ಬರೀ ಬಟ್ಟೆ ಜೋಡಿಸಿ ಲಕ್ಷಾಂತರ ಲಾಭ ಗಳಿಸುತ್ತಾಳೆ ಈ ಯುವತಿ!

ಬರೀ ಬಟ್ಟೆ ಜೋಡಿಸಿ ಲಕ್ಷಾಂತರ ಲಾಭ ಗಳಿಸುತ್ತಾಳೆ ಈ ಯುವತಿ!

ಕೆಲವರಿಗೆ ಇಂಜಿನಿಯರ್​ ಆಗಬೇಕು, ಡಾಕ್ಟರ್​ ಆಗಬೇಕು, ಪೈಲೆಟ್​ ಆಗಬೇಕು ಎಂಬ ಕನಸಿರುತ್ತದೆ. ಆ ಕನಸನ್ನು ನನಸು ಮಾಡುವ ಮೂಲಕ ತಮ್ಮ ಕೆಲಸದತ್ತ ತೊಡಗಿಸಿಕೊಳ್ಳುತ್ತಾರೆ. ಇನ್ನು ಕೆಲವರಿಗೆ ಕೆಲಸವೇ ಕೈಡಿಯುವುದಿಲ್ಲ. ಆದರೆ ಇಲ್ಲೊಬ್ಬಳು ವಿದ್ಯಾಭ್ಯಾಸದ ಜೊತೆಗೆ ತನ್ನ ಹವ್ಯಾಸವನ್ನೇ ಉದ್ಯೋಗವನ್ನಾಗಿ ಪರಿವರ್ತಿಸಿ, ಕೈ ತುಂಬಾ ಸಂಬಳ ಪಡೆಯುತ್ತಿದ್ದಾಳೆ.

ಇದನ್ನೂ ಓದಿ: ಇನ್ನೂರು ಹುಡುಗಿಯರಿಗೆ ಹತ್ತು ಸಾವಿರ ಯುವಕರಿಂದ ಮದುವೆ ಅರ್ಜಿ!

ಇಂಗ್ಲೆಂಡಿನ ಲೀಸೆಸ್ಟರ್‌ನ ನಿವಾಸಿ ಮೂಲದ  19 ವರ್ಷದ ಎಲ್ಲಾ ಮೆಕ್ ಮಹೊನ್ ಎಂಬಾಕೆ ಅಪರಿಚಿತರ ವಾರ್ಡ್‌ರೋಬ್‌ ಗಳನ್ನು ಅಚ್ಚುಕಟ್ಟಾಗಿ ಜೋಡಿಸುವ ಮೂಲಕ ಲಕ್ಷಾಂತರ ಗಳಿಸುತ್ತಿದ್ದಾಳೆ.

ಎಲ್ಲಾ ಎಂಬಾಕೆಗೆ ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸುವುದು ಮತ್ತು ಅವುಗಳನ್ನು ಅಲಂಕರಿಸುವುದು ಅಚ್ಚು ಮೆಚ್ಚಿನ ಹವ್ಯಾಸ . ಇದೀಗ ತನ್ನ ದಿನದ 9 ಗಂಟೆಗಳನ್ನು ಬಣ್ಣಗಳನ್ನು ಆಧರಿಸಿ ಬಟ್ಟೆಗಳನ್ನು ಜೋಡಿಸುವುದು ಮತ್ತು ವಾರ್ಡ್‌ರೋಬ್ ಅಲಂಕಾರದಲ್ಲಿ ಕಳೆಯುತ್ತಾಳೆ. ಅಷ್ಟೇ ಅಲ್ಲ, ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವಾಗಲೇ ಮನೆಯ ಡೆಪಾಸಿಟ್‌ಗೆ ಅಗತ್ಯವಿರುವಷ್ಟು ಹಣವನ್ನು ಈ ಕೆಲಸದ ಮೂಲಕವೇ ಸಂಪಾದಿಸಿದ್ದಾಳೆ. ಪ್ರತಿ ಗಂಟೆಗೆ 200 ರಿಂದ 250 ರೂ ಫ್ಯಾಷನ್ ಡಿಸೈನರ್ ಆಗಿರುವ ಈಕೆ ತನ್ನ ಮನೆಯನ್ನು ತಾನು ಕಲಿತ ಕೋರ್ಸ್‌ಗೆ ಅನುಗುಣವಾಗಿ ಕಲಾತ್ಮಕ ರೀತಿಯಲ್ಲಿ ಅಲಂಕರಿಸಲು ತುಂಬಾ ಆದ್ಯತೆ ನೀಡುತ್ತಿದ್ದಾಳೆ.

ಜೀವನದಲ್ಲಿ ವ್ಯವಸ್ಥಿತವಾಗಿರುವುದು ಆಕೆಯ ಗೀಳುಗಳಲ್ಲಿ ಒಂದಾಗಿದ್ದು ಅವಳಿಗೆ ಉತ್ಸಾಹದ ವಿಷಯವಾಗಿದೆ. ಅಚ್ಚುಕಟ್ಟುತನದ ಬಗ್ಗೆ ಅವಳ ವ್ಯಾಮೋಹವನ್ನು ಕಂಡು ಸ್ನೇಹಿತರು ಅವಳನ್ನು ಕೀಟಲೆ ಮಾಡುತ್ತಿದ್ದರು. ಆದರೆ ಈಗವಳು ಅದೇ ಹವ್ಯಾಸದಿಂದಾಗಿ ಲಾಭದಾಯಕ ವ್ಯಾಪಾರವನ್ನು ನಿರ್ಮಿಸಿದ್ದಾಳೆ. ವಾರ್ಡ್‌ರೋಬ್ ಅನ್ನು ಅಂದವಾಗಿ ಜೋಡಿಸಲು ಎಲ್ಲಾ ಸುಮಾರು 3 ಗಂಟೆಗಳನ್ನು ತೆಗೆದುಕೊಳ್ಳುತ್ತಾಳೆ. ಅಲ್ಲದೇ ಪ್ರತಿ ಗಂಟೆಗೆ 200 ರಿಂದ 250 ರೂಪಾಯಿಗಳ ಶುಲ್ಕ ವಿಧಿಸುತ್ತಾಳೆ. ಅಲ್ಲದೇ, ಪ್ರತಿ ಎರಡು ವಾರಗಳಿಗೊಮ್ಮೆ ತನ್ನ ಬಳಿ ತಪ್ಪದೆ ಬರುವ 20 ಗ್ರಾಹಕರನ್ನು ಆಕೆ ಹೊಂದಿದ್ದಾಳೆ.

ಎಲ್ಲಾಗೆ ಈ ವ್ಯವಹಾರದ ಕಲ್ಪನೆ ಮೂಡಿದ್ದು ಆಕೆ ತನ್ನ ಮತ್ತು ತನ್ನ ಸ್ನೇಹಿತರ ವಾರ್ಡ್‌ರೋಬ್‌ಗಳನ್ನು ಅಲಂಕರಿಸುತ್ತಿದ್ದಾಗ. ಅವಳ ಅಚ್ಚುಕಟ್ಟುತನದ ಕೌಶಲ್ಯವನ್ನು ಗಮನಿಸಿದ ಅವಳ ಪ್ರೀತಿಪಾತ್ರರು ಅವಳ ಈ ಹವ್ಯಾಸವನ್ನು ವ್ಯಾಪಾರವಾಗಿ ಬದಲಾಯಿಸಲು ಒತ್ತಾಯಿಸಿದರು. ಇದರ ಪರಿಣಾಮವೇ ಸಿಂಡ್ರೆಲ್ಲಾ ಕ್ಲೋಸೆಟ್‌ನ ಸ್ಥಾಪನೆ. ಇದರಿಂದಾಗಿ ಎಲ್ಲಾ ಇದೀಗ ವರ್ಷಕ್ಕೆ 6 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಿದ್ದಾಳೆ.

suddiyaana