ಅರಮನೆ ಬಳಿ ಭಾರಿ ಭದ್ರತಾ ಲೋಪ? – ಸಿಸಿಟಿವಿ ಇದ್ರೂ ಸೆರೆಯಾಗಿಲ್ಲ ಸ್ಫೋ*ಟದ ದೃಶ್ಯ!

ಅರಮನೆ ಬಳಿ ಭಾರಿ ಭದ್ರತಾ ಲೋಪ? – ಸಿಸಿಟಿವಿ ಇದ್ರೂ ಸೆರೆಯಾಗಿಲ್ಲ ಸ್ಫೋ*ಟದ ದೃಶ್ಯ!

ಮೈಸೂರು ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ ನಡೆದ ಹೀಲಿಯಂ ಗ್ಯಾಸ್‌ ಸಿಲಿಂಡರ್‌ ಸ್ಟೋಟ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ತಿದೆ. ಈ ಪ್ರಕರಣದ ತನಿಖೆ ತೀವ್ರಗೊಂದಿದೆ. ಇದೀಗ ಸಿಲಿಂಡರ್ ಸ್ಪೋಟ ಪ್ರಕರಣದಿಂದ ಅರಮನೆಯ ಭದ್ರತಾ ವೈಫಲ್ಯ ಬಟಬಯಲಾಗಿದೆ.

ಇದನ್ನೂ ಓದಿ: ಉಪ್ಪು V/s ಸಕ್ಕರೆ.. ಹಾರ್ಟ್‌ಗೆ ಯಾವುದು  ಡೇಂಜರ್?‌ – ನಿಮ್ಮ ಹೃದಯ ಜೋಪಾನ!

ಮೈಸೂರು ಅರಮನೆಗೆ ವರ್ಷದಿಂದ ವರ್ಷಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಅರಮನೆಯ ಆವರಣ ಮತ್ತು ಸುತ್ತಮುತ್ತಲಿನ ರಸ್ತೆಯಲ್ಲಿ ಸಿಸಿಟಿವಿ ಹಾಕಲಾಗಿದೆ. ಅದರಲ್ಲೂ ಸ್ಫೋಟ ಸಂಭವಿಸಿದ ಜಾಗದ ಸುಮಾರು 20 ಅಡಿ ದೂರದಲ್ಲಿ 360 ಡಿಗ್ರಿ ಸಿಸಿಟಿವಿಯನ್ನು ಹಾಕಲಾಗಿದೆ. ಆದರೆ ಈ ಸಿಸಿಟಿವಿಯಲ್ಲಿ ಸ್ಫೋಟದ ದೃಶ್ಯ ಸೆರೆಯಾಗಿಲ್ಲ. ಈ ಸ್ಪೋಟದ ಮೂಲಕ ಅರಮನೆಯ ಭದ್ರತಾ ವೈಫಲ್ಯ ಬಟಬಯಲಾಗಿದೆ. ಭದ್ರತೆ ವಿಚಾರದಲ್ಲಿ ಅರಮನೆ ಆಡಳಿತ ಮಂಡಳಿಗೆ ಇರುವ ನಿರ್ಲಕ್ಷ್ಯ ಎಂಥದ್ದು ಎನ್ನವುದು ಈ ಪ್ರಕರಣದಿಂದ ಸಾಬೀತಾಗಿದೆ.

ಇನ್ನು ಮೈಸೂರು ಅರಮನೆ ಬಳಿ ಹೀಲಿಯಂ​ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೃತರ ಸಂಖ್ಯೆ 3ಕ್ಕೆ ಏರಿಕೆ ಆಗಿದೆ. ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಂಗಳೂರು ಮೂಲದ ಲಕ್ಷ್ಮೀ ಎನ್ನುವವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಲಕ್ಷ್ಮೀ ಕುಟುಂಬದವರ ಜೊತೆಗೆ ಮೈಸೂರು ಪ್ರವಾಸಕ್ಕೆ ಬಂದಿದ್ದ ವೇಳೆ ದುರಂತ ಸಂಭವಿಸಿತ್ತು. ಇನ್ನು ಲಕ್ಷ್ಮೀ ಅವರ ಮಗಳು ಡಿಂಪಲ್​​ ದುರಂತದಿಂದ ಬಚಾವ್‌ ಆಗಿದ್ದಾರೆ. ಸದ್ಯ ತಾಯಿ ಮೃತಪಟ್ಟ ಹಿನ್ನೆಲೆ ಪುತ್ರಿ ಕಣ್ಣೀರು ಹಾಕಿದ್ದಾಳೆ.

Shwetha M