ಪೋಷಕರೇ.. ಮಕ್ಕಳ ಬಗ್ಗೆ ಇರಲಿ ಎಚ್ಚರ! – ಟೀಚರ್ ಪಾಠ ಮಾಡ್ತಿರುವಾಗಲೇ ನಡೆಯಿತು ಘೋರ ಕೃತ್ಯ!

ಮಕ್ಕಳನ್ನ ಸ್ಕೂಲ್‌ಗೆ ಕಳುಹಿಸುವ ಪೋಷಕರೇ ಎಚ್ಚರ! ಮಕ್ಕಳನ್ನ ಸ್ಕೂಲ್‌ಗೆ ಕಳುಹಿಸಿದ ಮೇಲೂ ಅವರ ಮೇಲೆ ಒಂದು ಕಣ್ಣಿಡಬೇಕು. ಇದೀಗ ಇಲ್ಲೊಂದು ಕಡೆ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಕ್ಲಾಸ್‌ನಲ್ಲಿ ಟೀಚರ್ ಇರುವಾಗಲೇ ವಿದ್ಯಾರ್ಥಿಯೊಬ್ಬ ಸಹಪಾಠಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಕ್ಯಾಪ್ಟನ್ಸಿಯಲ್ಲಿ ಸೋತ ರಾಶಿಕಾ? – ಬ್ಯಾಕ್ ಟು ಬ್ಯಾಕ್ ಎಡವಟ್ಟು.. BBK ಕ್ಯಾಪ್ಟನ್ ಟ್ರೋಲ್
ಈ ಘಟನೆ ಮಹಾರಾಷ್ಟ್ರದ ರಾಜಗುರು ನಗರದಲ್ಲಿ ನಡೆದಿದೆ. ಕ್ಲಾಸ್‌ನಲ್ಲಿ ಶಿಕ್ಷಕರು ಪಾಠ ಮಾಡ್ತಿದ್ರು. ಈ ವೇಳೆ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯನ್ನ ಕೊಲ್ಲಲು ಯತ್ನಿಸಿದ್ದಾರೆ. ಬಾಲಕನ ಕತ್ತು ಸೀಳಿದ್ದಾನೆ. ಇದ್ರಿಂದಾಗಿ ಬಾಲಕ ಗಂಭೀರ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನ ಆಸ್ಪತ್ರೆಗೆ ದಾಖಲಿಸಿದ್ದು, ಬಾಲಕ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಇತರ ವಿದ್ಯಾರ್ಥಿಗಳ ಮುಂದೆಯೇ ಈ ಹಿಂಸಾತ್ಮಕ ಕೃತ್ಯ ನಡೆದಿದ್ದು, ಶಾಲಾ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಪೊಲೀಸ್ ಮೂಲಗಳ ಪ್ರಕಾರ, ಹಲ್ಲೆ ನಡೆಸಿದ ವಿದ್ಯಾರ್ಥಿ ಶಾಲೆಯಿಂದ ಎಸ್ಕೇಪ್ ಆಗಿದ್ದಾನೆ. ಬೈಕ್ ಮೂಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕನನ್ನ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಸದ್ಯ ಈ ಘಟನೆ ಪೋಷಕರು ಮಾತ್ರವಲ್ಲದೇ ಶಿಕ್ಷಕರಿಗೂ ತಲೆನೋವಾಗಿ ಪರಿಣಮಿಸಿದೆ. ಶಾಲಾ ಆವರಣಗಳಲ್ಲಿ ಪದೇ ಪದೇ ನಡೆಯುತ್ತಿರುವ ಕ್ರೂರ ಹಿಂಸಾಚಾರವು ಮಕ್ಕಳು ಕೋಪ, ಹತಾಶೆ ಮತ್ತು ಸಂಘರ್ಷವನ್ನು ಹೇಗೆ ಎದುರಿಸುತ್ತಾರೆ ಎಂಬುದರ ಕುರಿತು ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಭಾವನೆಗಳನ್ನು ನಿಯಂತ್ರಿಸಲು ಕಲಿಯದಿದ್ದರೆ, ಇದೇ ರೀತಿಯ ಅಪಾಯಕಾರಿ ಮನಸ್ಥಿತಿ ಮುಂದುವರೆದರೆ, ಅಪರಾಧ ಪ್ರಕರಣಗಳು ಹೆಚ್ಚುವುದರಲ್ಲಿ ಸಂಶಯವಿಲ್ಲ.

ನೋಡಿರಿ

