ಸಿಕ್ಕಿಂನಲ್ಲಿ ಭಾರಿ ಹಿಮಪಾತ – 6 ಪ್ರವಾಸಿಗರು ಸಾವು, 11 ಮಂದಿಗೆ ಗಾಯ
ಗುವಾಹಟಿ: ಸಿಕ್ಕಿಂನ ನಾಥುಲಾ ಮೌಂಟೇನ್ ಪಾಸ್‌ನಲ್ಲಿ ಮಂಗಳವಾರ ಭಾರೀ ಹಿಮಪಾತ ಸಂಭವಿಸಿದ್ದು 6 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದಾರೆ. 11 ಮಂದಿ ಗಾಯಗೊಂಡಿದ್ದಾರೆ ಅಂತಾ ವರದಿಯಾಗಿದೆ.
ಸಿಕ್ಕಿಂನ ಭಾರತ-ಚೀನಾ ಗಡಿಯ ಸಮೀಪವಿರುವ ಎತ್ತರದ ಪರ್ವತದ ಹಾದಿಯಾದ ನಾಥುಲಾ ಬಳಿ ಮಧ್ಯಾಹ್ನ 12:20ರ ವೇಳೆಗೆ ಭಾರಿ ಹಿಮಪಾತ ಸಂಭವಿಸಿದೆ. ದುರ್ಘಟನೆಯಲ್ಲಿ ಓರ್ವ ಮಹಿಳೆ, ಮಗು, ನಾಲ್ವರು ಪುರುಷರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಡಿಜೆ ಸಾಂಗ್ ನಿಲ್ಲಿಸಲು ಹೇಳಿದ್ದಕ್ಕೆ ಗರ್ಭಿಣಿ ಮೇಲೆಯೇ ಗುಂಡು ಹಾರಿಸಿದ ಪಾಪಿ
ಈ ಹಿಮಪಾತವಾಗುವ ವೇಳೆ ಆ ಪ್ರದೇಶದಲ್ಲಿ 150 ಪ್ರವಾಸಿಗರು ಇದ್ದರು ಅಂತಾ ಹೇಳಲಾಗುತ್ತಿದೆ. ಇಂಡೋ-ಚೀನಾ ಗಡಿಯುದ್ದಕ್ಕೂ ನಾಥುಲಾ ಪರ್ವತದ ಹಾದಿಗೆ ಹೋಗುವ ರಸ್ತೆಯಲ್ಲಿ ಹಿಮ ಆವರಿಸಿಕೊಂಡಿದೆ. ಸ್ಥಳೀಯ ಟ್ರಾವೆಲ್ ಏಜೆಂಟ್‌ಗಳು, ಚಾಲಕರು ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸಹ ಸಹಾಯ ಮಾಡುವ ಮೂಲಕ ರಕ್ಷಣಾ ಕಾರ್ಯಾಚರಣೆಗೆ ಸಾಥ್ ನೀಡಿದ್ದಾರೆ.
ಭಾರಿ ಹಿಮಪಾತದಿಂದಾಗಿ ರಸ್ತೆಗಳು ಬಂದ್ ಸಂಪೂರ್ಣ ಬಂದ್ ಆಗಿದ್ದು, ರಸ್ತೆ ಮಧ್ಯೆ ಸಿಲುಕಿದ್ದ ಸುಮಾರು 80 ವಾಹನ ಹಾಗೂ 350 ಜನರನ್ನು ರಕ್ಷಿಸಲಾಗಿದೆ. ನಾಥುಲಾ ಪಾಸ್ ಪ್ರದೇಶ ಸಮುದ್ರ ಮಟ್ಟದಿಂದ 4,310 ಮೀ. (14,140 ಅಡಿ) ಎತ್ತರದಲ್ಲಿದೆ ಮತ್ತು ಇದು ಪ್ರಮುಖ ಪ್ರವಾಸಿ ತಾಣವಾಗಿದ್ದು, ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.