ಅಯೋಧ್ಯೆ ರಾಮಮಂದಿರದ ಮುಖ್ಯದ್ವಾರಕ್ಕೆ ಚಂದ್ರಾಪುರದ ‘ತೇಗ’ದ ಮರ

ಅಯೋಧ್ಯೆ ರಾಮಮಂದಿರದ ಮುಖ್ಯದ್ವಾರಕ್ಕೆ ಚಂದ್ರಾಪುರದ ‘ತೇಗ’ದ ಮರ

ಮಹಾರಾಷ್ಟ್ರ: ಕೋಟ್ಯಾಂತರ ಹಿಂದೂಗಳ ಶತ ಶತಮಾನಗಳ ಕನಸು ನನಸಾಗುವ ಕಾಲ ಹತ್ತಿರ ಬರುತ್ತಿದೆ. ಅಯೋಧ್ಯೆಯ ಶ್ರೀರಾಮ ದೇಗುಲ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಈಗಾಗಲೇ ಶೇಕಡಾ 40 ರಷ್ಟು ರಾಮಮಂದಿರ ಕಾರ್ಯ ಪೂರ್ಣಗೊಂಡಿದೆ. ಇದೀಗ ಮಹಾರಾಷ್ಟ್ರದ ಗಡ್​ಚಿರೋಲಿ ಜಿಲ್ಲೆಯ ಬೆಲೆಬಾಳುವ ತೇಗದ ಮರವನ್ನು ಭವ್ಯ ಮಂದಿರದ ಮುಖ್ಯದ್ವಾರಕ್ಕೆ ಬಳಸಲಾಗುತ್ತಿದೆ.

ಇದನ್ನೂ ಓದಿ: ಮುಂದಿನ ಮಕರ ಸಂಕ್ರಾಂತಿಗೆ ರಾಮಮಂದಿರ ಪೂರ್ಣ – 2024ರ ಜನವರಿಯಲ್ಲಿ ಭಕ್ತರಿಗೆ ರಾಮನ ದರ್ಶನ

ಗಡ್​ಚಿರೋಲಿ ಜಿಲ್ಲೆಯ ಆಲಪಲ್ಲಿಯ ತೇಗದ ಮರಕ್ಕೆ ವಿಶ್ವಾದ್ಯಂತ ಬೇಡಿಕೆಯಿದೆ. ಈಗಾಗಲೇ ತೇಗದ ಮರವನ್ನು ಆಲಪಲ್ಲಿಯಿಂದ ಬಲ್ಲಾರ್‌ಪುರದ ಕಡೆಗೆ ರವಾನಿಸಲಾಗಿದೆ. ತೇಗದ ಮರ ಬುಧವಾರ ಬಳ್ಳಾರ್‌ಪುರದಲ್ಲಿರುವ ಅರಣ್ಯ ಅಭಿವೃದ್ಧಿ ಮಂಡಳಿಯ ಡಿಪೋಗೆ ತಲುಪಲಿದ್ದು, ರಾಜ್ಯ ಅರಣ್ಯ ಸಚಿವ ಸುಧೀರ್ ಮುಂಗಂತಿವಾರ್ ತೇಗದ ಮರಕ್ಕೆ ವಿಧಿವತ್ತಾಗಿ ಪೂಜೆ ಸಲ್ಲಿಸಿದ ನಂತರ ಬಲ್ಲಾರ್‌ಪುರದಿಂದ ಚಂದ್ರಾಪುರಕ್ಕೆ ಭವ್ಯ ಮೆರವಣಿಗೆ ನಡೆಸಲಿದ್ದಾರೆ.

ದೇವಸ್ಥಾನಕ್ಕೆ 1800 ಕ್ಯೂಬಿಕ್ ಮೀಟರ್ ಮರದ ಅಗತ್ಯವಿದೆ. ಮಹಾರಾಷ್ಟ್ರದ ಅರಣ್ಯ ಅಭಿವೃದ್ಧಿ ನಿಗಮ ಮರವನ್ನು ಪೂರೈಸಲು ಬೇಕಾದ ಔಪಚಾರಿಕತೆಯನ್ನು ಪೂರ್ಣಗೊಳಿಸಿದ್ದು, ಮಹಾರಾಷ್ಟ್ರ ಮರದ ಬೆಲೆ 1.32 ಕೋಟಿ ರೂಪಾಯಿ ಎನ್ನಲಾಗಿದೆ.

ಇಂದು ಎಫ್​ಡಿಸಿಎಂ ಡಿಪೋದಿಂದ ಅಯೋಧ್ಯೆಗೆ ತೆಗದ ಮರ ಕಳುಹಿಸಲಾಗುತ್ತಿದೆ. ಚಂದ್ರಾಪುರದ ಮಾತಾ ಮಹಾಕಾಳಿ ದೇವಸ್ಥಾನದಿಂದ ಮೆರವಣಿಗೆ ಹೊರಡಲಿದೆ. ಮಧ್ಯಾಹ್ನ 3.30ಕ್ಕೆ ಬಲ್ಲಾರಾಪುರ ಅಲ್ಲಪಲ್ಲಿ ರಸ್ತೆಯಲ್ಲಿ ಅರಣ್ಯ ಪ್ರವೇಶ ದ್ವಾರದಿಂದ ಮೆರವಣಿಗೆ ಆರಂಭವಾಗಲಿದೆ. ಈ ಮೆರವಣಿಗೆಯು 6 ಗಂಟೆಗೆ ಮಾತಾ ಕಾಳಿ ಮಂದಿರಕ್ಕೆ ತಲುಪಲಿದ್ದು, ಅಲ್ಲಿ ಸರ್ವಧರ್ಮದ ಆರಾಧನೆ ಹಾಗೂ ಕಾರ್ಯಕ್ರಮಗಳು ಜರುಗಲಿವೆ.

ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ತೇಗದ ಮರಗಳನ್ನು ದೇವಾಲಯದ ಮುಖ್ಯ ದ್ವಾರವನ್ನು ವಿನ್ಯಾಸಗೊಳಿಸಲು ಬಳಸಲಾಗುತ್ತದೆ. ದೇವಾಲಯವನ್ನು ಅಲಂಕರಿಸಲು ಸೊಗಸಾದ ಕೆತ್ತನೆಯನ್ನು ಬಳಸಲು ಮರದ ಅಗತ್ಯವಿದೆ. ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದವರು ಮುಖ್ಯದ್ವಾರ ಮತ್ತು ಇತರೆ ನಿರ್ಮಾಣಗಳಿಗೆ ಹೆಚ್ಚು ಹೆಚ್ಚು ಮರವನ್ನು ಬಳಸಬೇಕು ಎಂದು ದೇವಾಲಯ ನಿರ್ಮಾಣ ಸಮಿತಿಯ ಸದಸ್ಯರು ತಿಳಿಸಿದ್ದಾರೆ.

suddiyaana