70ರ ವಯಸ್ಸಿನಲ್ಲಿ ಮದುವೆ ಆಸೆ – ವಧು ಅನ್ವೇಷಣೆಯ ಜಾಹಿರಾತಿಗಾಗಿ ಲಕ್ಷ ಲಕ್ಷ ಖರ್ಚು ಮಾಡಿದ 70ರ ವೃದ್ಧ

70ರ ವಯಸ್ಸಿನಲ್ಲಿ ಮದುವೆ ಆಸೆ – ವಧು ಅನ್ವೇಷಣೆಯ ಜಾಹಿರಾತಿಗಾಗಿ ಲಕ್ಷ ಲಕ್ಷ ಖರ್ಚು ಮಾಡಿದ 70ರ ವೃದ್ಧ

ಮದುವೆ ವಯಸ್ಸು ಹತ್ತಿರವಾಗುತ್ತಿದ್ದಂತೆ ವಧು – ವರ ಅನ್ವೇಷಣೆ ಸಾಮಾನ್ಯ. ಪರಿಚಯಸ್ಥರ ಬಳಿ, ಬ್ರೋಕರ್‌ಗಳ ಬಳಿ ಉತ್ತಮ ಸಂಗಾತಿಯನ್ನು ಹುಡುಕಿಕೊಡುವಂತೆ ಕೇಳುತ್ತಾರೆ. ಕೆಲವೊಂದು ಬಾರಿ ಪತ್ರಿಕೆಗಳಲ್ಲೂ ಜಾಹಿರಾತು ನೀಡುವುದು ಕಾಮನ್. ಇಲ್ಲೊಬ್ಬ ವೃದ್ಧ ಉತ್ತಮ ಸಂಗಾತಿಗಾಗಿ ಲಕ್ಷ ಲಕ್ಷ ಕೊಟ್ಟು ಜಾಹಿರಾತು ನೀಡಿದ್ದಾರೆ.

ಇದನ್ನೂ ಓದಿ: ಕೆ.ಎಲ್ ರಾಹುಲ್‌ಗೆ ಚಾನ್ಸ್ ಮಿಸ್ಸಾಗಿದ್ದೇಕೆ? – ಟಿ20 ಬೌಲಿಂಗ್ ಯುನಿಟ್ ವೀಕಾಯ್ತಾ?

ಗಿಲ್ಬರ್ಟಿ ಎಂಬ 70 ವರ್ಷಗಳ ವೃದ್ಧ ವಧು ಬೇಕು ಅಂತಾ ಜಾಹಿರಾತು ನೀಡಿದವರು. ಗಿಲ್ಬರ್ಟ್‌ ಅವರ ಮಡಗಿ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಸುಮಾರು ವರ್ಷಗಳಿಂದ ಏಕಾಂಗಿಯಾಗಿ ಜೀವನ ನಡೆಸುತ್ತಿರುವ ಗಿಲ್ಬರ್ಟ್‌ಗೆ ಒಂಟಿತನ ಕಾಡುತ್ತಿತ್ತು. ಹೀಗಾಗಿ ಒಂಟಿತನದಿಂದ ಬೇಸತ್ತಿದ್ದೇನೆ ಮತ್ತು ಮದುವೆಯಾಗಲು ಹುಡುಗಿಯನ್ನು ಹುಡುಕುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಸ್ವಾರಸ್ಯಕರ ಸಂಗತಿಯೆಂದರೆ ಇವರು ತನ್ನದೇ ಜಾಹಿರಾತುಗಳ ಮೂಲಕ ಹುಡುಗಿಯನ್ನು ಹುಡುಕುತ್ತಿದ್ದು, ಜಾಹೀರಾತಿಗಾಗಿ ಲಕ್ಷಗಟ್ಟಲೆ ಹಣ ಖರ್ಚು ಮಾಡುತ್ತಿದ್ದಾರೆ. ಗಿಲ್ಬರ್ಟಿ ಫಲಕದ ಜಾಹೀರಾತುಗಳಿಗಾಗಿ ವಾರದಲ್ಲಿ 320 ಪೌಂಡ್‌ಗಳನ್ನು ಅಂದರೆ ಸುಮಾರು 33 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಇದರ ಪ್ರಕಾರ ಜಾಹೀರಾತಿಗೆ ಮಾತ್ರ ತಿಂಗಳಿಗೆ ಅಂದಾಜು 1.25 ಲಕ್ಷ ರೂ. ಖರ್ಚಾಗಿದೆ ಎಂದು ಅಂದಾಜಿಸಲಾಗಿದೆ.

ಮಿರರ್ ವರದಿಯ ಪ್ರಕಾರ, ಗಿಲ್ಬರ್ಟಿ ಅವರ ಫೋಟೋವನ್ನು ರಸ್ತೆಬದಿಯಲ್ಲಿ 20 ಅಡಿ ಎತ್ತರದ ಜಾಹೀರಾತು ಫಲಕದಲ್ಲಿ ಹಾಕಲಾಗಿದೆ, ಅದರ ಮೇಲೆ ಮದುವೆಯಾಗಲು ವಧುವನ್ನು ಹುಡುಕುವುದಾಗಿ ಬರೆಯಲಾಗಿದೆ. ಆದರೆ ಈ ಜಾಹೀರಾತು ನೀಡಿದ ಕೇವಲ ಎರಡು ವಾರಗಳಲ್ಲಿ, ಅವರು 400 ಕ್ಕೂ ಹೆಚ್ಚು ಕರೆಗಳು ಬಂದಿದ್ದು, ಇದಲ್ಲದೇ 40-50 ಇಮೇಲ್​ಗಳು ಕೂಡ ಬಂದಿದೆ. ಅದರಲ್ಲಿರುವ ಹುಡುಗಿಯರ ಪೈಕಿ ಒಬ್ಬರನ್ನು ಮದುವೆಯಾಗುವುದಾಗಿ ಹೇಳಿಕೊಂಡಿದ್ದಾರೆ.

ಗಿಲ್ಬರ್ಟಿ ಹೇಳುವಂತೆ ನನಗೆ ಸ್ಲಿಮ್, ಬುದ್ಧಿವಂತ, ನಿಷ್ಠಾವಂತ ಮತ್ತು ಪ್ರಾಮಾಣಿಕ ಸಂಗಾತಿ ಬೇಕು. ಆಕೆ ನನ್ನ ಮಾತು ನೋವುಗಳನ್ನು ಕೇಳುವ ಮತ್ತು ಮುಕ್ತ ಮನಸ್ಸಿನಿಂದ ಮಾತನ್ನು ಕೇಳುವ ಸಂಗಾತಿಯನ್ನು ಬಯಸುತ್ತೇನೆ ಎಂದು ಹೇಳಿದ್ದಾರೆ. ಸ್ವತಃ ವಿವರಿಸುತ್ತಾ, ನಿವೃತ್ತಿಯ ಆದಾಯವಿದೆ, ಆರ್ಥಿಕ ಸ್ಥಿತಿ ಉತ್ತಮವಾಗಿದೆ. ನನ್ನ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂಬ ಭರವಸೆಯನ್ನು ನೀಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.

Shwetha M

Leave a Reply

Your email address will not be published. Required fields are marked *