ಚಂದನವನಕ್ಕೆ ಕಾಲಿಡಲಿದ್ದಾರೆ ಚೆಂದನೆಯ ರಾಧೆ – ವಿನಯ್ ರಾಜ್‌ಕುಮಾರ್ ಜೊತೆ ಸ್ಯಾಂಡಲ್‌ವುಡ್‌ಗೆ ಮಲ್ಲಿಕಾ ಸಿಂಗ್

ಚಂದನವನಕ್ಕೆ ಕಾಲಿಡಲಿದ್ದಾರೆ ಚೆಂದನೆಯ ರಾಧೆ – ವಿನಯ್ ರಾಜ್‌ಕುಮಾರ್ ಜೊತೆ ಸ್ಯಾಂಡಲ್‌ವುಡ್‌ಗೆ ಮಲ್ಲಿಕಾ ಸಿಂಗ್

ರಾಧಾಕೃಷ್ಣ ಧಾರವಾಹಿಯ ರಾಧೆ ಯಾರಿಗೆ ಗೊತ್ತಿಲ್ಲ ಹೇಳಿ.  ಕೊವಿಡ್ ಲಾಕ್‌ಡೌನ್  ಸಂದರ್ಭದಲ್ಲಿ ಈ ಧಾರಾವಾಹಿ ಕನ್ನಡಕ್ಕೆ ಡಬ್ ಆಗಿ ಪ್ರಸಾರ ಕಂಡಾಗ ಕನ್ನಡದ ವೀಕ್ಷಕರು ರಾಧೆಯನ್ನು ತುಂಬಾ ಇಷ್ಟಪಟ್ಟಿದ್ದರು. ರಾಧೆಯಾಗಿ ಅಭಿನಯಿಸಿದ ಮಲ್ಲಿಕಾ ಸಿಂಗ್ ಎಲ್ಲರ ಮನಗೆದ್ದಿದ್ದರು. ಆ ಸಮಯದಲ್ಲಿ ಹೆಚ್ಚಿನವರ ಮೊಬೈಲ್ ವಾಟ್ಸಾಪ್ ಸ್ಟೇಟಸ್‌ನಲ್ಲಿ ರಾಧೆಯೇ ಮಿಂಚುತ್ತಿದ್ದಳು. ಅದೇ ರಾಧೆ ಈಗ ಕನ್ನಡ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ. ಅದು ಕೂಡಾ ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ಜೊತೆ ಮಲ್ಲಿಕಾ ಸಿಂಗ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡ್ತಿದ್ದಾರೆ.

ಇದನ್ನೂ ಓದಿ:  ತುಂಡುಡುಗೆಯಲ್ಲಿ ಕೊಡಗಿನ ಬೆಡಗಿ ಹಾಟ್ ಹಾಟ್..! – ರಶ್ಮಿಕಾ ಶಾರ್ಟ್ ಡ್ರೆಸ್‌ಗೆ ಫ್ಯಾನ್ಸ್ ಶಾಕ್..!

ಸಿಂಪಲ್ ಸುನಿ ಮತ್ತು ವಿನಯ್ ರಾಜ್‌ಕುಮಾರ್ ಕಾಂಬಿನೇಷನ್‌ನ ಚಿತ್ರದಲ್ಲಿ ಮಲ್ಲಿಕಾ ಸಿಂಗ್ ನಟಿಸಲಿದ್ದಾರೆ. ಚಂದನವನಕ್ಕೆ ಕಾಲಿಡುತ್ತಿರುವ ಚೆಂದನೆಯ ರಾಧೆ ಈಗಾಗಲೇ ಸಿನಿಮಾದಲ್ಲಿ ನಟಿಸಲು ಸಹಿ ಮಾಡಿಯಾಗಿದೆ. ಸಿನಿಮಾ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ. ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿದಿದೆ. ರಾಧಾ ಕೃಷ್ಣ ಸೀರಿಯಲ್ ಮಾತ್ರವಲ್ಲದೇ ‘ಜೈ ಕನ್ಹಯ್ಯಾ ಲಾಲ್ ಕಿ’ ಧಾರಾವಾಹಿಯಲ್ಲೂ ಮಲ್ಲಿಕಾ ಸಿಂಗ್ ನಟಿಸಿದ್ದಾರೆ. ಅದರಲ್ಲಿ ಅವರು ಲಕ್ಷ್ಮೀ ದೇವಿಯ ಪಾತ್ರ ಮಾಡಿದ್ದಾರೆ. ಇನ್ನು, ಹಿಂದಿಯ ‘ಗಲ್ಲಿ ಬಾಯ್’ ಸಿನಿಮಾ ಮೂಲಕ ಅವರು ಬಾಲಿವುಡ್‌ ನಲ್ಲೂ ಮಲ್ಲಿಕಾ ಸಿಂಗ್ ಕಮಾಲ್ ಮಾಡಿದ್ದರು. ಇದೀಗ ವಿನಯ್ ರಾಜ್‌ಕುಮಾರ್ ನಟನೆಯ ಸಿನಿಮಾದಲ್ಲಿ ಮಲ್ಲಿಕಾ ಸಿಂಗ್ ಅವರು ಕಾಶ್ಮೀರಿ ಹುಡುಗಿಯ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

suddiyaana