ಲೋಕಸಭೆ ಚುನಾವಣೆಗೆ ಮೈತ್ರಿಯಿಲ್ಲ – ಟಿಎಂಸಿಯಿಂದ ಏಕಾಂಗಿ ಸ್ಪರ್ಧೆ ಎಂದ ಮಮತಾ ಬ್ಯಾನರ್ಜಿ
ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಏಕಾಂಗಿಯಾಗಿ ಅಖಾಡಕ್ಕಿಳಿಯಲಿದೆ ಅಂತಾ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ನಾವು ಯಾರ ಜೊತೆಗೂ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳೋದಿಲ್ಲ. ಜನರ ಬೆಂಬಲದೊಂದಿಗೆ ಸ್ಪರ್ಧೆಗಿಳಿಯುತ್ತೇವೆ ಅಂತಾ ಟಿಎಂಸಿ ವರಿಷ್ಠೆ ಹೇಳಿದ್ದಾರೆ.
ಇದನ್ನೂ ಓದಿ: 60 ವರ್ಷಗಳ ಬಳಿಕ ಮೊದಲ ಬಾರಿಗೆ ಮಹಿಳಾ ಶಾಸಕಿ ಆಯ್ಕೆ – ಇತಿಹಾಸ ಬರೆದ ನಾಗಾಲ್ಯಾಂಡ್ ಚುನಾವಣೆ!
ಅಪವಿತ್ರ ಮೈತ್ರಿ ಮಾಡಿಕೊಳ್ಳೋದ್ರಿಂದ ಬಿಜೆಪಿ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳದಲ್ಲಿ ಉಪಚುನಾವಣೆ ವೇಳೆ ಕಾಂಗ್ರೆಸ್ ಮತ್ತು ಸಿಪಿಎಂ ಕೂಡ ವೋಟ್ ಪಡೆಯೋಕೆ ಕೋಮುವಾದದ ಆಟವಾಡಿವೆ. ಇವೆರಡು ಪಕ್ಷಗಳಿಗೂ, ಬಿಜೆಪಿಗೂ ಯಾವುದೇ ವ್ಯತ್ಯಾಸ ಇಲ್ಲ. ಬಿಜೆಪಿಯನ್ನ ಮಣಿಸಬೇಕು ಅನ್ನೋದಾದ್ರೆ ನೇರವಾಗಿ ನಮಗೆ ವೋಟ್ ಹಾಕಿ. ಈ ಹಿಂದೆ ವಿಧಾನಸಭೆಯಲ್ಲಿ ನಮ್ಮ ತಾಕತ್ತು ಸಾಬೀತುಪಡಿಸಿದ್ದೇವೆ. ಲೋಕಸಭೆ ಚುನಾವಣೆಯಲ್ಲೂ ಇದು ಮರುಕಳಿಸಲಿದೆ ಅಂತಾ ಟಿಎಂಸಿ ನಾಯಕಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.