ಮಲಯಾಳಂ ನಟಿ ಪಾರ್ವತಿಗೆ ಬಾಡಿ ಶೇಮಿಂಗ್ – ದಪ್ಪ ಆಗಿದ್ದಕ್ಕೆ ಎಷ್ಟೊಂದು ಅವಮಾನ?

ಮಲಯಾಳಂ ನಟಿ ಪಾರ್ವತಿಗೆ ಬಾಡಿ ಶೇಮಿಂಗ್ – ದಪ್ಪ ಆಗಿದ್ದಕ್ಕೆ ಎಷ್ಟೊಂದು ಅವಮಾನ?

ಮಿಲನ ಖ್ಯಾತಿಯ ನಟಿ ಪಾರ್ವತಿ ಮೆನನ್ ಕ್ಯೂಟ್ ಲುಕ್ ನೋಡೋದೇ ಚೆಂದ. ಅಭಿಮಾನಿಗಳಿಗಂತೂ ಪಾರ್ವತಿಯೆಂದರೆ ಪಂಚಪ್ರಾಣ. ಮಲಯಾಳಂ ನಟಿಯ ನಗು, ನಟನೆ, ಕಣ್ಣಲ್ಲೇ ಕುಕ್ಕುವ ಆ ನೋಟ ಫ್ಯಾನ್ಸ್ ಗೆ ತುಂಬಾನೇ ಇಷ್ಟ. ಇದೀಗ ಪಾರ್ವತಿ ಮೆನನ್ ತನಗಾದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ:ಗಿಲ್ಲಿ ಹಣ ಇದ್ದವರನ್ನು ಮಾತ್ರ ಮೀಟ್‌ ಮಾಡೋದಾ? – ಬಿಗ್‌ಬಾಸ್‌ ವಿನ್ನರ್ ನಡೆಗೆ ಫ್ಯಾನ್ಸ್‌ ಗರಂ!

ಮಲಯಾಳಂನ ಖ್ಯಾತ ನಟಿ, ಕನ್ನಡದ ಮಿಲನ ಸಿನಿಮಾದಲ್ಲಿ ನಟಿಸಿದ್ದ ಪಾರ್ವತಿ ಅವರಿಗೆ ಬಾಡಿ ಶೇಮಿಂಗ್ ಆಗಿದೆ. ಪಾರ್ವತಿ ಅವರು ಕೇರಳದ ಕೋಳಿಕ್ಕೋಡ್​ನವರು. ಅವರಿಗೆ ಈಗ 37 ವರ್ಷ. ತನ್ನ 17ನೇ ವರ್ಷಕ್ಕೆ ಚಿತ್ರರಂಗದ ಪಯಣ ಆರಂಭಿಸಿದ್ದರು. 2007ರಲ್ಲಿ ಮಾಡಿದ ಮಿಲನ ಸಿನಿಮಾ ಅವರಿಗೆ ಸಾಕಷ್ಟು ಜನಪ್ರಿಯತೆ ನೀಡಿತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ನಟಿಸಿದ್ದ ಪಾರ್ವತಿಯವರಿಗೆ ಕನ್ನಡದಲ್ಲೇ ಸಾಕಷ್ಟು ಅಭಿಮಾನಿಗಳಿದ್ದಾರೆ. ನಂತರ ಕನ್ನಡದಲ್ಲಿ ಪೃಥ್ವಿ ಸಿನಿಮಾ ಮಾಡಿದರು. ಹಿಟ್ ಜೋಡಿ ಎನಿಸಿಕೊಂಡಿದ್ದ ಪುನೀತ್ ಹಾಗೂ ಪಾರ್ವತಿ ಈ ಚಿತ್ರಕ್ಕಾಗಿ ಮತ್ತೆ ಒಂದಾದರು. ಇದೀಗ ಕೇರಳದ ಖ್ಯಾತ ನಟಿ ಕೇರಳಿಗರಿಂದಲೇ ಬಾಡಿ ಶೇಮಿಂಗ್ ಅನುಭವಿಸಿದ್ದಾರೆ. ಪಾರ್ವತಿ ಮೆನನ್ ಮೊದಲಿಗಿಂತ ದಪ್ಪ ಆಗಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಪಾರ್ವತಿಯವರು ಲುಕ್ ವಿಷಯ ಇಟ್ಟುಕೊಂಡು ಅನೇಕರು ಟೀಕೆ ಮಾಡಿದ್ದಾರೆ. ಈ ಮೊದಲು ಕೂಡ ಇದೇ ರೀತಿಯ ತೊಂದರೆ ಅನುಭವಿಸಿದ್ದೇನೆ. ಈಗ ಮತ್ತದೇ ನೋವು, ಅವಮಾನವಾಗಿದೆ ಎಂದು ಪಾರ್ವತಿ ಮೆನನ್ ಬೇಸರ ಹೊರಹಾಕಿದ್ದಾರೆ.

Sulekha