ಅಂಬೇಡ್ಕರ್ ವಿವಾದ – ಅಮಿತ್ ಶಾ ವಿರುದ್ಧ ಸಂಸತ್​ನಲ್ಲಿ ವಿಶೇಷ ಹಕ್ಕು ನೋಟಿಸ್ ಸಲ್ಲಿಸಿದ ಮಲ್ಲಿಕಾರ್ಜುನ ಖರ್ಗೆ

ಅಂಬೇಡ್ಕರ್ ವಿವಾದ – ಅಮಿತ್ ಶಾ ವಿರುದ್ಧ ಸಂಸತ್​ನಲ್ಲಿ ವಿಶೇಷ ಹಕ್ಕು ನೋಟಿಸ್ ಸಲ್ಲಿಸಿದ ಮಲ್ಲಿಕಾರ್ಜುನ ಖರ್ಗೆ

ರಾಜ್ಯಸಭೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಕುರಿತು ಅಮಿತ್ ಶಾ ನೀಡಿರುವ ಆಕ್ಷೇಪಾರ್ಹ ಹೇಳಿಕೆ ಭಾರಿ ಗದ್ದಲಕ್ಕೆ ಕಾರಣವಾಗಿದೆ.   ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿಶೇಷ ಹಕ್ಕು ನೋಟಿಸ್ ಸಲ್ಲಿಸಿದ್ದಾರೆ. ಅಮಿತ್ ಶಾ ಅವರಿಂದ ಸಂವಿಧಾನದ ಶಿಲ್ಪಿಗೆ ಅವಮಾನವಾಗಿದೆ. ಮತ್ತು ಅವರು ಸದನದ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ಇದನ್ನೂ ಓದಿ: ಕಣಕ್ಕಿಳಿಯದ ಪಂದ್ಯದಲ್ಲಿ ಸ್ಪಿನ್ ದಿಗ್ಗಜನ ವಿದಾಯ- ಅಶ್ವಿನ್‌ಗೆ ವಿಶೇಷ ಗಿಫ್ಟ್ ನೀಡಿದ ಆಸ್ಟ್ರೇಲಿಯಾ ಆಟಗಾರರು

ರಾಜ್ಯಸಭೆಯ ಕಾರ್ಯವಿಧಾನ ಮತ್ತು ವ್ಯವಹಾರದ ನಿಯಮಗಳ ನಿಯಮ 188ರ ಅಡಿಯಲ್ಲಿ ಗೃಹ ವ್ಯವಹಾರಗಳ ಸಚಿವರಾದ ಅಮಿತ್ ಶಾ ವಿರುದ್ಧ ನಾನು ವಿಶೇಷ ಹಕ್ಕುಗಳ ಪ್ರಶ್ನೆಯ ನೋಟಿಸ್ ಅನ್ನು ಈ ಮೂಲಕ ನೀಡುತ್ತೇನೆ  ಎಂದು ಮಲ್ಲಿಕಾರ್ಜುನ ಖರ್ಗೆ ನೋಟಿಸ್ ನೀಡಿದ್ದಾರೆ. ಡಿಸೆಂಬರ್ 17ರಂದು ಭಾರತದ ಸಂವಿಧಾನದ 75 ವರ್ಷಗಳ ವೈಭವದ ಪ್ರಯಾಣ’ ಕುರಿತ ಚರ್ಚೆಗೆ ರಾಜ್ಯಸಭೆಯಲ್ಲಿ ನೀಡಿದ ಉತ್ತರದ ವೇಳೆ ಅಮಿತ್ ಶಾ ಅವರು ಅಂಬೇಡ್ಕರ್ ಅವರನ್ನು ‘ಅವಮಾನಕರ ಮತ್ತು ಮಾನಹಾನಿಕರ  ಎಂದು ಉಲ್ಲೇಖಿಸಿದ್ದರು ಎಂದು ಖರ್ಗೆ ಹೇಳಿದ್ದಾರೆ.

ಸದನದ ಸಮ್ಮುಖದಲ್ಲಿ ಯಾವುದೇ ದುರ್ನಡತೆ ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡುವುದು ಸದನದ ಅವಹೇಳನವಾಗಿದೆ ಎಂದು ದೃಢಪಡಿಸಲಾಗಿದೆ ಎಂದು ಖರ್ಗೆ ಪ್ರಸ್ತಾಪಿಸಿದ್ದಾರೆ. ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಬಳಸುವುದು ಡಾ. ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ, ಸದನದಲ್ಲಿ ನೀಡಿದ ಅವರ ಹೇಳಿಕೆಗಳು ಸಂಪೂರ್ಣವಾಗಿ ಅವಹೇಳನಕಾರಿ ಎಂದು ಅವರು ತಮ್ಮ ನೋಟಿಸ್‌ನಲ್ಲಿ ಹೇಳಿದ್ದಾರೆ.

ವಿಶೇಷಾಧಿಕಾರದ ಸೂಚನೆಯ ಪ್ರತಿಯನ್ನು ಕಾಂಗ್ರೆಸ್ ತನ್ನ ಅಧಿಕೃತ ಹ್ಯಾಂಡಲ್‌ನಿಂದ ಎಕ್ಸ್​ನಲ್ಲಿ ಹಂಚಿಕೊಂಡಿದೆ.

Shwetha M

Leave a Reply

Your email address will not be published. Required fields are marked *