RCB ಪ್ಲಸ್ & ಮೈನಸ್ ಏನು? – ಬೌಲಿಂಗ್ ಬ್ರಹ್ಮಾಸ್ತ್ರವಾಗ್ತಾರಾ ಭುವಿ?
ಫ್ರಾಂಚೈಸಿ BEST ಚಾಯ್ಸ್ ಯಾರು?
ಐಪಿಎಲ್ ಮೆಗಾ ಹರಾಜಿನಲ್ಲಿ ಕೋಟಿ ಕೋಟಿ ಸುರಿದು ಬಲಿಷ್ಠ ತಂಡಗಳನ್ನ ಕಟ್ಟಿರೋ ಫ್ರಾಂಚೈಸಿಗಳು ಪ್ಲೇಯಿಂಗ್ 11 ಸೆಟ್ ಮಾಡಿಕೊಳ್ತಿವೆ. 22 ಆಟಗಾರರ ಭದ್ರಕೋಟೆಯನ್ನೇ ಕಟ್ಟಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ 18ನೇ ಸೀಸನ್ಗೆ ಕಪ್ ಗೆಲ್ಲೋ ಗುರಿಯನ್ನ ಹೊಂದಿದೆ. ಬಟ್ ಟ್ರೋಫಿ ಟಾರ್ಗೆಟ್ ರೀಚ್ ಆಗೋದು ಅಷ್ಟು ಸುಲಭ ಇಲ್ಲ. ಯಾಕಂದ್ರೆ ಬೆಂಗಳೂರು ಟೀಮ್ನಲ್ಲಿ ಪ್ಲಸ್ ಜೊತೆ ಮೈನಸ್ಗಳೂ ಇವೆ. ಹಾಗಾದ್ರೆ ಬೆಂಗಳೂರು ಟೀಮ್ನ ಸ್ಟ್ರೆಂಥ್ ಏನು? ವೀಕ್ನೆಸ್ ಏನು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಪಿಂಕ್ ಟೆಸ್ಟಲ್ಲಿ ಭಾರತದ ಪ್ಲಾಫ್ ಶೋ! – ರೋಹಿತ್ ಶರ್ಮಾ ತಲೆದಂಡ ಫಿಕ್ಸ್
17 ಸೀಸನ್ಗಳನ್ನ ಕಂಡಿರೋ ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ಮೋಸ್ಟ್ ಪಾಪುಲರ್ ಟೀಂ. 10 ಫ್ರಾಂಚೈಸಿಗಳ ಪೈಕಿ ಆರ್ಸಿಬಿ ಮ್ಯಾಚ್ ಇದ್ದಾಗ ಸ್ಟೇಡಿಯಮ್ಗಳಲ್ಲಿ ಇರುವಂಥ ಸೌಂಡ್ ಬೇರೆ ಲೆವೆಲ್ನಲ್ಲೇ ಇರುತ್ತೆ. ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಯಶ್ ದಯಾಳ್ ಅವರನ್ನು ರಿಟೈನ್ ಮಾಡಿಕೊಂಡಿದ್ದ ರಾಯಲ್ ಚಾಲೆಂಜರ್ಸ್ ಹರಾಜು ಪ್ರಕ್ರಿಯೆ ನಡೆದ 2 ದಿನಗಳಲ್ಲಿ 19 ಆಟಗಾರರನ್ನು ಖರೀದಿಸಿದೆ. ಈ ಮೂಲಕ ತಂಡದ ಬಲವನ್ನು 22ಕ್ಕೆ ಏರಿಸಿಕೊಂಡಿದೆ. ಇವರಲ್ಲಿ 14 ಭಾರತೀಯ ಆಟಗಾರಾಗಿದ್ದಾರೆ. ಒಂದು ಫ್ರಾಂಚೈಸಿಗೆ 8 ವಿದೇಶಿ ಆಟಗಾರರ ಕೋಟಾ ನಿಗದಿಪಡಿಸಲಾಗಿದ್ದು ಅಷ್ಟನ್ನೂ ಆರ್ ಸಿಬಿ ಭರ್ತಿ ಮಾಡಿಕೊಂಡಿದೆ. ಬಟ್ ಈ ಸಲ ಹರಾಜಿನಲ್ಲಿ ಬೆಂಗಳೂರು ಟೀಂ ಸ್ಟಾರ್ ಆಟಗಾರರ ಮೇಲೆ ಬಿಡ್ ಮಾಡಲಿಲ್ಲ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆದ್ರೂ ಕೂಡ ಆ ಬಳಿಕ ಮ್ಯಾನೇಜ್ಮೆಂಟ್ನ ಸ್ಟ್ರಾಟರ್ಜಿ ಎಲ್ಲರಿಗೂ ಅರ್ಥ ಆಗಿದೆ. ಬ್ಯಾಲೆನ್ಸಡ್ & ಬೆಸ್ಟ್ ಟೀಂ ಕಟ್ಟಿರೋದಕ್ಕೆ ಅಪ್ರಿಶಿಯೇಟ್ ಮಾಡ್ತಿದ್ದಾರೆ. ಹೀಗಿದ್ರೂ ಕೆಲ ಮೈನಸ್ಗಳೂ ತಂಡದಲ್ಲಿವೆ.
ಐಪಿಎಲ್ ಹರಾಜಿನಲ್ಲಿ ಬೆಸ್ಟ್ & ಬ್ಯಾಲೆನ್ಸಡ್ ಟೀಂ ಕಟ್ಟಿದ ಫ್ರಾಂಚೈಸಿ!
ಐಪಿಎಲ್ ಸೀಸನ್-18ರ ಬಿಡ್ಡಿಂಗ್ನಲ್ಲಿ ಆರ್ಸಿಬಿ ಸ್ಟಾರ್ ಆಟಗಾರರನ್ನೇ ಖರೀದಿ ಮಾಡಿದೆ. ವರ್ಲ್ಡ್ ಕ್ಲಾಸ್ ಸ್ಟಾರ್ಗಳ ಜೊತೆಗೆ ಕೆಲ ಅಚ್ಚರಿಯ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ. ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟೀದಾರ್, ಜೇಕಬ್ ಬೆಥಲ್ ಅವರಂತಹ ಡೇಂಜರಸ್ ಟಾಪ್ ಆರ್ಡರ್ ಬ್ಯಾಟರ್ಗಳಿದ್ದಾರೆ. ಮಿಡಲ್ ಆರ್ಡರ್ನಲ್ಲಿ ಲಿಯಾಮ್ ಲಿವಿಂಗ್ಸ್ಟೋನ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ ಇರೋದ್ರಿಂದ ಪಂದ್ಯದ ಗತಿಯನ್ನೇ ಬದಲಿಸಬಲ್ಲರು. ಅದೆಲ್ಲಕ್ಕಿಂತ ಹೆಚ್ಚಾಗಿ ಜೋಶ್ ಹೇಜಲ್ವುಡ್, ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್ ಬೌಲಿಂಗ್ನಲ್ಲಿ ಸ್ಟಾರ್ ಬ್ಯಾಟ್ಸ್ಮನ್ಗಳನ್ನೇ ನಡುಗಿಸಬಲ್ಲರು. ಅದ್ರಲ್ಲೂ ಲಂಕನ್ ಪೇಸರ್ ನುವಾನ್ ತುಷಾರಾ, ಆಫ್ರಿಕನ್ ಮಿಸೈಲ್ ಲುಂಗಿ ಎನ್ಗಿಡಿ ಅವರಂತಹ ಎಕ್ಸ್ಪಿರಿಯನ್ಸ್ ಬೌಲಿಂಗ್ ಅಟ್ಯಾಕ್ ಜೊತೆಗೆ ಯಶ್ ದಯಾಳ್, ಮನೋಜ್ ಬಾಂಡೆಗೆಯಂತಹ ಪ್ರತಿಭಾವಂತ ಯುವ ಪಡೆಯ ಬಲ ತಂಡಕ್ಕಿದೆ.
ಕ್ವಾಲಿಟಿ ಸ್ಪಿನ್ನರ್ ಗಳಿಗೆ ಬ್ಯಾಕಪ್ ಹ್ಯಾಂಡ್ ಗಳ ಕೊರತೆ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೊದ್ಲಿಂದಲೂ ಇರೋ ಸಮಸ್ಯೆ ಅಂದ್ರೆ ಬೌಲಿಂಗ್ ವಿಭಾಗ. ಸದ್ಯ ಮೇಲ್ನೋಟಕ್ಕೆ ಬಲಿಷ್ಠವಾಗಿ ಕಾಣ್ತಿರುವ ಬೆಂಗಳೂರು ತಂಡದಲ್ಲಿ ವಿಕ್ನೇಸ್ ಕೂಡ ಇದೆ. ಇಂಡಿಯನ್ ಆಟಗಾರರ ಬದಲಿಗೆ ವಿದೇಶಿ ಆಟಗಾರರನ್ನೇ ಹೆಚ್ಚು ನೆಚ್ಚಿಕೊಂಡಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಕ್ವಾಲಿಟಿ ಸ್ಪಿನ್ನರ್ಗಳ ಖರೀದಿಯಲ್ಲೂ ಎಡವಿದೆ. ಸ್ವಪ್ನಿಲ್ ಸಿಂಗ್, ಸುಯಶ್ ಶರ್ಮಾ ಸ್ಪೆಷಲಿಷ್ಟ್ ಸ್ಪಿನ್ನರ್ಗಳಾಗಿದ್ರೂ ಇವರಿಗೆ ಸೂಕ್ತ ಬ್ಯಾಕ್ ಆಪ್ ನೀಡುವಂತ ಆಟಗಾರರ ಕೊರತೆಯೂ ಎದ್ದು ಕಾಣ್ತಿದೆ. ಬೆಸ್ಟ್ ಪ್ಲೇಯಿಂಗ್ ಇಲೆವೆನ್ ಕಟ್ಟಲು ಮುಂದಾದ್ರೆ ಬ್ಯಾಟಿಂಗ್ ಡೆಪ್ತ್ ಇಲ್ಲದಂತಾಗುತ್ತೆ.
ಹ್ಯಾಟ್ರಿಕ್ ವಿಕೆಟ್ ಕಿತ್ತು ಭರವಸೆ ಮೂಡಿಸಿದ ಭುವನೇಶ್ವರ್!
ಟೀಮ್ ಇಂಡಿಯಾದ ಸ್ವಿಂಗ್ ಕಿಂಗ್ ಎಂದೇ ಕರೆಸಿಕೊಳ್ಳೋ ಭುವನೇಶ್ವರ್ ಕುಮಾರ್ ಈ ಬಾರಿಯ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಬೆಸ್ಟ್ ಪಿಕ್ ಅನ್ಬೋದು. ಮೆಗಾ ಹರಾಜಿನ ಮೂಲಕ ಭುವಿಯನ್ನು ಬರೋಬ್ಬರಿ 10.75 ರೂ.ಗೆ ಖರೀದಿಸಿದೆ. ಇಷ್ಟು ಹಣ ಕೊಟ್ಟಿದ್ದು ಸಾರ್ಥಕ ಅನ್ನುಸ್ತಿದೆ. ಇತ್ತೀಚೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಭುವನೇಶ್ವರ್ ಕುಮಾರ್ ಜಾರ್ಖಂಡ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದು ಸಂಚಲನ ಮೂಡಿಸಿದ್ದಾರೆ.
ಪವರ್ ಪ್ಲೇನ ಅತ್ಯಂತ ಯಶಸ್ವಿ ಬೌಲರ್ ಭುವನೇಶ್ವರ್ ಕುಮಾರ್!
ಬೌಲಿಂಗ್ ಜಾದೂ ಮೂಲಕವೇ ಎದುರಾಳಿ ಟೀಂ ಕಾಡುವ ಭುವನೇಶ್ವರ್ ಪವರ್ಪ್ಲೇನಲ್ಲಿ ಅತ್ಯಧಿಕ ವಿಕೆಟ್ ಪಡೆದ ವೇಗಿ ಎಂಬ ದಾಖಲೆ ಬರೆದಿದ್ದಾರೆ. 173 ಪಂದ್ಯಗಳಲ್ಲಿ ಮೊದಲ 6 ಓವರ್ಗಳಲ್ಲಿ ಚೆಂಡೆಸೆದಿರುವ ಭುವಿ ಒಟ್ಟು 74 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಪವರ್ಪ್ಲೇನ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ಹಾಗೇ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಮೇಡನ್ ಓವರ್ ಎಸೆದ ಬೌಲರ್ ಎಂಬ ದಾಖಲೆ ಕೂಡ ಭುವನೇಶ್ವರ್ ಕುಮಾರ್ ಹೆಸರಿನಲ್ಲಿದೆ. 176 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವಂಥ ಭುವಿ 14 ಮೇಡನ್ ಓವರ್ ಎಸೆದು ಈ ಭರ್ಜರಿ ದಾಖಲೆ ಬರೆದಿದ್ದಾರೆ. ಡೆತ್ ಓವರ್ಗಳಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಭಾರತೀಯ ವೇಗಿ ಎಂಬ ದಾಖಲೆ ಕೂಡ ಭುವನೇಶ್ವರ್ ಕುಮಾರ್ ಹೆಸರಿನಲ್ಲಿದೆ. 139 ಪಂದ್ಯಗಳಲ್ಲಿ ಕೊನೆಯ 5 ಓವರ್ಗಳಲ್ಲಿ ಬೌಲಿಂಗ್ ಮಾಡಿರುವ ಭುವಿ ಒಟ್ಟು 85 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಯಶಸ್ವಿ ಡೆತ್ ಓವರ್ ಬೌಲರ್ ಎನಿಸಿಕೊಂಡಿದ್ದಾರೆ. ಇನ್ನು ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಡಾಟ್ ಬಾಲ್ ಎಸೆದ ದಾಖಲೆ ಕೂಡ ಭುವನೇಶ್ವರ್ ಕುಮಾರ್ ಹೆಸರಿನಲ್ಲಿದೆ. ಐಪಿಎಲ್ನಲ್ಲಿ ಈವರೆಗೆ 3910 ಎಸೆತಗಳನ್ನು ಎಸೆದಿರುವ ಭುವಿ 181 ವಿಕೆಟ್ಗಳನ್ನು ಕಬಳಿಸಿದ್ದಾರೆ. ಹಾಗೇ 1670 ಎಸೆತಗಳಲ್ಲಿ ಯಾವುದೇ ರನ್ ನೀಡಿಲ್ಲ ಎಂಬುದು ವಿಶೇಷ.
ಒಟ್ನಲ್ಲಿ ವಿರಾಟ್ ಕೊಹ್ಲಿಗೆ ಓಪನರ್ ಆಗಿ ಫಿಲ್ ಸಾಲ್ಟ್ನಂತ ಬಲಿಷ್ಠ ಆಟಗಾರನನ್ನ ಖರೀದಿಸಿರುವ ಆರ್ಸಿಬಿ, ಫಿನಿಷರ್ ರೋಲ್ ಪ್ಲೇ ಮಾಡಬಲ್ಲ 7 ಆಲ್ರೌಂಡರ್ಗಳಿಗೆ ಮಣೆ ಹಾಕಿದೆ. ಚಿನ್ನಸ್ವಾಮಿಗೆ ಹೊಂದಿಕೊಳ್ಳುವ ಫಾಸ್ಟ್ ಬೌಲಿಂಗ್ ಅಟ್ಯಾಕರ್ಗಳನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಸದ್ಯಕ್ಕೆ ಕ್ವಾಲಿಟಿ ಸ್ಪಿನ್ನರ್ಗಳ ಪಿಕ್ ಮಾಡುವಲ್ಲಿ ಎಡವಿರುವುದು ಮೇಲ್ನೋಟಕ್ಕೆ ಕಾಣಿಸ್ತಿದೆ. ಬಟ್ ಈ ವಿಕ್ನೇಸ್ ಮೆಟ್ಟಿನಿಂತು ಆನ್ಫೀಲ್ಡ್ನಲ್ಲಿ ಸಿಡಿದೇಳೋ ಎಲ್ಲಾ ತಾಕತ್ತು ತಂಡಕ್ಕಿದೆ. ಹಾಗೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ದೇವದತ್ ಪಡಿಕ್ಕಲ್ ಮತ್ತು ಮನೋಜ್ ಭಾಂಡಗೆ ಅವರನ್ನು ಹರಾಜಿನಲ್ಲಿ ಖರೀದಿಸುವ ಮೂಲಕ ಕರ್ನಾಟಕದ ಇಬ್ಬರು ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಫೈನಲಿ 22 ಆಟಗಾರರ ಬಳಗದಲ್ಲಿ ಟೋಟಲ್ಲಾಗಿ ಹೇಳ್ಬೇಕು ಅಂದ್ರೆ ತಂಡದ ಸ್ಟ್ರೆಂಥ್ ತುಂಬಾ ಚೆನ್ನಾಗಿದೆ. ಬಟ್ ಇದನ್ನ ಹೇಗೆ ಬಳಸಿಕೊಳ್ತಾರೆ? ಆಟಗಾರರು ಹೇಗೆ ಪ್ರದರ್ಶನ ನೀಡ್ತಾರೆ ಅನ್ನೋ ಕುತೂಹಲವೂ ಇದೆ.