ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸರ ವಶಕ್ಕೆ – 30 ಪೊಲೀಸರ ತಂಡದಿಂದ ವಶಕ್ಕೆ, ಭಾರಿ ಹೈಡ್ರಾಮಾ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ತಿಮರೋಡಿಯನ್ನ ವಶಕ್ಕೆ ಪಡೆಯಲಾಗಿದೆ.ರಾಜೀವ್ ಕುಲಾಲ್ ಅವರು ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಠಾಣೆಯಲ್ಲಿ BSN 196 (1), 352, 353 (2) ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಭಾರೀ ಹೈಡ್ರಾಮಾದ ಬಳಿಕ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 8 ವಾಹನಗಳಲ್ಲಿ ತಿಮರೋಡಿ ನಿವಾಸಕ್ಕೆ ತೆರಳಿದ್ದ ಸುಮಾರು 30 ಪೊಲೀಸರ ತಂಡ ಉಜಿರಿಯಲ್ಲಿರುವ ಅವರ ಮನೆಯಲ್ಲೇ ವಶಕ್ಕೆ ಪಡೆದಿದೆ.
ಮಹೇಶ್ ಶೆಟ್ಟಿ ವಿರುದ್ಧ SITಗೂ ದೂರು
ಈ ನಡುವೆ ಸೌಜನ್ಯ ಪರ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಈಗಾಗಲೇ ಹಲವು ಆರೋಪಗಳು ಕೇಳಿಬಂದಿದೆ. ಇದೀಗ ಮಹೇಶ್ ಶೆಟ್ಟಿ ವಿರುದ್ಧ ವಿಶೇಷ ತನಿಖಾ ತಂಡಕ್ಕೂ ದೂರು ಸಲ್ಲಿಸಿದ್ದಾರೆ.ಧರ್ಮಸ್ಥಳದ ಉಜಿರೆಯ ಬಿಲ್ಲರೋಡಿಯಲ್ಲಿ 2018ರಲ್ಲಿ ಸಂಶಯಾಸ್ಪದವಾಗಿ ಸಾವನ್ನಪ್ಪಿದ ಬಾಲಕೃಷ್ಣ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆಗೆ ಒತ್ತಾಯಿಸಿ ಉಜಿರೆ ನಿವಾಸಿ ಭಾಸ್ಕರ್ ನಾಯ್ಕ್ ಎಂಬವರು SITಗೆ ದೂರು ಸಲ್ಲಿಸಿದ್ದಾರೆ. ಸ್ಥಳೀಯರ ಆರೋಪದಂತೆ, ಈ ಕೊಲೆಯ ಹಿಂದೆ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಕೆಲವರ ಕೈವಾಡವಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.
ಸೋಂಪಯಾನೆ ಬಾಲಕೃಷ್ಣ ಗೌಡ 2018 ರಲ್ಲಿ ನಾಪತ್ತೆಯಾಗಿದ್ದರು, ಬಳಿಕ ಆ ವ್ಯಕ್ತಿ ಧರ್ಮಸ್ಥಳದ ಉಜಿರೆಯ ಬಿಲ್ಲರೋಡಿಯ ಸರ್ಕಾರಿ ಜಮೀನಿನಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದರು ಎಂದು ವರದಿಯಾಗಿದೆ. ಆಗ ಸರ್ಕಾರಿ ಜಮೀನಿನಲ್ಲಿ ಮರಗಳನ್ನು ತೆಗೆಯುವ ಸಂದರ್ಭದಲ್ಲಿ ಈ ಮೃತದೇಹ ಸಿಕ್ಕಿತ್ತು ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಆಗಲೇ ಕೊಲೆ ಪ್ರಕರಣ ದಾಖಲಾಗಿತ್ತು. ಆದರೆ, ಸ್ಥಳೀಯರ ಆರೋಪದಂತೆ, ರಾಜಕೀಯ ಒತ್ತಡದಿಂದಾಗಿ ತನಿಖೆ ಸರಿಯಾಗಿ ನಡೆದಿರಲಿಲ್ಲ. ಭಾಸ್ಕರ್ ನಾಯ್ಕ್ ಸಲ್ಲಿಸಿರುವ ದೂರಿನಲ್ಲಿ, ಬಾಲಕೃಷ್ಣ ಗೌಡ ಅವರ ಮಗ ಸುರೇಂದ್ರ ಗೌಡ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಜೊತೆಗಿನ ಸಂಬಂಧದಿಂದಾಗಿ ಈ ಕೊಲೆ ನಡೆದಿರಬಹುದು ಎಂದು ಆರೋಪಿಸಲಾಗಿದೆ. ಬಾಲಕೃಷ್ಣ ಗೌಡ ಮತ್ತು ಅವರ ಮಗ ಸುರೇಂದ್ರ ಗೌಡರ ನಡುವೆ ನಿರಂತರ ಜಗಳವಿತ್ತು. ಈ ವಿಷಯದ ಕುರಿತು ಬಾಲಕೃಷ್ಣ ಗೌಡ ಅವರ ಸ್ನೇಹಿತರೊಬ್ಬರು, ಸುರೇಂದ್ರನಿಗೆ ಮಹೇಶ್ ಶೆಟ್ಟಿ ತಿಮರೋಡಿ ಜೊತೆ ಮಾತನಾಡುವಂತೆ ಸೂಚಿಸಿದ್ದರಂತೆ. ಯಾಕಂದ್ರೆ ಮಗ ಸುರೇಂದ್ರ, ತಿಮರೋಡಿ ಜೊತೆನೂ ಕಾಣಿಸಿಕೊಂಡಿದ್ದನಂತೆ. ಆದರೆ, ಈ ಮಾತುಕತೆಯ ಕೆಲವೇ ದಿನಗಳ ಬಳಿಕ ಬಾಲಕೃಷ್ಣ ಗೌಡ ಅವರ ಮೃತದೇಹ ಸರ್ಕಾರಿ ಜಮೀನಿನಲ್ಲಿ ಪತ್ತೆಯಾಗಿತ್ತು ಎಂದು ಹೇಳಲಾಗಿದೆ.
ಭಾಸ್ಕರ್ ನಾಯ್ಕ್ ಸಲ್ಲಿಸಿರುವ ದೂರಿನಲ್ಲಿ, ಬಾಲಕೃಷ್ಣ ಗೌಡ ಅವರ ಮಗ ಸುರೇಂದ್ರ ಗೌಡ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಜೊತೆಗಿನ ಸಂಬಂಧದಿಂದಾಗಿ ಈ ಕೊಲೆ ನಡೆದಿರಬಹುದು ಎಂದು ಆರೋಪಿಸಲಾಗಿದೆ. ಬಾಲಕೃಷ್ಣ ಗೌಡ ಮತ್ತು ಅವರ ಮಗ ಸುರೇಂದ್ರ ಗೌಡರ ನಡುವೆ ನಿರಂತರ ಜಗಳವಿತ್ತು. ಈ ವಿಷಯದ ಕುರಿತು ಬಾಲಕೃಷ್ಣ ಗೌಡ ಅವರ ಸ್ನೇಹಿತರೊಬ್ಬರು, ಸುರೇಂದ್ರನಿಗೆ ಮಹೇಶ್ ಶೆಟ್ಟಿ ತಿಮರೋಡಿ ಜೊತೆ ಮಾತನಾಡುವಂತೆ ಸೂಚಿಸಿದ್ದರಂತೆ. ಯಾಕಂದ್ರೆ ಮಗ ಸುರೇಂದ್ರ, ತಿಮರೋಡಿ ಜೊತೆನೂ ಕಾಣಿಸಿಕೊಂಡಿದ್ದನಂತೆ. ಆದರೆ, ಈ ಮಾತುಕತೆಯ ಕೆಲವೇ ದಿನಗಳ ಬಳಿಕ ಬಾಲಕೃಷ್ಣ ಗೌಡ ಅವರ ಮೃತದೇಹ ಸರ್ಕಾರಿ ಜಮೀನಿನಲ್ಲಿ ಪತ್ತೆಯಾಗಿತ್ತು ಎಂದು ಹೇಳಲಾಗಿದೆ.

ನೋಡಿರಿ

