ಬಾಲಿವುಡ್‌ ನಟಿ ಮಲೈಕಾ ಅರೋರ ತಂದೆ ದುರಂತ ಅಂತ್ಯ – ಕಾರಣವೇನು?

ಬಾಲಿವುಡ್‌ ನಟಿ ಮಲೈಕಾ ಅರೋರ ತಂದೆ ದುರಂತ ಅಂತ್ಯ – ಕಾರಣವೇನು?

ಬಾಲಿವುಡ್‌ ನ ಖ್ಯಾತ ನಟಿ, ಮಾಡೆಲ್‌ ಮಲೈಕಾ ಅರೋರಾ ತಂದೆ ಅನಿಲ್ ಅರೋರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನ ತಪ್ಪ ಮನೆಯ ಮೇಲ್ಛಾವಣಿಯಿಂದ ಕೆಳಗೆ ಹಾರಿ ಮಲೈಕಾರ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಲಕ್ಷ್ಮೀ ಇನ್ನೊಂದು ಮುಖ ರಿವೀಲ್‌.. -ಕೀರ್ತಿ ರೀ ಎಂಟ್ರಿ? -ಕಾವೇರಿ ಕತೆ ಮುಗಿತು!!  

ಬುಧವಾರ ಮಲೈಕಾ ಅರೋರಾ ಚಿತ್ರೀಕರಣಕ್ಕಾಗಿ ಪುನಾಕ್ಕೆ ತೆರಳಿದ್ದರು. ಈ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮಲೈಕಾ ಮುಂಬೈಗೆ ರವಾನೆಯಾಗಿದ್ದಾರೆ. ಮಲೈಕಾ ಅರೋರಾರ ಸಹೋದರಿ ಅಮೃತ್ ಅರೋರಾ ಸಹ ತಂದೆಯ ಸಾವಿನ ವಿಷಯ ತಿಳಿದು ಮುಂಬೈಗೆ ವಾಪಸ್ಸಾಗಿದ್ದಾರೆ.

ಅನಿಲ್ ಅರೋರಾರ ಮೃತ ದೇಹವನ್ನು ಮುಂಬೈನ ಬಾಬಾ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಸಂಬಂಧಿಗಳಿಗೆ ನೀಡಲಾಗುವುದೆಂದು ತಿಳಿಸಲಾಗಿದೆ. ಅನಿಲ್ ಅವರದ್ದು ಆತ್ಮಹತ್ಯೆಯೋ ಅಥವಾ ಕಾಲು ಜಾರಿ ಬಿದ್ದರೋ ಎಂಬ ಬಗ್ಗೆ ಅನುಮಾನವಿರುವುದಾಗಿ ಪೊಲೀಸರು ಹೇಳಿದ್ದಾರೆ.

ಮಲೈಕಾ ಅರೋರಾರ ತಂದೆ ಅನಿಲ್ ಅರೋರಾ ಭಾರತದ ಮರ್ಚೆಂಟ್ ನೇವಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸದ್ಯ ಅವರು ಮುಂಬೈನ ಬಾಂದ್ರಾದಲ್ಲಿ ವಾಸವಿದ್ದರು. ಅವರಿಗೆ ಸುಮಾರು 75 ವರ್ಷ ವಯಸ್ಸಾಗಿತ್ತು.

Shwetha M