ಕೇವಲ 30 ದಿನಗಳಲ್ಲಿ ಮಲೆ ಮಾದಪ್ಪನ ಹುಂಡಿಗೆ 2.36 ಕೋಟಿ ಕಾಣಿಕೆ!

ಕೇವಲ 30 ದಿನಗಳಲ್ಲಿ ಮಲೆ ಮಾದಪ್ಪನ ಹುಂಡಿಗೆ 2.36 ಕೋಟಿ ಕಾಣಿಕೆ!

ರಾಜ್ಯದ ಪ್ರಸಿದ್ಧ ದೇಗುಲಗಳಲ್ಲಿ ಒಂದಾದ ಚಾಮರಾಜನಗರ ಮಲೆ ಮಹದೇಶ್ವರ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಮಹದೇವನ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾಗುತ್ತಾರೆ. ಇದೀಗ ಮಲೆ ಮಹದೇಶ್ವರ ಮತ್ತೊಮ್ಮೆ ಕೋಟಿ ಒಡೆಯನಾಗಿದ್ದಾನೆ. ಒಂದೇ ತಿಂಗಳಿಗೆ ಭಕ್ತರಿಂದ 2.36 ಕೋಟಿ ಕಾಣಿಕೆ ಹರಿದುಬಂದಿದೆ.

ಇದನ್ನೂ ಓದಿ:ಪಾಕಿಸ್ತಾನಕ್ಕೆ ವರುಣನ ಶಾಕ್‌ –  ನಿರಂತರ ಮಳೆ.. ಪ್ರವಾಹಕ್ಕೆ ನಲುಗಿ ಹೋದ ಪಾಕ್

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ನಡೆದಿದೆ. ಕೇವಲ ಒಂದು ತಿಂಗಳಿನಲ್ಲಿ ಬರೋಬ್ಬರಿ 2.36 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಇದಲ್ಲದೇ, 70 ಗ್ರಾಂ ಚಿನ್ನ, 1 ಕೆಜಿ 712 ಗ್ರಾಂ ಬೆಳ್ಳಿ ಆಭರಣಗಳನ್ನು ಭಕ್ತರು ಮಲೆ ಮಹದೇಶ್ವರನಿಗೆ ಸಮರ್ಪಿಸಿದ್ದಾರೆ. ಹುಂಡಿಯಲ್ಲಿ ಎರಡು ಸಾವಿರ ಮುಖಬೆಲೆಯ 14 ನೋಟುಗಳು ಹಾಗೂ 20 ವಿದೇಶಿ ನೋಟುಗಳು ಸಹ ಕಂಡು ಬಂದಿವೆ.

ಮೈಸೂರಿನಿಂದ 135 ಕಿ.ಮೀ ದೂರದಲ್ಲಿ, ಹೊಗೆನಕಲ್ ನಿಂದ 89 ಕಿ.ಮೀ, ಕೊಳ್ಳೆಗಾಲದಿಂದ 72 ಕಿ.ಮೀ ಮತ್ತು ಬೆಂಗಳೂರಿನಿಂದ 209 ಕಿ.ಮೀ ದೂರದಲ್ಲಿರುವ ಮಲೆ ಮಹದೇಶ್ವರ ಬೆಟ್ಟ, ಎಂ.ಎಂ. ಹಿಲ್ಸ್ ಎಂದೂ ಕರೆಯುತ್ತಾರೆ, ಇದು ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನ ಪೂರ್ವ ಭಾಗದಲ್ಲಿದೆ. ಇದು 3000 ಅಡಿ ಎತ್ತರದಲ್ಲಿದೆ. ಮಲೈ ಮಹದೇಶ್ವರ ಬೆಟ್ಟ ದಟ್ಟವಾದ ಕಾಡಿನಿಂದ ಆವೃತವಾಗಿರೋದ್ರಿಂದ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ.

Shwetha M