರು.

ಇದನ್ನೂ ಓದಿ : ಸ್ವಿಮ್ಮಿಂಗ್‌ ಮಾಡುತ್ತಿದ್ದವನ ಮೇಲೆ ಶಾರ್ಕ್‌ ದಾಳಿ – ನೋಡ ನೋಡುತ್ತಿದ್ದಂತೆ ಶಾರ್ಕ್‌ ಬಾಯಿಗೆ ತುತ್ತಾದ!

ಈ ಕುರಿತು ಬ್ರೆಂಟ್ ರಿವೆರಾ ತಮ್ಮ ಯೂಟ್ಯೂಬ್‌ ಚಾನೆಲ್‌ ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ‘ಚಾರ್ಲಿ’ಗಾಗಿ ಮನೆ ನಿರ್ಮಾಣ ಮಾಡಲು ಅದಕ್ಕೆ ಬೇಕಾದ ಸಾಮ್ರಾಗಿಗಳನ್ನು ತಯಾರು ಮಾಡುವುದು, ಅದರಲ್ಲಿ ಇರಬೇಕಾದ ಸಾಮಾಗ್ರಿಗಳ ಬಗ್ಗೆ ತೋರಿಸಿದ್ದಾರೆ. ಅಂತಿಮವಾಗಿ ಒಂದು ಬೃಹತ್‌ ಗಾತ್ರದ ಮನೆಯನ್ನು ತನ್ನ ಪ್ರೀತಿಯ ಚಾರ್ಲಿಗಾಗಿ ಬ್ರೆಂಟ್ ರಿವೆರಾ ನಿರ್ಮಿಸಿದ್ದಾರೆ. ಈ ಮನೆಯಲ್ಲಿ ಟಾಯ್ಲೆಟ್‌, ಬೆಡ್‌ ರೂಮ್‌, ಕಿಚನ್‌, ಟಿವಿ.. ಹೀಗೆ ಒಂದು ಸಾಮಾನ್ಯ ಮನೆಯಲ್ಲಿ ಏನು ಇರುತ್ತದೋ ಅದೆಲ್ಲವನ್ನು ಆಳವಡಿಸಿದ್ದಾರೆ. ಮನೆ ಎಷ್ಟು ದೊಡ್ಡದಾಗಿದೆ ಎಂದರೆ ಇದರಲ್ಲಿ ಮನುಷ್ಯ ಕೂಡ ವಾಸವಾಗಿರಬಹುದು. ನಾಯಿಗೆ ಒಂಟಿತನ ಅನ್ನಿಸಬಾರದೆನ್ನುವ  ನಿಟ್ಟಿನಲ್ಲಿ ತಾನು ಇಲ್ಲದಾಗ ಅದರೊಂದಿಗೆ ಇರಲು ಒಬ್ಬ ಅನುಭವಿ ಡಾಗ್ ಟ್ರೈನರ್‌ ನ್ನು ಕೂಡ ಮನೆಯಲ್ಲಿರಿಸಿದ್ದಾರೆ.

ತಮ್ಮ ಮುದ್ದಿನ ನಾಯಿಗೆ ಹುಟ್ಟುಹಬ್ಬದ ದಿನವೇ ಮನೆಗೆ ಪ್ರವೇಶ ಮಾಡಿ ಕೇಕ್‌ ಕತ್ತರಿಸಿದ್ದಾರೆ. ಹುಟ್ಟುಹಬ್ಬಕ್ಕೆ ಸ್ನೇಹಿತರನ್ನು ಆಹ್ವಾನಿಸಿ ಕೊನೆಯದಾಗಿ ಒಂದು ಪುಟ್ಟ ನಾಯಿಯ ಮರಿಯನ್ನು ಚಾರ್ಲಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇಷ್ಟುದೊಡ್ಡ ಮಟ್ಟದ ಮನೆ ನಿರ್ಮಿಸಲು ಇವರಿಗೆ ಆದ ಖರ್ಚು ಬರೋಬ್ಬರಿ 16.4 ಲಕ್ಷ ರೂ. ಈ ವಿಡಿಯೋ ಯೂಟ್ಯೂಬ್‌ ನಲ್ಲಿ ಮಿಲಿಯನ್‌ ಗಟ್ಟಲೆ ವೀಕ್ಷಣೆ ಆಗಿದೆ.

suddiyaana