ಈ ಸಲ ಮಕರ ಸಂಕ್ರಾಂತಿ ಜ.14 ಅಥವಾ ಜ.15 – ಇಲ್ಲಿದೆ ಕಂಪ್ಲೀಟ್ ಮಾಹಿತಿ

ಪ್ರತಿ ವರ್ಷದಂತೆ 2026ರ ಸಂಕ್ರಾಂತಿಯ ಕುರಿತು ಜನವರಿ 14 ಅಥವಾ 15ರಂದು ಆಚರಿಸಬೇಕೇ ಎಂಬ ಗೊಂದಲ ಅನೇಕರನ್ನು ಕಾಡುತ್ತಿದೆ. ನಾವು ಯಾವ ದಿನ ಮಕರ ಸಂಕ್ರಾಂತಿ ಅನ್ನೋದ್ದನ್ನ ನೋಡೋಣ.
ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಪುಣ್ಯಕಾಲವನ್ನೇ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ಈ ಬಾರಿಯ ಮಕರ ಸಂಕ್ರಾಂತಿಗೆ ‘ಷಟ್ತಿಲಾ ಏಕಾದಶಿ’ಯ ವಿಶೇಷ ಕಾಕತಾಳೀಯವೂ ಸೇರಿಕೊಂಡಿದೆ. ದೃಕ್ ಪಂಚಾಂಗದ ಪ್ರಕಾರ, 2026ರ ಮಕರ ಸಂಕ್ರಾಂತಿಯನ್ನು ಜನವರಿ 14, ಬುಧವಾರದಂದು ಆಚರಿಸಲಾಗುತ್ತದೆ. ಈ ದಿನ ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯನ ಈ ಗೋಚಾರವು ಹಗಲಿನ ವೇಳೆಯಲ್ಲೇ ಸಂಭವಿಸುವುದರಿಂದ, ಈ ವರ್ಷ ಜನವರಿ 15ಕ್ಕೆ ಹಬ್ಬ ಆಚರಿಸುವ ಅಗತ್ಯವಿಲ್ಲ.
ದೇಶಾದ್ಯಂತ ಜನವರಿ 14 ರಂದೇ ಸಂಕ್ರಾಂತಿಯ ಸಡಗರ ಮನೆಮಾಡಲಿದೆ ಎಂದು ಖಚಿತಪಡಿಸಲಾಗಿದೆ. ಶುಭ ಮುಹೂರ್ತ – ಪಂಚಾಂಗದ ಮಾಹಿತಿ ಅನುಸಾರ, 2026ರ ಜನವರಿ 14ರಂದು ಸೂರ್ಯನು ಮಧ್ಯಾಹ್ನ ಮಕರ ರಾಶಿಗೆ ಪ್ರವೇಶಿಸುತ್ತಾನೆ. – ಸಂಕ್ರಾಂತಿಯ ಪುಣ್ಯಕಾಲವು ಮಧ್ಯಾಹ್ನ 2:43 ರಿಂದ 3:06 ರವರೆಗೆ (ಕೆಲವು ಪಂಚಾಂಗಗಳ ಪ್ರಕಾರ 2:49 ರಿಂದ 3:13 ರವರೆಗೆ) ಇರುತ್ತದೆ.
ಮಹಾ ಪುಣ್ಯಕಾಲ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳಲು ಮಕರ ಸಂಕ್ರಾಂತಿಯ ‘ಮಹಾ ಪುಣ್ಯಕಾಲ’ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಈ ಮಹಾ ಪುಣ್ಯಕಾಲವು ಬೆಳಿಗ್ಗೆ 07:15 ರಿಂದ 09:00 ರವರೆಗೆ ವಿಸ್ತರಿಸಿದೆ. ಅಲ್ಲದೆ, ಮಧ್ಯಾಹ್ನ 02:48 ರಿಂದ 03:42 ರವರಗೆಯೂ ಇನ್ನೊಂದು ಮಹಾ ಪುಣ್ಯಕಾಲವಿರುತ್ತದೆ. ಈ ಅವಧಿಯಲ್ಲಿ ಮಾಡುವ ಧಾರ್ಮಿಕ ವಿಧಿಗಳು ವಿಶೇಷ ಫಲ ನೀಡುತ್ತವೆ. ಪವಿತ್ರ ನದಿ ಸ್ನಾನ ಸಂಕ್ರಾಂತಿಯ ದಿನದಂದು ಪವಿತ್ರ ನದಿ ಸ್ನಾನಕ್ಕೆ ಹೆಚ್ಚಿನ ಮಹತ್ವವಿದೆ. ನದಿಗಳಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ನಾಶವಾಗುತ್ತವೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಸ್ನಾನಕ್ಕೆ ಅತ್ಯಂತ ಶುಭ ಸಮಯ ಬೆಳಿಗ್ಗೆ 09:03 ರಿಂದ 10:48 ರವರೆಗೆ ಎಂದು ಸೂಚಿಸಲಾಗಿದೆ. ಸೂರ್ಯೋದಯದ ನಂತರ, ಅಂದರೆ ಸುಮಾರು 07:15 ರ ನಂತರ ಮಾಡುವ ಸ್ನಾನವು ಪುಣ್ಯದಾಯಕವೆಂದು ಶಾಸ್ತ್ರವು ಹೇಳುತ್ತದೆ.
ಮಹಾ ಪುಣ್ಯಕಾಲ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳಲು ಮಕರ ಸಂಕ್ರಾಂತಿಯ ‘ಮಹಾ ಪುಣ್ಯಕಾಲ’ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಈ ಮಹಾ ಪುಣ್ಯಕಾಲವು ಬೆಳಿಗ್ಗೆ 07:15 ರಿಂದ 09:00 ರವರೆಗೆ ವಿಸ್ತರಿಸಿದೆ. ಅಲ್ಲದೆ, ಮಧ್ಯಾಹ್ನ 02:48 ರಿಂದ 03:42 ರವರಗೆಯೂ ಇನ್ನೊಂದು ಮಹಾ ಪುಣ್ಯಕಾಲವಿರುತ್ತದೆ. ಈ ಅವಧಿಯಲ್ಲಿ ಮಾಡುವ ಧಾರ್ಮಿಕ ವಿಧಿಗಳು ವಿಶೇಷ ಫಲ ನೀಡುತ್ತವೆ
ಪವಿತ್ರ ನದಿ ಸ್ನಾನ ಸಂಕ್ರಾಂತಿಯ ದಿನದಂದು ಪವಿತ್ರ ನದಿ ಸ್ನಾನಕ್ಕೆ ಹೆಚ್ಚಿನ ಮಹತ್ವವಿದೆ. ನದಿಗಳಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ನಾಶವಾಗುತ್ತವೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಸ್ನಾನಕ್ಕೆ ಅತ್ಯಂತ ಶುಭ ಸಮಯ ಬೆಳಿಗ್ಗೆ 09:03 ರಿಂದ 10:48 ರವರೆಗೆ ಎಂದು ಸೂಚಿಸಲಾಗಿದೆ. ಸೂರ್ಯೋದಯದ ನಂತರ, ಅಂದರೆ ಸುಮಾರು 07:15 ರ ನಂತರ ಮಾಡುವ ಸ್ನಾನವು ಪುಣ್ಯದಾಯಕವೆಂದು ಶಾಸ್ತ್ರವು ಹೇಳುತ್ತದೆ.

ನೋಡಿರಿ

