ವರೂ.. ಇಲ್ಲದ ಟಾಕೀಸ್ ಹೇಗಿರುತ್ತೆ?  – ಮಜಾ ಕೊಡೋಕೆ ಸೃಜಾ ರೆಡಿ!!
ವಿಲನ್ ಪ್ರಿಯಾಂಕಾ ಯಾಕೆ?

ವರೂ.. ಇಲ್ಲದ ಟಾಕೀಸ್ ಹೇಗಿರುತ್ತೆ?  – ಮಜಾ ಕೊಡೋಕೆ ಸೃಜಾ ರೆಡಿ!!ವಿಲನ್ ಪ್ರಿಯಾಂಕಾ ಯಾಕೆ?

ಕನ್ನಡ ಕಿರುತೆರೆಯಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿರುವ ಕಾಮಿಡಿ ಶೋ ಅಂದ್ರೆ ಮಜಾ ಟಾಕೀಸ್.. ಸ್ವೀಟ್ 16 ವರಲಕ್ಷ್ಮೀ.. ವದ್ದು ಸರೋಜಾ.. ಮುದ್ದು ಸರೋಜಾ ಅನ್ನೋ ಡೈಲಾಗ್..  ಸೃಜನ್ ಲೋಕೇಶ್ ಮಾತಿನ ಚಟಾಕಿಗೆ ನಗದವರು ಯಾರೂ ಕೂಡ ಇಲ್ಲ. ಇದೀಗ ಮತ್ತೆ ಮಜಾ ಮಾಂಜಾ ಕೊಡೊಕೆ ಮಜಾ ಟಾಕೀಸ್ ಬರ್ತಿದೆ.. ಹೊಸ ತಂಡದ ಜೊತೆ ಸೃಜನ್ ಲೋಕೇಶ್ ತೆರೆಮೇಲೆ ನಗೆ ಚಟಾಕಿ ಹರಿಸಲಿದ್ದಾರೆ. ಮಜಾ ಟಾಕೀಸ್ ನ ವಿಭಿನ್ನ ಪ್ರೋಮೋ ರಿಲೀಸ್ ಆಗಿದೆ.. ಆದ್ರೀಗ ವೀಕ್ಷಕರು ಮಾತ್ರ ನಿರಾಸೆಗೊಂಡಿದ್ದಾರೆ.. ಮಜಾಟಾಕೀಸ್ ನಲ್ಲಿ ಹಳೆ ಕಲಾವಿದರು ಯಾರೂ ಕಾಣಿಸಿಕೊಂಡಿಲ್ಲ.. ಇದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಶ್ವೇತಾ ಚಂಗಪ್ಪ ಮಜಾ ಟಾಕೀಸ್ ನಲ್ಲಿ ಯಾಕೆ ಕಾಣಿಸಿಕೊಂಡಿಲ್ಲ? ‘ಒನ್ ಆ್ಯಂಡ್ ಓನ್ಲಿ ವರಲಕ್ಷ್ಮಿ’ ಸ್ಥಾನ ತುಂಬೋರು ಯಾರು? ಕಾಮಿಡಿ ಗೊತ್ತಿಲ್ದೇ ಇರೋರನ್ನ ಸೃಜನ್ ಟೀಮ್ ಗೆ ಸೇರಿಸಿಕೊಂಡ್ರಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಭಾರತ ಗಡಿಯಲ್ಲಿ ಡ್ರ್ಯಾಗನ್ ಸ್ಕೆಚ್! – ರೋಬೋಟ್ ಡಾಗ್ ಬಳಸಿದ್ದೇಕೆ ಚೀನಾ?

ಕಲರ್ಸ್ ಕನ್ನಡದಲ್ಲಿ ಇನ್ಮುಂದೆ ನಗುವಿನ ಹಬ್ಬ ಶುರುವಾಗ್ತಿದೆ. ಮಜಾ ಟಾಕೀಸ್ ಮತ್ತೆ ಬರ್ತಿದೆ. ಸೀರಿಯಲ್ ನೋಡಿ ಬೋರ್ ಆಗಿದೆ, ಡಾನ್ಸ್, ಮ್ಯೂಸಿಕ್ ಮಧ್ಯೆ ಒಂದು ನಗಿಸುವ ಶೋ ಅವಶ್ಯಕತೆ ಇದೆ ಎನ್ನುತ್ತಿದ್ದ ವೀಕ್ಷಕರಿಗೆ ಕಡೆಗೂ ಗುಡ್‌ ನ್ಯೂಸ್ ನೀಡಿದ್ದಾರೆ ಸೃಜನ್ ಲೋಕೇಶ್. ಒಂದಿಷ್ಟು ವರ್ಷ ಬ್ರೇಕ್ ಪಡೆದಿದ್ದ ಮಜಾ ಟಾಕೀಸ್ ಮತ್ತೆ ಶುರುವಾಗ್ತಿದೆ. ಇದರ ಬಗ್ಗೆ ಕಲರ್ಸ್ ಕನ್ನಡ ಈಗಾಗಲೇ ಪ್ರೋಮೋ ಬಿಡುಗಡೆ ಮಾಡಿದೆ. ಬಿಗ್ ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ಸಜ್ಜಾಗಿದ್ದು, ಕೆಲವೇ ದಿನಗಳಲ್ಲಿ ಶೋಗೆ ತೆರೆಬೀಳಲಿದೆ. ಬಿಗ್ ಬಾಸ್ ಮುಗಿದ್ಮೇಲೆ ಮುಂದೇನು ಅಂತಾ ಕೇಳ್ತಿದ್ದ ವೀಕ್ಷಕರಿಗೆ ಉತ್ತರ ಈಗ ಸಿಕ್ಕಿದಂತಿದೆ.

ಮಜಾ ಟಾಕೀಸ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಫೆಬ್ರವರಿ 1ರಿಂದ ಮಜಾ ಟಾಕೀಸ್ ಆರಂಭ ಆಗಲಿದೆ ಎಂದು ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ರಿಲೀಸ್ ಮಾಡಿದೆ. ಈ ಬಾರಿಯ ಸೀಸನ್ ನಲ್ಲಿ ಹಳೇ ಕಲಾವಿದರನ್ನ ಕೈಬಿಟ್ಟು ಹೊಸ ತಂಡದೊಂದಿಗೆ ಬಂದಿದ್ದಾರೆ ಸೃಜನ್ ಲೋಕೇಶ್.. ಹೌದು.. ಮಜಾಭಾರತ ವೇದಿಕೆ ಮೇಲೆ ಮಿಂಚಿದ್ದ ಹಲವು ಕಲಾವಿದರು ಈಗ ಮಜಾ ಟಾಕೀಸ್‌ ಗೆ ಎಂಟ್ರಿಕೊಟ್ಟಿದ್ದಾರೆ.  ತುಕಾಲಿ ಸಂತೋಷ್, ಪ್ರಿಯಾಂಕ ಕಾಮತ್, ಚಂದ್ರಪ್ರಭ, ವಿನೋದ್ ಗೊಬ್ಬರಗಾಲ, ಶಿವು, ವಿಶ್ವಾಸ್ ಈ ಹೊಸ ಮಜಾ ಟಾಕೀಸ್ ‌ನಲ್ಲಿ ಎಂಟ್ರಿ ಕೊಡಲಿದ್ದಾರೆ.. ಇನ್ನು ಅಗ್ನಿಸಾಕ್ಷಿ ಸೀರಿಯಲ್ ನಲ್ಲಿ ಚಂದ್ರಿಕಾ ಆಗಿ ಮಿಂಚಿದ್ದ, ವಿಲನ್ ಪಾತ್ರದ ಮೂಲಕವೇ ಹೆಚ್ಚು ಪ್ರಸಿದ್ಧಿ ಪಡೆದಿರುವ, ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಿಯಾಂಕಾ ಈ ಬಾರಿ ಮಜಾ ಟಾಕೀಸ್ ನಲ್ಲಿ ಮಜಾ ನೀಡಲಿದ್ದಾರೆ. ಈ ಬಾರಿಯೂ ಕುರಿ ಪ್ರತಾಪ್ ಮಜಾ ಟಾಕೀಸ್ ತಂಡದಲ್ಲಿದ್ದಾರೆ. ಈ ಬಾರಿಯ ಮತ್ತೊಂದು ವಿಶೇಷ ಅಂದ್ರೆ ಭಟ್ರು. ಫುಲ್ ಮೆಂಟಲ್ ಎನ್ನುತ್ತಲೇ ಯೋಗರಾಜ್ ಭಟ್ರನ್ನು  ತಂಡ ಎತ್ಕೊಂಡು ಹೋಗೋದನ್ನು ಪ್ರೋಮೋದಲ್ಲಿ ತೋರಿಸಲಾಗಿದೆ.. ಆದ್ರೆ ಸೃಜ ತಂಡದಲ್ಲಿ ಹಳೇ ಸೀಸನ್ ಕಲಾವಿದರು ಇಲ್ಲ ಅನ್ನೋದೇ ವೀಕ್ಷಕರಿಗೆ ಬೇಸರ ತರಿಸಿದೆ.

2015ರಲ್ಲಿ ಆರಂಭ ಆದ ಮಜಾ ಟಾಕೀಸ್ 2017ರವರೆಗೆ ಇತ್ತು.  ಅದಾದ್ಮೇಲೆ 2018ರಲ್ಲಿ ‘ಮಜಾ ಟಾಕೀಸ್ ಸೂಪರ್ ಸೀಸನ್’ ಆರಂಭ ಆಯಿತು. 2020ರಲ್ಲಿ ಮತ್ತೆ ‘ಮಜಾ ಟಾಕೀಸ್’ ಹೆಸರಲ್ಲಿ ಶೋ ಶುರುವಾಯಿತು. ಕುರಿ ಪ್ರತಾಪ್, ಇಂದ್ರಜಿತ್ ಲಂಕೇಶ್, ರೆಮೋ, ಶ್ವೇತಾ ಚಂಗಪ್ಪ, ಅಪರ್ಣಾ ಸಖತ್ ಹೈಲೈಟ್ ಆಗಿದ್ದರು. ಆದ್ರೆ ಮಜಾ ಟಾಕೀಸ್ ನಲ್ಲಿ ಈ ಬಾರಿ ಇಂದ್ರಜಿತ್ ಲಂಕೇಶ್ ಮಿಸ್ ಆಗಿದ್ದಾರೆ. ಪ್ರೋಮೋದಲ್ಲಿ ಇಂದ್ರಜಿತ್ ಅನ್ನ ಎಲ್ಲೂ ತೋರಿಸಿಲ್ಲ.. ಇಂದ್ರಜಿತ್ ಲಂಕೇಶ್ ಜಾಗಕ್ಕೆ ಭಟ್ರು ಬರ್ತಿದ್ದಾರೆ.  ಒನ್ ಆಂಡ್ ಒನ್ಲಿ ವರಲಕ್ಷ್ಮಿ ಪಾತ್ರ ಮಾಡ್ತಿದ್ದ ಅಪರ್ಣಾ ನಮ್ಮೊಂದಿಗೆ ಇಲ್ಲ.. ಇದು ಎಲ್ಲರಿಗೂ ತಿಳಿದಿರುವ ನೋವಿನ ಸಂಗತಿ. ಇನ್ನೊಂದ್ಕಡೆ ಸೃಜನ್ ಪತ್ನಿಯಾಗಿ ಕಾಣಿಸಿಕೊಳ್ತಿದ್ದ ರಾಣಿ ಅಲಿಯಾಸ್ ಶ್ವೇತಾ ಚಂಗಪ್ಪ ಕೂಡ ಪ್ರೋಮೋದಲ್ಲಿ ಮಿಸ್ ಆಗಿದ್ದಾರೆ. ಮುದ್ದು ಸರೋಜಾ ಎಂದೇ ಪ್ರಸಿದ್ಧಿಯಾಗಿದ್ದ ಪವನ್, ಮಂಡ್ಯ ರಮೇಶ್,  ವಿ. ಮನೋಹರ್, ಮಿಮಿಕ್ರಿ ದಯಾನಂದ್, ನವೀನ್ ಪಡೀಲ್ ಸೇರಿದಂತೆ ಹಳೆಯ ಟಾಕೀಸ್ ನಲ್ಲಿದ್ದ ಹಲವು ಕಲಾವಿದರು ಮಿಸ್ ಆಗಿದ್ದಾರೆ.

ಇನ್ನು ಪ್ರೋಮೋ ನೋಡಿದ ಅನೇಕರು ನಾನಾ ಕಾಮೆಂಟ್ ಮಾಡ್ತಿದ್ದಾರೆ.. ಪ್ರಿಯಾಂಕನಾ ಯಾಕೆ ಇಲ್ಲಿಗೆ ಕರ್ಕೊಂಡು ಬಂದ್ರಿ? ವಿಲನ್ ಪಾತ್ರ ಮಾಡೋರಿಗೆ ಕಾಮಿಡಿ ಮಾಡೋದಿಕ್ಕೆ ಆಗುತ್ತಾ? ಅಂತ ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ನಮ್ಮ ಫೇವರೇಟ್ ರಾಣಿ ಮೇಡಮ್ ಎಲ್ಲಿ?? ಶ್ವೇತಾ ಚಂಗಪ್ಪರನ್ನ ಯಾಕೆ ಕರೆಸಿಲ್ಲಾ?  ಈ ಸಮಯದಲ್ಲಿ ಅಪರ್ಣ ಅಂದ್ರೆ ಒನ್ ಅಂಡ್ ಒನ್ಲಿ ವರಲಕ್ಷ್ಮಿ  ಜ್ಞಾಪಕ ಬರ್ತಾರೆ.. ಅಪರ್ಣ ಇಲ್ಲದೇ ಶೊ ಅಪೂರ್ಣ.. ವರಲಕ್ಷ್ಮೀ ಸ್ಥಾನ ತುಂಬೋರು ಯಾರು ಅಂತಾ ವೀಕ್ಷಕರು ಕೇಳ್ತಿದ್ದಾರೆ..

ಹೌದು, ಅಚ್ಚ ಕನ್ನಡದ ಸ್ಚಚ್ಛ ನಿರೂಪಕಿ ಅಪರ್ಣಾ ಕನ್ನಡ ಭಾಷೆಯನ್ನ ಅದ್ಭುತವಾಗಿಯೇ ಬಳಸುತ್ತಿದ್ರು. ಒನ್ ಆ್ಯಂಡ್ ಒಲ್ಲಿ ವರಲಕ್ಷ್ಮಿ ಅನ್ನೋ ಪಾತ್ರದ ಮೂಲಕ ಈ ಮಜಾ ಟಾಕೀಸ್ ನಲ್ಲಿ ತಮ್ಮದೇ ಒಂದು ಛಾಪು ಮೂಡಿಸಿದ್ರು.. ಸೃಜನ್ ಲೋಕೇಶ್ ಈ ಒಂದು ಶೋದಲ್ಲಿ ಅಪರ್ಣಾ ಅವರ ವಯಸ್ಸಿನ ಬಗ್ಗೆನೂ ಕಾಮಿಡಿ  ಮಾಡ್ತಾ ಇದ್ರು.. ಮಜಾ ಟಾಕೀಸ್ ನಲ್ಲಿ ಅಪರ್ಣಾ ತಮ್ಮದೇ ಒಂದು ವಿಶೇಷ ಸೆಳತವನ್ನ ಕ್ರಿಯೇಟ್ ಮಾಡಿದ್ದರು. ಪ್ರತಿ ಎಪಿಸೋಡ್ನಲ್ಲೂ ಒಂದು ಹೊಸ ರೀತಿಯ ಕಾನ್ಸೆಪ್ಟ್ ಮೂಲಕ ಅಪರ್ಣಾ ಬರ್ತಾ ಇದ್ರು. ಹಾಗೆ ತಮ್ಮದೇ ಒಂದು ಹಾಸ್ಯದ ಮ್ಯಾನರಿಸಂ ಇಟ್ಟುಕೊಡು ಸ್ಟೇಜ್ ಮೇಲೆ ಬಂದು ಎಲ್ಲರನ್ನೂ ನಗಿಸುತ್ತಿದ್ದರು. ಅಪರ್ಣಾ ಮತ್ತು ಶ್ವೇತಾ ಚಂಗಪ್ಪ ಆಗ ಅಕ್ಕ-ತಂಗಿಯಾಗಿಯೇ ಕಾಣಿಸಿಕೊಂಡಿದ್ರು.. ವರಲಕ್ಷ್ಮಿ ತಮ್ಮನ್ನ ಮದುವೆ ಅಗಲು ಸಲ್ಮಾನ್ ಖಾನ್ ಬರ್ತಾನೆ ಅನ್ನೋ ಹಾಸ್ಯವು ಅಲ್ಲಿ ಇರ್ತಿತ್ತು. ಆದ್ರೆ ಇದೆಲ್ಲಾವನ್ನೂ ವೀಕ್ಷಕರು ಮಿಸ್ ಮಾಡಿಕೊಳ್ಳಲಿದ್ದಾರೆ.. ಈಗ ಹೊಸ ಅವತಾರದಲ್ಲಿ ಬರುತ್ತಿರುವ ಮಜಾ ಟಾಕೀಸ್ ಕನ್ನಡಿಗರಿಗೆ ಹೇಗೆಲ್ಲಾ ಮಜಾ ಕೊಡುತ್ತೆ ಅಂತ ನೋಡ್ಬೇಕಿದೆ.

Shwetha M

Leave a Reply

Your email address will not be published. Required fields are marked *