ಡಾಕ್ಟರ್ ಕೃತಿಕಾ ರೆಡ್ಡಿ ಕೊಲೆ ಪ್ರಕರಣದಲ್ಲಿ ಸ್ಫೋಟಕ ಮಾಹಿತಿ ಬಹಿರಂಗ – ಪತ್ನಿಯನ್ನ ಕೊಲ್ಲಲು ಡ್ರಗ್ಸ್ ಖರೀದಿ ಮಾಡಿದ್ದು ಗಂಡನೇ..!

ಬೆಂಗಳೂರಿನಲ್ಲಿ ತಲ್ಲಣಗೊಳಿಸಿದ ಡಾಕ್ಟರ್ ಕೃತಿಕಾ ರೆಡ್ಡಿ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಮಹತ್ವದ ಮಾಹಿತಿ ಸಿಕ್ಕಿದೆ. ನಾನೇನು ಮಾಡಿಲ್ಲ. ನಾನು ನನ್ನ ಹೆಂಡತಿಯ ನೆನಪಲ್ಲೇ ಇದ್ದೀನಿ. ನಾನು ನನ್ನ ಹೆಂಡತಿಯ ಬಟ್ಟೆಯನ್ನ ನನ್ನ ಜೊತೆಗೆ ತಂದು ಅದರಲ್ಲೇ ನನ್ನ ಹೆಂಡತಿಯನ್ನು ನೋಡುತ್ತಿದ್ದೇನೆ ಹೀಗೆ ಕಾಗೆ ಕಥೆ ಗೂಬೆ ಕಥೆ ಹೇಳುತ್ತಿದ್ದ ಕಿಲ್ಲರ್ ಪತಿಯ ಸಂಚನ್ನು ಪೊಲೀಸರು ಬಹಿರಂಗಗೊಳಿಸಿದ್ದಾರೆ.
ಇದನ್ನೂ ಓದಿ:IAFಗೆ ಬಂತು ಸೂಪರ್ ಫೈಟರ್ ತೇಜಸ್ MK1A ಶಕ್ತಿಗೆ ನಡುಗ್ತಾ ಚೀನಾ?
ಗಂಡನನ್ನು ಅತಿಯಾಗಿ ನಂಬಿದ್ದಕ್ಕೆ ಆತನ ಕೈಯಿಂದಲೇ ಹತ್ಯೆಯಾಗಿದ್ದಳು ಡಾಕ್ಟರ್ ಕೃತಿಕಾ. ನಂಬಿಕೆ ದ್ರೋಹಿ, ಪಾಪಿ ಪತಿ ನಂಬಿದ ಪತ್ನಿಯನ್ನು ಇಂಚಿಂಚು ನರಳಿಸಿ ಸಾಯಿಸಿದ್ದ. ಇದೀಗ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಫೋಟಕ ಮಾಹಿತಿಯನ್ನು ಬೇಧಿಸಿದ್ದಾರೆ. ಕೃತಿಕಾಗೆ ಅರಿವಾಗದಂತೆ ನಯವಾಗಿ ವಂಚಿಸಿ ಅನಸ್ತೇಶಿಯಾ ಇಂಜೆಕ್ಷನ್ ಕೊಟ್ಟು ಕೊಂದ ಡಾಕ್ಟರ್ ಮಹೇಂದ್ರ ರೆಡ್ಡಿ ಬಣ್ಣ ಇದೀಗ ಬಯಲಾಗಿದೆ. ಮಾರತ್ ಹಳ್ಳಿ ಪೊಲೀಸರು ಆರೋಪಿ ಮಹೇಂದ್ರ ರೆಡ್ಡಿಯಿಂದ ಸತ್ಯ ಬಾಯಿ ಬಿಡಿಸಿ ಸಾಕ್ಷಿ ಕಲೆ ಹಾಕಿದ್ದಾರೆ.
ಡ್ರಗ್ಸ್ ಬಗ್ಗೆ ಮಹೇಂದ್ರ ರೆಡ್ಡಿ ಬಾಯ್ಬಿಟ್ಟಿದ್ದಾನೆ ಎನ್ನಲಾಗ್ತಿದೆ. ಡಾಕ್ಟರ್ ಮಹೇಂದ್ರ ರೆಡ್ಡಿ ಹೆಂಡತಿಗೆ ಇಂಜೆಕ್ಷನ್ ಕೊಡಲು ಅಂದು ಸ್ವತಃ ತಾನೇ ಹೋಗಿ ಡ್ರಗ್ಸ್ ( ಅನಸ್ತೇಷಿಯಾ) ಖರೀದಿ ಮಾಡಿದ್ದನಂತೆ. ಮೆಡಿಕಲ್ ಶಾಪ್ ಒಂದಕ್ಕೆ ಹೋಗಿ ಮಹೇಂದ್ರ ರೆಡ್ಡಿ propfol ಬೇಕು ಎಂದು ಕೇಳಿದ್ದನಂತೆ. ಈ ವೇಳೆ ಅದನ್ನು ಎಲ್ಲರಿಗೂ ಕೊಡಲು ಸಾಧ್ಯವಿಲ್ಲ ಎಂದು ಮೆಡಿಕಲ್ ಸಿಬ್ಬಂದಿ ಹೇಳಿದ್ದ. ಆಗ ತಾನೊಬ್ಬ ಸರ್ಜನ್ ಎಂದು ಮಹೇಂದ್ರ ಹೇಳಿ ತಾನೇ ಬರೆದಿದ್ದ ಪ್ರಿಸ್ಕ್ರಿಪ್ಷನ್ ನೀಡಿದ್ದನಂತೆ. ರೋಗಿಗೆ ಟ್ರೀಟ್ಮೆಂಟ್ ನೀಡಬೇಕಿದೆ ಎಂದು ಹೇಳಿ ಮಹೇಂದ್ರ ಮೆಡಿಸಿನ್ ಅನ್ನು ಪಡೆದುಕೊಂಡಿದ್ದನಂತೆ. ಹೀಗಾಗಿ ತನಿಖೆ ವೇಳೆ ಮಹೇಂದ್ರ ರೆಡ್ಡಿ ಖುದ್ದು ತೆರಳಿ ಡ್ರಗ್ಸ್ ಖರೀದಿ ಮಾಡಿಕೊಂಡು ಬಂದಿದ್ದಕ್ಕೆ ಪೊಲೀಸರು ಸಾಕ್ಷಿ ಪತ್ತೆ ಹಚ್ಚಿದ್ದಾರೆ. ನೋವಿನಿಂದ ಬಳಲುತ್ತಾ ಮನೆಯಲ್ಲಿ ಮಲಗಿದ್ದ ಕೃತಿಕಾಗೆ ಮಹೇಂದ್ರ ರೆಡ್ಡಿ, ರಾತ್ರಿ ಐವಿ ಮೂಲಕ Propofol ನೀಡಿದ್ದಾನಂತೆ. ಬೆಳಗ್ಗೆ ಏಳುವ ಸಮಯದಲ್ಲಿ ಆಕೆ ಜೀವಂತವಾಗಿ ಇರಲಿಲ್ಲ. ಇಂಜೆಕ್ಷನ್ ಪವರ್ ಗೆ ಮೊದಲು ನಿದ್ರೆಗೆ ಜಾರಿ ನಂತ್ರ ಕೃತಿಕಾ ಕೋಮಾಗೆ ಜಾರಿದ್ದಳು. ಕೋಮದಿಂದ ಹೊರ ತರಲು ಮೆಡಿಸನ್ ನೀಡದ ಕಾರಣಕ್ಕೆ ಆಕೆ ಸಾವನ್ನಪ್ಪಿದ್ದಾಳೆ ಎನ್ನಲಾಗ್ತಿದೆ. ಕೊನೆಗೆ ಮಲಗಿದ್ದ ಜಾಗದಲ್ಲಿಯೇ ಕೃತಿಕಾ ಸಾವನ್ನಪ್ಪಿದ್ದಾಳೆ. ಈ ವೇಳೆ ರಾತ್ರಿಯಿಡೀ ಕೃತಿಕಾ ಜೊತೆಗೆ ಮಹೇಂದ್ರ ಕೂಡ ಅದೇ ರೂಮ್ನಲ್ಲಿ ಮಲಗಿದ್ದ ಎನ್ನಲಾಗ್ತಿದೆ. ಸದ್ಯ ಆರೋಪಿ ಮೆಡಿಸನ್ ಕೊಟ್ಟಿದ್ದ ರಹಸ್ಯವನ್ನ ಪೊಲೀಸರು ಬೇದಿಸಿದ್ದಾರೆ. ಡಾಕ್ಟರ್ ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಾಯಿ ಮಾಧ್ಯಮಗಳ ಮುಂದೆ ಮಾತಾಡಿದ್ದು, ಮಗಳ ಸಾವಿಗೆ ನ್ಯಾಯ ಸಿಗಬೇಕು ಅಂತ ಕಣ್ಣೀರು ಹಾಕಿದ್ರು. ಪೊಲೀಸರ ಮುಂದೆ ಆತ ಹೇಳ್ತಿರೋದೆಲ್ಲಾ ಸುಳ್ಳು. ಅವಳಿಗೆ ಕಾಯಿಲೆ ಇತ್ತು ಅನ್ನೋದು ಸುಳ್ಳು. ಎಲ್ಲಾ ಸುಳ್ಳು ಹೇಳ್ಕೊಂಡೆ ಬಂದಿದ್ದಾನೆ. ಅಕಸ್ಮಾತ್ ಖಾಯಿಲೆ ಇದ್ದರೆ, ತೋರಿಸಬೇಕಿತ್ತು. ಪ್ರಾಣ ತೆಗೆಯೋಕೆ ಈತ ಯಾರು ಎಂದು ಕೃತಿಕಾ ತಾಯಿ ಸೌಜನ್ಯ ಪ್ರಶ್ನೆ ಮಾಡಿದ್ದಾರೆ.

ನೋಡಿರಿ

