5 ಸ್ಟಾರ್ ದರ್ಜೆ ಸೌಲಭ್ಯವುಳ್ಳ ʻಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣʼ ಲೋಕಾರ್ಪಣೆ – ಇದರ ಸ್ಪೆಷಾಲಿಟಿ ಏನು ಗೊತ್ತಾ?
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ 5 ಸ್ಟಾರ್ ದರ್ಜೆ ಸೌಲಭ್ಯವುಳ್ಳ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಿದ್ದಾರೆ. ಈ ವಿಮಾನ ನಿಲ್ದಾಣದ ವಿಶೇಷತೆಗಳೇನು ಅನ್ನೋ ಮಾಹಿತಿ ಇಲ್ಲಿದೆ..
ರಾಮಜನ್ಮಭೂಮಿಯಲ್ಲಿ ಅತ್ಯಾಧುನಿಕ ಏರ್ಪೋರ್ಟ್ನ್ನ ಕೂಡ ನಿರ್ಮಿಸಲಾಗಿದೆ. ಅಯೋಧ್ಯೆ ರಾಮಮಂದಿರದಿಂದ 15 ಕಿಲೋ ಮೀಟರ್ ದೂರದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಿದ್ದು, 821 ಎಕರೆಯಲ್ಲಿ ಏರ್ಪೋರ್ಟ್ ನಿರ್ಮಾಣವಾಗಿದ್ದು, 2,200 ಮೀಟರ್ ಉದ್ದ, 45 ಮೀಟರ್ ಅಗಲದ ರನ್ವೇಯನ್ನ ಹೊಂದಿದೆ. ಈ ಏರ್ಪೋರ್ಟ್ಗೆ ಮಹರ್ಷಿ ವಾಲ್ಮೀಕಿ ಅಂತಾ ಹೆಸರಿಡಲಾಗಿದೆ. ವರ್ಷಕ್ಕೆ 10 ಲಕ್ಷ ಯಾತ್ರಿಕರು ಬಂದು ಹೋಗುವಂಥಾ ವ್ಯವಸ್ಥೆ ಈ ಏರ್ಪೋರ್ಟ್ನಲ್ಲಿದೆ. ಇಲ್ಲೂ ಕೂಡ ಅಷ್ಟೇ, ರಾಮಮಂದಿರ ವಾಸ್ತು ಶೈಲಿಯಲ್ಲೇ ವಿಮಾನ ನಿಲ್ದಾಣವನ್ನ ನಿರ್ಮಿಸಲಾಗಿದೆ.
ಇದನ್ನೂ ಓದಿ: ಅಯೋಧ್ಯೆಯ 84 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಬ್ಯಾನ್ ಮಾಡಿದ ಯೋಗಿ ಸರ್ಕಾರ!
ಟರ್ಮಿನಲ್ ಬಿಲ್ಡಿಂಗ್ನ ಒಳಭಾಗದಲ್ಲಿ ಗೋಡೆಯುದ್ದಕ್ಕೂ ಶ್ರೀರಾಮನ ಜೀವನ ಕಥೆಯನ್ನ ಹೇಳುವ ಚಿತ್ರಗಳನ್ನ ಬಿಡಿಸಲಾಗಿದೆ. ಹಾಗೆಯೇ ಏರ್ಪೋರ್ಟ್ ಟರ್ಮಿನಲ್ನ ಒಳಗಡೆ ಸ್ಥಳೀಯ ಕಲಾಕೃತಿಗಳು, ಪೇಂಟಿಂಗ್ಸ್, ರಾಮನ ಕುರಿತ ಪುಸ್ತಕ, ಚಿತ್ರಗಳನ್ನ ಕೂಡ ಮಾರಾಟ ಮಾಡಲಾಗ್ತಿದೆ. ವಿಮಾನ ನಿಲ್ದಾಣವನ್ನ ಕೂಡ ಪರಿಸರ ಸ್ನೇಹಿಯಾಗಿಯೇ ನಿರ್ಮಿಸಲಾಗಿದೆ. ಎಲ್ಇಡಿ ಲೈಟ್, ಮಳೆ ನೀರಿನ ಸಂಗ್ರಹ, ಸೋಲಾರ್ ಪವರ್ ಪ್ಲಾಂಟ್ ವ್ಯವಸ್ಥೆ ಮಾಡಲಾಗಿದೆ. ರೈಲ್ವೆ ಸ್ಟೇಷನ್ ಮತ್ತು ಏರ್ಪೋರ್ಟ್ ಎರಡೂ ಹತ್ತಿರದಲ್ಲೇ ಇವೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ವಿಮಾನ ನಿಲ್ದಾಣವನ್ನ ಉದ್ಘಾಟಿಸಿದ ಬಳಿಕ ಫಸ್ಟ್ ಟೈಮ್ ಇಂಡಿಗೋ ವಿಮಾನ ಲ್ಯಾಂಡ್ ಆಗಿದೆ. ಅಯೋಧ್ಯೆ ಏರ್ಪೋರ್ಟ್ನಲ್ಲಿ ವಿಮಾನ ಲ್ಯಾಂಡ್ ಆಗುತ್ತಲೇ, ಪೈಲಟ್ ಜೈಶ್ರೀರಾಮ್ ಅಂತಾ ಹೇಳಿ ಪ್ರಯಾಣಿಕರನ್ನ ಸ್ವಾಗತಿಸಿದ್ರು. ಅಂತೂ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ಜೊತೆಗೆ ರಾಮನ ದರ್ಶನಕ್ಕೆ ಬರೋ ಭಕ್ತರಿಗಾಗಿ ಅತ್ಯಾಧುನಿಕ ವಿಮಾನ ನಿಲ್ದಾಣ ನಿರ್ಮಾಣಗೊಂಡಿದೆ. ಆದ್ರೆ ಈ ರೈಲು ನಿಲ್ದಾಣದ ಶುಚಿತ್ವ ಕಾಪಾಡಿಕೊಳ್ಳಬೇಕಾಗಿರೋದು ಪ್ರತಿಯೊಬ್ಬರ ಕರ್ತವ್ಯ. ರಾಮಮಂದಿರದಲ್ಲಿ ಯಾವ ರೀತಿ ನಡೆದುಕೊಳ್ತಾರೋ ಅದೇ ರೀತಿ ರೈಲು ನಿಲ್ದಾಣದಲ್ಲೂ ಶಿಸ್ತಿನಿಂದ ವರ್ತಿಸಬೇಕು. ಅಯೋಧ್ಯೆಯಲ್ಲಿರುವ ನಮ್ಮೆಲ್ಲರ ಆಸ್ತಿಯನ್ನ ಕಾಪಾಡಿಕೊಳ್ಳಬೇಕು. ಇದನ್ನ ಮಾತ್ರ ಭಕ್ತರು ಮರೀಬಾರ್ದು.