ಗಿಲ್ಲಿನಟಗೆ ಮಲ್ಲಮ್ಮ ಶಾಕ್‌ – ಮನೆಗೆ ಕಳಿಸ್ತಾರೆಂದು ಕಾಮಿಡಿ ಸ್ಟಾರ್‌ ಕಣ್ಣೀರು!

ಗಿಲ್ಲಿನಟಗೆ ಮಲ್ಲಮ್ಮ ಶಾಕ್‌ – ಮನೆಗೆ ಕಳಿಸ್ತಾರೆಂದು ಕಾಮಿಡಿ ಸ್ಟಾರ್‌ ಕಣ್ಣೀರು!

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ವೀಕ್ಷಕರ ಮನ ಗೆದ್ದಿದೆ. ಮೊದಲ ವಾರವೇ ಬಿಗ್‌ ಬಾಸ್‌ ನಲ್ಲಿ ಸಾಕಷ್ಟು ಟ್ವಿಸ್ಟ್‌ ನೀಡಲಾಗಿದೆ. ಮೂರನೇ ವಾರ ಫಿನಾಲೆ ನಡೆಯಲಿದೆ ಎಂದು ಬಿಗ್‌ ಬಾಸ್‌ ಅನೌನ್ಸ್‌ ಮಾಡಿದ್ದು,  ಸ್ಪರ್ಧಿಗಳಿಗೆ ಒಂದಾದ ಮೇಲೊಂದು ಟಾಸ್ಕ್‌ ನೀಡ್ತಾ ಬಂದಿದ್ರು, ಈಗಾಗಲೇ ಐದು ಮಂದಿ ಫಿನಾಲೆಗೆ ಆಯ್ಕೆಯಾಗಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಮೊದಲು ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಇಂದು ನಾಮಿನೇಷನ್‌ ಪ್ರಕ್ರಿಯೆ ಶುರುವಾಗಿದೆ.  ಆದ್ರೀಗ ಮಲ್ಲಮ್ಮ ಗಿಲ್ಲಿಗೆ ಶಾಕ್‌ ನೀಡಿದ್ದಾರೆ. ಇದ್ರ ಪ್ರೋಮೋ ರಿಲೀಸ್‌ ಆಗಿದೆ.

ಇದನ್ನೂ ಓದಿ:  ಮುಂಬರುವ ಎಲ್ಲಾ ಚುನಾವಣೆಗಳಿಗೆ JDS – BJP ಮೈತ್ರಿ! – ಹೆಚ್‌ಡಿ ದೇವೇಗೌಡ

ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿನಟ ಸಖತ್‌ ವೈಲೆಂಟ್..‌ ಸಹ ಸ್ಪರ್ಧಿಗಳಿಗೆ ಏನಾದ್ರೂ ಕ್ವಾಟ್ಲೆ ಕೊಡ್ತಾನೇ ಇರ್ತಾರೆ. ಇದೀಗ ಬಿಗ್‌ ಬಾಸ್‌ ಮನೆಯಲ್ಲಿ ನಾಮಿನೇಷನ್‌ ಪ್ರಕ್ರಿಯೆ ನಡೆದಿದೆ. ಈ ವೇಳೆ ಚಂದ್ರಪ್ರಭ ಧನುಷ್‌ ಅವರನ್ನ ನಾಮೀನೇಟ್‌ ಮಾಡಿದ್ರೆ, ಜಾಹ್ನವಿ ಕಾಕ್ರೋಜ್‌ ಸುಧೀ ಅವರನ್ನ ನಾಮಿನೇಟ್‌ ಮಾಡಿ, ತಮ್ಮ ಕಾರಣವನ್ನ ನೀಡಿದ್ದಾರೆ.. ಆದ್ರೆ ಮಲ್ಲಮ್ಮ ನಾಮಿನೇಷನ್‌ ಏನು ಅಂತಾ ಗೊತ್ತಾಗದೇ ಗಿಲ್ಲಿ ಹೆಸರು ಹೇಳಿಬಿಟ್ಟಿದ್ದಾರೆ. ಇದೀಗ ಗಿಲ್ಲಿ ಮಲ್ಲಮ್ಮನ ಮುಂದೆ ನನ್ನನ್ನ ಮನೆಗೆ ಕಳಿಸ್ತಾರೆ ಎಂದು ಕಣ್ಣಿರು ಹಾಕಿ ಡ್ರಾಮಾ ಮಾಡಿದ್ದಾರೆ.

ಮಲ್ಲಮ್ಮ ನಾಮಿನೇಷನ್‌ ಪ್ರಕ್ರಿಯೆ ವೇಳೆ ಗಿಲ್ಲಿ ಹೆಸರನ್ನ ಆಯ್ಕೆ ಮಾಡಿದ್ದಾರೆ. ಬಳಿಕ ಗಿಲ್ಲಿ ಮಲ್ಲಮ್ಮ ಬಳಿ ನಾಮಿನೇಷನ್‌ ಅಂದ್ರೆ ಏನು ಅಂತಾ ವಿವರಿಸಿದ್ದಾರೆ. ನೀವು ಹೀಗೆ ಮಾಡಿದ್ರಲ್ಲ.. ನನ್ನನ್ನ ಮನೆಗೆ ಕಳಿಸ್ತಾರೆ ಎಂದಿದ್ದಾರೆ. ಆಗ ಮಲ್ಲಮ್ಮ ಶಾಕ್‌ ನಿಂದ ಹೌದಾ ಎಂದಿದ್ದಾರೆ. ಬಳಿಕ ಮನೆಗೆ ಕಳಿಸುತ್ತಾರೆ ಅಂತಾ ಕಣ್ಣೀರು ಹಾಕುವಂತೆ ಮಲ್ಲಮ್ಮ ಮುಂದೆ ಕಣ್ಣಿರು ಹಾಕಿದ್ದಾರೆ. ಗಿಲ್ಲಿ ಡ್ರಾಮಾವನ್ನ ನಿಜ ಎಂದು ತಿಳಿದು ಮಲ್ಲಮ್ಮ ಬೇಜಾರಿದ್ದಾರೆ.

Shwetha M