ಬಿಜೆಪಿಯ ‘ಪೊಳ್ಳು ಘೋಷಣೆಗಳಿಗೆ’ ಜನರು ಬೆಲೆ ಕೊಡುವುದಿಲ್ಲ – ಕೇಂದ್ರದ ವಿರುದ್ದ  ಮಲ್ಲಿಕಾರ್ಜುನ ಖರ್ಗೆ ಕಿಡಿ

ಬಿಜೆಪಿಯ ‘ಪೊಳ್ಳು ಘೋಷಣೆಗಳಿಗೆ’ ಜನರು ಬೆಲೆ ಕೊಡುವುದಿಲ್ಲ – ಕೇಂದ್ರದ ವಿರುದ್ದ  ಮಲ್ಲಿಕಾರ್ಜುನ ಖರ್ಗೆ ಕಿಡಿ

ನವದೆಹಲಿ: ದೇಶದೆಲ್ಲೆಡೆ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗಿದೆ. ಇದೀಗ ಬೆಲೆ ಏರಿಕೆ ಮತ್ತು ನಿರುದ್ಯೋಗದ ಬಗ್ಗೆ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಜನರು ಬಿಜೆಪಿಯ ‘ಪೊಳ್ಳು ಘೋಷಣೆಗಳಿಗೆ’ ಬೆಲೆ ಕೊಡುವುದಿಲ್ಲ ಮತ್ತು ಈ ಬಾರಿ ಅದನ್ನು ಅಧಿಕಾರದಿಂದ ಕಿತ್ತೊಗೆಯುತ್ತಾರೆ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಇನ್ನುಮುಂದೆ ನ್ಯಾಯಬೆಲೆ ಅಂಗಡಿಗಳಲ್ಲಿ ಸಬ್ಸಿಡಿ ದರದಲ್ಲಿ ಟೊಮೇಟೋ ಮಾರಾಟ!

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಮಲ್ಲಿಕಾರ್ಜನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಲೂಟಿಯಿಂದಾಗಿ ದೇಶದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಬಿಜೆಪಿ ಅಧಿಕಾರದ ದುರಾಸೆಯಲ್ಲಿ ಮುಳುಗಿದೆ. ಆದರೆ ಜನರು ಈಗ ಜಾಗೃತರಾಗಿದ್ದು, ಬಿಜೆಪಿಯ ಪೊಳ್ಳು ಭರವಸೆಗಳನ್ನು ನಂಬುವುದಿಲ್ಲ. ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಕಿಡಿಕಾರಿದ್ದಾರೆ.

ತರಕಾರಿಗಳ ಬೆಲೆ ಗಗನಕ್ಕೇರುತ್ತಿದ್ದು, ದೇಶದಲ್ಲಿ ನಿರುದ್ಯೋಗ ದರ ಶೇ 8.45ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ದರ ಶೇ 8.73 ಆಗಿದೆ. ಗ್ರಾಮಗಳಲ್ಲಿ ನರೇಗಾ ಯೋಜನೆಗೆ ಬೇಡಿಕೆ ಹೆಚ್ಚಿದೆ. ಆದರೆ ಕೆಲಸವಿಲ್ಲ ಎಂದು ದೂರಿದ್ದಾರೆ.

ಪ್ರಧಾನಿ ಅವರೇ, ಚುನಾವಣೆಗೂ ಮುನ್ನ ‘ಅಚ್ಛೇ ದಿನ್’, ‘ಅಮೃತ ಕಾಲ’ ಘೋಷಣೆಯ ಕುರಿತು ದೇಶದ ಜನತೆಗೆ ಅರ್ಥವಾಗಿದೆ. ಜಾಹೀರಾತಿನ ಮೂಲಕ ನಿಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕಬಹುದು. ಆದರೆ ಈ ಬಾರಿ ಹಾಗಾಗುವುದಿಲ್ಲ. ಜನ ಸಾಮಾನ್ಯರು ಜಾಗೃತರಾಗಿದ್ದು, ನಿಮ್ಮ ಪೊಳ್ಳು ಭರವಸೆಗಳಿಗೆ ಬಿಜೆಪಿ ವಿರುದ್ಧವೇ ಮತ ಚಲಾಯಿಸುವ ಮೂಲಕ ಉತ್ತರಿಸುತ್ತಾರೆ ಎಂದು ಕಿಡಿಕಾರಿದ್ದಾರೆ.

suddiyaana