ಸೇನಾ ಯಂತ್ರೋಪಕರಣಗಳನ್ನು ಉತ್ಪಾದಿಸುವ ಕಂಪನಿಗಳಿಗೆ ಭಾರತದ ರಕ್ಷಣಾ ಪಡೆಯಿಂದ ಖಡಕ್ ಎಚ್ಚರಿಕೆ

ಸೇನಾ ಯಂತ್ರೋಪಕರಣಗಳನ್ನು ಉತ್ಪಾದಿಸುವ ಕಂಪನಿಗಳಿಗೆ ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಸೇನೆಗೆ ನೀಡುವ ಯುದ್ಧ ಉಪರಕಣಗಳಲ್ಲಿ ನಿಮ್ಮ ಲಾಭದ ಜತೆಗೆ ರಾಷ್ಟ್ರೀಯತೆ ಹಾಗೂ ದೇಶ ಪ್ರೇಮ ಕೂಡ ಇರಲಿ. ಕೆಲವು ಕಂಪನಿಗಳು ತಮ್ಮ ಉತ್ಪನ್ನಗಳು ಶೇ 70ರಷ್ಟು ದೇಶೀ ನಿರ್ಮಿತ ಎಂದು ಹೇಳಿಕೊಳ್ಳುತ್ತವೆ. ಆದರೆ, ವಾಸ್ತವದಲ್ಲಿ ಅದು ನಿಜವಾಗಿರುವುದಿಲ್ಲ. ರಕ್ಷಣೆ ಇಲಾಖೆಗೆ ನೀಡುವ ಯುದ್ಧ ಸಲಕರಣೆಗಳು ದೇಶಿಯವಾಗಿರಲಿ ಎಂಬುದು ನಮ್ಮ ನಿರೀಕ್ಷೆ ಎಂದು ಹೇಳಿದ್ದಾರೆ.
ಇನ್ನು ಇಪಿಯ (ತುರ್ತು ಸೇನಾ ಯಂತ್ರೋಪಕರಣ ಖರೀದಿ) ಬಗ್ಗೆಯೂ ಅವರು ಅಸಮಾಧನ ಹೊರ ಹಾಕಿದ್ದರು. ಐದನೇ ಮತ್ತು ಆರನೇ ಇಪಿ ಸಮಯದಲ್ಲಿ ಹಲವು ಲೋಪಗಳನ್ನು ಸೇನೆ ಪತ್ತೆ ಮಾಡಿದೆ. ಇದರಿಂದ ಸೇನೆಯ ಮೇಲೆ ದೊಡ್ಡ ಮಟ್ಟದ ಪರಿಣಾಮವನ್ನು ಉಂಟು ಮಾಡಿದೆ. ಉಪಕರಣಗಳನ್ನು ನೀಡುವಾಗ ಕಂಪನಿಗಳು ಅತಿಯಾಗಿ ಭರವಸೆ ನೀಡಿದೆ. ಆದರೆ ಆ ಯಾವ ಭರವಸೆಯನ್ನು ಸರಿಯಾಗಿ ಪೊರೈಸಿಲ್ಲ. ಇನ್ನು ನಾವು ಕೇಳಿದ ಸಮಯಕ್ಕೆ ಯುದ್ಧ ಸಾಮಾಗ್ರಿಗಳನ್ನು ನೀಡಲು ಕಂಪನಿಗಳು ವಿಫಲವಾಗಿರುವುದನ್ನು ಕೂಡ ನೋಡಿದ್ದೇನೆ. ಸಮಯದ ಚೌಕಟ್ಟಿನೊಳಗೆ ಕೆಲಸ ಮಾಡಲು ಕಲಿಯಿರಿ ಎಂದು ಖಾರವಾಗಿ ಹೇಳಿದರು.
ಇದನ್ನೂ ಓದಿ: ಬೆಳಗಾವಿ ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿಒಂದೇ ದಿನ 20 ಕೃಷ್ಣ ಮೃಗಗಳು ಸಾ*ವು
ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕಂಪನಿಗಳು ಸ್ಥಳೀಯ ತಂತ್ರಜ್ಞಾನಗಳ ಬಗ್ಗೆ ಹೆಚ್ಚು ಗಮನ ನೀಡುತ್ತಿಲ್ಲ, ದೇಶೀಯ ವಸ್ತುಗಳಿಗೆ ಮೊದಲು ಗಮನ ನೀಡಿ. ಅವುಗಳನ್ನು ಮರೆಮಾಚುವ ಕೆಲಸ ಮಾಡಬೇಡಿ. ಹಾಗೂ ಒಂದು ಮಾತು ಮಾತ್ರ ನೆನೆಪಿನಲ್ಲಿಟ್ಟುಕೊಳ್ಳಿ, ಸೇನೆ ಜತೆಗೆ ಒಂದು ಒಪ್ಪಂದವನ್ನು ಮಾಡಿಕೊಂಡಿದ್ದೀರಾ, ಆ ಒಪ್ಪಂದದಂತೆ ನಡೆದುಕೊಳ್ಳಿ, ಸೇನಾ ತಂತ್ರಜ್ಞಾನದಲ್ಲಿ ಲೋಪ ಕಂಡು ಬಂದರೆ, ಅದು ದೇಶಕ್ಕೆ ಅಪಾಯ, ನಾವು ಕೇಳಿದ ಸಮಯದಲ್ಲಿ ಉಪಕರಣಗಳನ್ನು ಒದಗಿಸುವುದು ನಿಮ್ಮ ಕರ್ತವ್ಯ ಎಂದು ಹೇಳಿದ್ದಾರೆ.
ಹಲವು ಕಂಪನಿಗಳು ಹೇಳುತ್ತವೆ, ನಾನು ಶೇಕಾಡ 70ರಷ್ಟು ದೇಶೀಯ ತಂತ್ರಜ್ಞಾನಗಳನ್ನೇ ಬಳಸುತ್ತೇವೆ ಎಂದು, ಆದರೆ ಸತ್ಯ ನಮಗೆ ತಿಳಿದಿದೆ. ಸುಳ್ಳು ಹೇಳುವ ಅಥವಾ ಮೋಸ ಮಾಡುವ ಮುನ್ನ ಯೋಚನೆ ಮಾಡಿ ನೀವು ವ್ಯವಹಾರ ಮಾಡುತ್ತಿರುವುದು ಬಲಿಷ್ಠ ಸೇನೆಯ ಜತೆಗೆ ಎಂದು. ನಮಗೆ ನೀಡುವ ಸೇನಾ ಉಪಕರಣಗಳು ಕೇವಲ ನಿಮ್ಮ ಲಾಭಕ್ಕಾಗಿ ಮಾತ್ರವಲ್ಲ, ಅದು ದೇಶದ ರಕ್ಷಣೆ ಎಂಬುದು ನೆನೆಪಿರಲಿ ಎಂದು ಹೇಳಿದ್ದಾರೆ.

ನೋಡಿರಿ

