ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ, ಆಶ್ಲೇಷ ಬಲಿ, ಮತ್ತು ನಾಗಪ್ರತಿಷ್ಠೆ ರದ್ದು – ಇದ್ದಕ್ಕಿದ್ದಂತೆ ಸೇವೆ ರದ್ದು ಮಾಡಿದ್ದೇಕೆ ಗೊತ್ತಾ?

ಪುರಾಣ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪಸಂಸ್ಕಾರ, ಆಶ್ಲೇಷ ಬಲಿ, ಮತ್ತು ನಾಗಪ್ರತಿಷ್ಠೆ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಪುರಾಣ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಗಸ್ಟ್ 23 ಹಾಗೂ 24ರಂದು ಕೆಲವು ಪ್ರಮುಖ ಸೇವೆಗಳು ನಡೆಯುವುದಿಲ್ಲ ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.ಆದರೆ, ಭಕ್ತರು ಶ್ರೀ ದೇವರ ದರ್ಶನ ಪಡೆಯಬಹುದು ಮತ್ತು ಇತರೆ ನಿತ್ಯ ಪೂಜೆಗಳು ಎಂದಿನಂತೆ ನಡೆಯಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಆಗಸ್ಟ್ 23ರಂದು ಏಕಾದಶಿ ಹಾಗೂ ಆಗಸ್ಟ್ 24ರಂದು ಅತಿರಿಕ್ತ ಏಕಾದಶಿ ಇರುವ ಹಿನ್ನೆಲೆಯಲ್ಲಿ ಈ ಎರಡು ದಿನಗಳಲ್ಲಿ ಭಕ್ತರಿಗೆ ಸರ್ಪಸಂಸ್ಕಾರ, ಆಶ್ಲೇಷ ಬಲಿ ಹಾಗೂ ನಾಗ ಪ್ರತಿಷ್ಠೆ ಸೇರಿದಂತೆ ನಿರ್ದಿಷ್ಟ ಸೇವೆಗಳನ್ನು ನಡೆಸಲಾಗುವುದಿಲ್ಲ. ಹೀಗಾಗಿ ಈ ಸೇವೆಗಳನ್ನು ನೆರವೇರಿಸಲು ಆಗಮಿಸುವ ಭಕ್ತರು ದಿನಾಂಕವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಧಾರ್ಮಿಕ ಕಾರ್ಯಕ್ರಮಗಳನ್ನು ಯೋಜಿಸುವಂತೆ ದೇವಳದ ಆಡಳಿತ ಮಂಡಳಿ ತಿಳಿಸಿದೆ.
ಇದನ್ನೂ ಓದಿ: ನಿಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯ ಬೇಕಾ? – ಶನಿವಾರ ಈ ಕೆಲಸಗಳನ್ನ ಮಾಡಿ
ಏಕಾದಶಿ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ವಾತಾವರಣ ಇರಲಿದ್ದು, ದೂರದ ಊರುಗಳಿಂದ ಆಗಮಿಸುವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನ ಪಡೆಯುವ ನಿರೀಕ್ಷೆಯಿದೆ. ಇದೇ ವೇಳೆ, ಸರ್ಪಸಂಸ್ಕಾರ, ಆಶ್ಲೇಷ ಬಲಿ ಹಾಗೂ ನಾಗ ಪ್ರತಿಷ್ಠೆಯಂತಹ ಪ್ರಮುಖ ಸೇವೆಗಳಿಗೆ ಮುಂಗಡವಾಗಿ ಆಗಮಿಸಲು ಉದ್ದೇಶಿಸಿರುವ ಭಕ್ತರು ಆಗಸ್ಟ್ 23 ಮತ್ತು 24ರಂದು ಸೇವೆಗಳು ಇರುವುದಿಲ್ಲ ಎಂಬುದನ್ನು ಗಮನಿಸಿ, ಪರ್ಯಾಯ ದಿನಾಂಕಗಳಲ್ಲಿ ಸೇವೆ ನೆರವೇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಭಕ್ತರಿಗೆ ಯಾವುದೇ ಗೊಂದಲ ಉಂಟಾಗದಂತೆ ಸೇವೆಗಳ ಕುರಿತು ಮಾಹಿತಿ ಪಡೆದು ದೇವಸ್ಥಾನಕ್ಕೆ ಭೇಟಿ ನೀಡುವಂತೆ ದೇವಳದ ಆಡಳಿತ ಮನವಿ ಮಾಡಿದೆ.

ನೋಡಿರಿ

