19 ವರ್ಷ ಅಂತರದ ಗೆಳೆಯನ ಜೊತೆ ಡೇಟಿಂಗ್ – ಮಲೈಕಾ ಅರೋರಾ ಹೊಸ ಬಾಯ್ಫ್ರೆಂಡ್ ಯಾರು?

ಪ್ರೀತಿಗೆ ವಯಸ್ಸಿನ ಅಂತರ ಇಲ್ಲ ಎಂದು ಮತ್ತೊಮ್ಮೆ ಬಾಲಿವುಡ್ ನಟಿ ಮಲೈಕಾ ಅರೋರಾ ಸಾಬೀತು ಪಡಿಸಲು ಹೊರಟಿದ್ದಾರೋ ಏನೋ. ಯಾಕೆಂದರೆ, ತಮಗಿಂತ 12 ವರ್ಷ ಕಿರಿಯ ಅರ್ಜುನ್ ಕಪೂರ್ ಜೊತೆ ಮಲೈಕಾ ಡೇಟಿಂಗ್ನಲ್ಲಿದ್ದರು. ಈಗ ಇವರಿಬ್ಬರು ದೂರಾಗಿದ್ದಾರೆ. ಇದಾದ ಮೇಲೆ ಮಲೈಕಾ ಇನ್ನೂ ಕಡಿಮೆ ಅಂತರದ ಅಂದರೆ 19 ವರ್ಷಗಳ ಅಂತರವಿರುವ ಗೆಳೆಯನ ಜೊತೆ ಡೇಟಿಂಗ್ನಲ್ಲಿದ್ದಾರೆ.
ಇದನ್ನೂ ಓದಿ:ದಿ ವೆಡ್ಡಿಂಗ್ ಆಫ್ ವಿರೋಶ್! – ಮದುವೆ ಫ್ಯಾನ್ಸ್ ಸೂಚಿಸಿದ ಹೆಸರನ್ನಿಟ್ಟ ರಶ್ಮಿಕಾ, ವಿಜಯ್!
ಬಾಲಿವುಡ್ ನಟ ಅರ್ಜುನ್ ಕಪೂರ್ ಜೊತೆ ಮಲೈಕಾ ಅರೋರಾ ಸಂಬಂಧ ಗಟ್ಟಿಯಾಗುತ್ತೆ ಅಂತಾ ಎಲ್ಲರೂ ಭಾವಿಸಿದ್ದರು. ಕೊನೆಗೂ ಇವರಿಬ್ಬರ ಸಂಬಂಧ ಮುರಿದು ಬಿತ್ತು. ಇದಾದ ನಂತರ ಮಲೈಕಾ ಹೆಸರು ಉದ್ಯಮಿಯಾಗಿರುವ ಹರ್ಷ್ ಜೊತೆ ಕೇಳಿಬಂದಿದೆ. ನಟಿ ಮಲೈಕಾ ಅರೋರಾ ನಟ ಅರ್ಬಾಜ್ ಖಾನ್ ಅವರನ್ನು ಮದುವೆಯಾಗಿದ್ದರು. ನಂತರ ಇವರಿಬ್ಬರು ವಿಚ್ಛೇದನ ಪಡೆದುಕೊಂಡಿದ್ದರು. ಇದಾದ ನಂತರ ಮಲೈಕಾ ತಮಗಿಂತ 12 ವರ್ಷ ಕಿರಿಯ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಇಬ್ಬರೂ ಸುಮಾರು 6 ವರ್ಷಗಳ ಕಾಲ ಸಂಬಂಧದಲ್ಲಿದ್ದರು. ಇಷ್ಟು ದೊಡ್ಡ ವಯಸ್ಸಿನ ಅಂತರದ ಹೊರತಾಗಿಯೂ, ಅರ್ಜುನ್-ಮಲೈಕಾ ಅವರ ಕೆಮಿಸ್ಟ್ರಿ ಚೆನ್ನಾಗಿಯೇ ಇತ್ತು. ಆದರೆ, ಅರ್ಜುನ್ ಜೊತೆಗಿನ ಸಂಬಂಧವೂ ಮುರಿದುಬಿತ್ತು. ಇದೀಗ ಮಲೈಕಾ, ಮುಂಬೈನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ, ಯುವ ಉದ್ಯಮಿಯೊಂದಿಗೆ ಕಾಣಿಸಿಕೊಂಡಿದ್ದಾರೆ.
ಯುವ ಉದ್ಯಮಿ ಹರ್ಷ್ ಮೆಹ್ತಾ ಎಂಬವರ ಜೊತೆ ಮಲೈಕಾ ಕಮಿಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಮಲೈಕಾ ಮತ್ತು ಹರ್ಷ್ ಪ್ರೇಮಿಗಳ ದಿನದಂದು ವಿದೇಶದಲ್ಲಿ ಜೊತೆಯಾಗಿದ್ದರು ಎಂಬ ಮಾತು ಕೇಳಿಬರುತ್ತಿದೆ. ಹರ್ಷ್ ಅವರಿಗೆ 33 ವರ್ಷ ಮತ್ತು ಮಲೈಕಾಗೆ 52 ವರ್ಷ. ಹರ್ಷ್ ಮೆಹ್ತಾ ವಜ್ರದ ವ್ಯಾಪಾರಿ ಮತ್ತು ಹರ್ಷ್ ಸಂಕಾಸ್ ಮ್ಯಾನೇಜ್ಮೆಂಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು. ಅವರು ಪ್ರಸಿದ್ಧ ಉದ್ಯಮಿ.

ನೋಡಿರಿ

