ಫೆಬ್ರವರಿ 15 ಕ್ಕೆ ಮಹಾಶಿವರಾತ್ರಿ – ಹೇಗಿರಬೇಕು ವ್ರತ?, ನಿಯಮಗಳೇನು?

ಹಿಂದೂ ಧರ್ಮದಲ್ಲಿ ಮಹಾಶಿವರಾತ್ರಿಯು ಅತ್ಯಂತ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. 2026ರಲ್ಲಿ, ಫೆಬ್ರವರಿ 15 ರಂದು ಶಿವರಾತ್ರಿಯನ್ನ ಕೈಗೊಳ್ಳಲಾಗುತ್ತದೆ. ಮಹಾಶಿವರಾತ್ರಿಯಂದು ಉಪವಾಸ, ಜಾಗರಣೆ ಮಾಡಿ ಶಿವನನ್ನು ಆರಾಧಿಸಿದರೆ ಸಕಲ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಬಲವಾದ ಧಾರ್ಮಿಕ ನಂಬಿಕೆ. ಆದಾಗ್ಯೂ, ಈ ವ್ರತವನ್ನು ಆಚರಿಸುವಾಗ ಶಾಸ್ತ್ರಗಳಲ್ಲಿ ಸೂಚಿಸಲಾದ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮಹತ್ವಪೂರ್ಣ. ಮಹಾಶಿವರಾತ್ರಿ ವ್ರತದ ವೇಳೆ ಏನನ್ನು ಸೇವಿಸಬೇಕು ಅನ್ನೋದ್ದನ್ನ ನೋಡೋಣ.
ಹಣ್ಣುಗಳು: ಸೇಬು, ಬಾಳೆಹಣ್ಣು, ಕಿತ್ತಳೆ, ದಾಳಿಂಬೆಯಂತಹ ತಾಜಾ ಹಣ್ಣುಗಳನ್ನು ಉಪವಾಸದ ಅವಧಿಯಲ್ಲಿ ಸೇವಿಸಬಹುದು. ಇವು ದೇಹಕ್ಕೆ ತಕ್ಷಣದ ಶಕ್ತಿಯನ್ನು ನೀಡುತ್ತವೆ.
ಹಾಲಿನ ಉತ್ಪನ್ನಗಳು: ಹಾಲು ಮತ್ತು ಹಾಲಿನ ಉತ್ಪನ್ನಗಳಾದ ಮೊಸರು ಹಾಗೂ ಮನೆಯಲ್ಲಿ ತಯಾರಿಸಿದ ಸಿಹಿತಿಂಡಿಗಳನ್ನು ಸೇವಿಸುವುದು ಸುರಕ್ಷಿತ. ಒಣಹಣ್ಣುಗಳು: ಬಾದಾಮಿ, ಗೋಡಂಬಿ, ಅಕ್ರೋಟ್, ಒಣದ್ರಾಕ್ಷಿಯಂತಹ ಒಣಹಣ್ಣುಗಳು ದಿನವಿಡೀ ಚಟುವಟಿಕೆಯಿಂದಿರಲು ಸಹಕಾರಿ. ಸೈಂಧವ ಲವಣ: ವ್ರತದ ಅಡುಗೆಗೆ ಸಾಮಾನ್ಯ ಉಪ್ಪಿನ ಬದಲಾಗಿ ಸೇಂದಾ ಉಪ್ಪನ್ನು (ಸೈಂಧವ ಲವಣ) ಮಾತ್ರ ಬಳಸಬೇಕು ಎಂಬ ನಿಯಮವಿದೆ.
ಪೌಷ್ಟಿಕ ಆಹಾರ: ಸಾಬೂದಾನಿ ಖಿಚಡಿ, ಸಿಂಘಾಡಾ ಹಿಟ್ಟು, ಕಡ್ಲೆಬೀಜ, ಮತ್ತು ಮಖಾನಾ (ತಾವರೆ ಬೀಜ) ಒಳಗೊಂಡ ಪೌಷ್ಟಿಕ ಆಹಾರಗಳನ್ನು ಸೇವಿಸಬಹುದು.
ಪಾನೀಯಗಳು: ದೇಹದಲ್ಲಿ ನಿರ್ಜಲೀಕರಣವಾಗುವುದನ್ನು ತಡೆಯಲು ಸಾಕಷ್ಟು ನೀರು, ಎಳನೀರು ಮತ್ತು ಹಣ್ಣಿನ ರಸವನ್ನು ಸೇವಿಸುವುದು ಅತಿ ಮುಖ್ಯ. ಇದು ವ್ರತದ ಸಮಯದಲ್ಲಿ ದೇಹವನ್ನು ಚೈತನ್ಯದಿಂದ ಇಡಲು ಸಹಾಯ ಮಾಡುತ್ತದೆ.
ಶಿವರಾತ್ರಿ ವ್ರತದ ಸಂದರ್ಭದಲ್ಲಿಈ ಆಹಾರಗಳನ್ನು ತ್ಯಜಿಸಿ
– ಗೋಧಿ, ಅಕ್ಕಿ, ಕಡ್ಲೆಹಿಟ್ಟು ಮತ್ತು ಮೈದಾದಂತಹ ಯಾವುದೇ ಧಾನ್ಯಗಳನ್ನು ವ್ರತದ ಅವಧಿಯಲ್ಲಿ ಸೇವಿಸಲು ಅವಕಾಶವಿಲ್ಲ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
– ತಾಮಸಿಕ ಗುಣಗಳನ್ನು ಹೊಂದಿರುವ ಈರುಳ್ಳಿ, ಬೆಳ್ಳುಳ್ಳಿ, ಮಾಂಸಾಹಾರ ಮತ್ತು ಮದ್ಯಪಾನವನ್ನು ಈ ದಿನ ಸಂಪೂರ್ಣವಾಗಿ ತ್ಯಜಿಸಬೇಕು. ಇಂತಹ ಆಹಾರಗಳು ಮನಸ್ಸಿನ ಏಕಾಗ್ರತೆಗೆ ಅಡ್ಡಿಯಾಗಬಹುದು.
– ಹಾಗೆಯೇ, ಅತಿಯಾದ ಖಾರ ಮತ್ತು ಮಸಾಲೆ ಭರಿತ ಆಹಾರಗಳನ್ನು ಸೇವಿಸುವುದರಿಂದ ದೂರವಿರಿ, ಏಕೆಂದರೆ ಅವು ಹೊಟ್ಟೆಯ ಆರೋಗ್ಯಕ್ಕೆ ಹಾನಿಕರವಾಗಬಹು

ನೋಡಿರಿ

