ಮೇ ಒಳಗೆ ಭಾರತದ ಸೇನೆ ವಾಪಸ್ ಹೋಗಲೇಬೇಕು! – ಮತ್ತೆ ಗುಡುಗಿದ ಮಾಲ್ಡೀವ್ಸ್‌ ಅಧ್ಯಕ್ಷ!

ಮೇ ಒಳಗೆ ಭಾರತದ ಸೇನೆ ವಾಪಸ್ ಹೋಗಲೇಬೇಕು! – ಮತ್ತೆ ಗುಡುಗಿದ ಮಾಲ್ಡೀವ್ಸ್‌ ಅಧ್ಯಕ್ಷ!

ಮಾಲ್ಡೀವ್ಸ್‌ ಹಾಗೂ ಭಾರತ ನಡುವಿನ ಸಂಬಂಧ ಹಳಸಿದ ಅನ್ನದಂತಾಗಿದೆ. ಭಾರತವನ್ನು ಕಂಡು ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಜು ನಿಗಿನಿಗಿ ಕೆಂಡ ಕಾರುತ್ತಿದ್ದಾರೆ. ಇದೀಗ ಮುಯಿಜು ಅವರು ಭಾರತದ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ. ನಮ್ಮ ದೇಶದ ಸಾರ್ವಭೌಮತೆಗೆ ಧಕ್ಕೆ ಉಂಟು ಮಾಡಲು ಯಾವುದೇ ದೇಶಕ್ಕೂ ನಾವು ಅವಕಾಶ ನೀಡೋದಿಲ್ಲ. ಯಾವುದೇ ದೇಶದ ಹಸ್ತಕ್ಷೇಪವನ್ನು ನಾವು ಸಹಿಸೋದಿಲ್ಲ. ಮೇ 10ರ ಒಳಗೆ ಭಾರತೀಯ ಸೇನೆಯ ಎಲ್ಲಾ ಸಿಬ್ಬಂದಿ ಮಾಲ್ಡೀವ್ಸ್‌ ಬಿಟ್ಟು ಹೊರಗೆ ಹೋಗಬೇಕು ಎಂದಿದ್ದಾರೆ.

ಇದನ್ನೂ ಓದಿ: ಇಂಧನ ಖಾಲಿಯಾಗಿ ರಸ್ತೆ ಮಧ್ಯೆಯೇ ಕೆಟ್ಟು ನಿಂತ ಪೊಲೀಸ್‌ ವಾಹನ – ಕೋರ್ಟ್​ವರೆಗೆ ಕಾರನ್ನು ತಳ್ಳಿದ ಆರೋಪಿಗಳು

ಈಗಾಗಲೇ ಹೊಸ ದಿಲ್ಲಿ ಹಾಗೂ ಮಾಲ್ಡೀವ್ಸ್ ನಡುವೆ ಈಗಾಗಲೇ ಒಪ್ಪಂದ ಏರ್ಪಟ್ಟಿದ್ದು, ಮಾಲ್ಡೀವ್ಸ್‌ನಲ್ಲಿ ಇರುವ ಭಾರತೀಯ ಸೇನಾ ಸಿಬ್ಬಂದಿ ಹಂತ ಹಂತವಾಗಿ ಮೇ 10ರ ಒಳಗೆ ಮಾಲ್ಡೀವ್ಸ್‌ನಿಂದ ವಾಪಸ್ಸಾಗಲಿದ್ದಾರೆ.

ಮಾಲ್ಡೀವ್ಸ್‌ನಲ್ಲಿ ಭಾರತೀಯ ಸೇನೆಯ 87 ಸಿಬ್ಬಂದಿ ಇದ್ದಾರೆ. ಮಾಲ್ಡೀವ್ಸ್‌ನಲ್ಲಿ ಮಾನವೀಯ ನೆರವು, ವೈದ್ಯಕೀಯ ತುರ್ತು ಸೇವೆ ಸೇರಿದಂತೆ ಹಲವು ಕಾರ್ಯಗಳಲ್ಲಿ ತೊಡಗಿದ್ದಾರೆ. ಆದರೆ, ಮಾಲ್ಡೀವ್ಸ್‌ನಲ್ಲಿ ಭಾರತದ ಪ್ರಭಾವ ಕುಗ್ಗಿಸಬೇಕೆಂದು ನಿರ್ಧರಿಸಿರುವ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಝು, ಮೊದಲ ಹಂತವಾಗಿ ತನ್ನ ನೆಲದಲ್ಲಿ ಇರುವ ಭಾರತೀಯ ಸೇನೆಯನ್ನು ವಾಪಸ್ ಕಳಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಮಾಲ್ಡೀವ್ಸ್‌ನಿಂದ ಭಾರತಕ್ಕೆ ರೋಗಿಗಳನ್ನು ಕರೆ ತರುವ ಭಾರತದ ತುರ್ತು ಆರೋಗ್ಯ ಸೇವೆ ನಿರಾಕರಿಸಿದ ಪರಿಣಾಮ ಬಾಲಕನೋರ್ವ ಮೃತಪಟ್ಟಿದ್ದ.

Shwetha M