ಫಡ್ನವಿಸ್ ಪ್ಲ್ಯಾನ್.. BJPಗೆ ಸಿಎಂ ಪಟ್ಟ! – ಶಿಂಧೆ ‘ಪವಾರ್’ ಸೈಲೆಂಟ್ ಆಗಿದ್ದೇಕೆ?
ಸೃಷ್ಟಿಯಾಗುತ್ತಾ ಎರಡು DCM ಸ್ಥಾನ?

ಈ ಬಾರಿಯ ಮಹಾರಾಷ್ಟ್ರ ವಿಧಾನಸಭಾ ಎಲೆಕ್ಷನ್‌ನಲ್ಲಿ ಯಾರು ಅಂದುಕೊಳ್ಳದ ರೀತಿಯಲ್ಲಿ ರಿಸಲ್ಟ್ ಬಂದಿದೆ. ಎಲ್ಲಾ ಲೆಕ್ಕಚಾರಗಳು ತಲೆಕೆಳಗಾಗಿವೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಒಟ್ಟು 288 ಸ್ಥಾನಗಳಿವೆ. ಅವುಗಳಲ್ಲಿ ಬಿಜೆಪಿಯೊಂದೇ 133 ಸ್ಥಾನಗಳನ್ನು ಗೆದ್ದಿದೆ.BJPಯೊಂದೇ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದ ಏಕೈಕ ಪಕ್ಷವಾಗಿ ಹೊರಹೊಮ್ಮಿದೆ. ಯಾವುದೇ ಮೈತ್ರಿಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷವೇ ಮುಖ್ಯಮಂತ್ರಿ ಸ್ಥಾನವನ್ನು ಕೇಳುತ್ತದೆ. ಅದೇ ಕಾರಣಕ್ಕಾಗಿ ಬಿಜೆಪಿಯು ಆ ಸ್ಥಾನದ ಮೇಲೆ ಕಣ್ಣಿಟ್ಟಿದೆ. ಹೀಗಾಗಿಯೇ ಸಿಎಂ ರೇಸ್‌ನಿಂದ ಅಜಿತ್ ಪವಾರ್ ಮತ್ತು ಏಕನಾಥ ಶಿಂಧೆ ಹಿಂದೆ ಸರಿದಿದ್ದಾರೆ.
ಇದನ್ನೂ ಓದಿ: ಯತ್ನಾಳ್ ವಿರುದ್ಧ ಸಿಡಿದೆದ್ದ BSY ಬಣ – ಧರ್ಮಸ್ಥಳದಲ್ಲಿ ಆಣೆ ಪ್ರಮಾಣದ ಸವಾಲ್
ಮಹಾರಾಷ್ಟ್ರದಲ್ಲಿ ಪ್ರಚಂಡ ಜಯಗಳಿಸಿರುವ ‘ಮಹಾಯುತಿ’ ಯಾರನ್ನ ಸಿಎಂ ಮಾಡೋದು ಅನ್ನೋದನ್ನ ಸರ್ಕಸ್ ಮಾಡುತ್ತಿದೆ. ಮಹಾಯುತಿಯ ಮೂರು ಪಕ್ಷಗಳ ಅಂದರೆ ಬಿಜೆಪಿ 132 ಸ್ಥಾನ , ಶಿವಸೇನಾ 57 , ಎನ್‌ಸಿಪಿ 41 ಸ್ಥಾನವನ್ನ ಪಡೆದಿವೆ.. ಮೈತ್ರಿ ಆಗಿರೋದ್ರಿಂದ ಯಾರನ್ನ ಸಿಎಂ ಮಾಡಬೇಕು ಅನ್ನೋ ಗೊಂದಲಲ್ಲೇ ಮಹಾಯುತಿಯಿದೆ.. ರಿಸಲ್ಟ್ ಬಂದು ವಾರವಾಗುತ್ತಾ ಬಂದಿದ್ದು ಎಲ್ಲಾ ನಾಯಕರು ಮಾತುಕತೆ ನಡೆಸಿ ಒಮ್ಮತಕ್ಕೆ ಬಂದರಾ? ಮಹಾರಾಷ್ಟ್ರ ಸಿಎಂ ಯಾರು? ಎಂಬ ಕುತೂಹಲ ಹೆಚ್ಚಾಗುತ್ತಲೇ ಇದೆ.
ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾದ್ರೆ. ಇಲ್ಲಿಯವರೆಗೆ ಮುಖ್ಯಮಂತ್ರಿಯಾಗಿದ್ದ ಏಕನಾಥ್ ಶಿಂಧೆ ಉಪ ಮುಖ್ಯಮಂತ್ರಿ ಆಗಲಿದ್ದಾರೆ. ಮೊದಲಿನಂತೆ ಅಜಿತ್ ಪವಾರ್ ಕೂಡ ಉಪ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಅಂದ್ರೆ ಎರಡು ಡಿಸಿಎಂ ಪಟ್ಟ ಇರಲಿದೆ. ಬಿಜೆಪಿ ಹೈಕಮಾಂಡ್ ಜೊತೆ ಮಾತುಕತೆ ನಡೆಸಿ ಏಕನಾಥ್ ಶಿಂಧೆ ಒಪ್ಪಿಗೆ ನೀಡಿದ್ದಾರೆ ಎಂಬ ಸುದ್ದಿ ಇದೆ. ಏಕನಾಥ ಶಿಂಧೆ ಅವರು ಉಪ ಮುಖ್ಯಮಂತ್ರಿಯಾಗಲಿದ್ದು, ಸಚಿವ ಸಂಪುಟದ ಲ್ಲಿ 12 ಸಚಿವ ಸ್ಥಾನಗಳನ್ನು ಶಿವಸೇನಾ ನಾಯಕರಿಗೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದಲ್ಲದೆ ಎನ್‌ಸಿಪಿಗೆ 10 ಸಚಿವ ಸ್ಥಾನಗಳನ್ನು ನೀಡಬಹುದು. ಮಹಾರಾಷ್ಟ್ರದಲ್ಲಿ ಮಂತ್ರಿಗಳ ಪರಿಷತ್ತಿನ ಗರಿಷ್ಠ ಸಂಖ್ಯೆಯ ಸದಸ್ಯರ ಸಂಖ್ಯೆ 43 ಆಗಿದ್ದು, ಇದರಲ್ಲಿ ಮುಖ್ಯಮಂತ್ರಿಯೂ ಸೇರಿದ್ದಾರೆ. ಮಾಹಿತಿ ಪ್ರಕಾರ 132 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ 21 ಸಚಿವ ಸ್ಥಾನಗಳನ್ನು ತಾನೇ ಇಟ್ಟುಕೊಳ್ಳಬಹುದು. ಸಮ್ಮಿಶ್ರ ಧರ್ಮವನ್ನು ಅನುಸರಿಸಲು ಮತ್ತು ಮಿತ್ರಪಕ್ಷಗಳನ್ನು ಜೊತೆಯಲ್ಲಿ ಕರೆದೊಯ್ಯುವ ಸಂದೇಶವನ್ನು ನೀಡುವುದಕ್ಕಾಗಿ ಎನ್‌ಸಿಪಿ ಮತ್ತು ಶಿವಸೇನೆಗೆ ಡಿಸಿಎಂ ಪಟ್ಟ ಹಾಗೂ ಸಚಿವ ಸ್ಥಾನವನ್ನ ಹಂಚಲಿದೆ. ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರು ಪೂರ್ಣ ಬೆಂಬಲವನ್ನು ದೇವೇಂದ್ರ ಫಡ್ನವಿಸ್‌ಗೆ ನೀಡಿದ್ದಾರೆ. ಚುನಾವಣೆಯಲ್ಲಿ ಅತಿಹೆಚ್ಚು ಸೀಟುಗಳನ್ನು ಗಳಿಸಿರುವ ಬಿಜೆಪಿಗೆ ಸಿಎಂ ಸ್ಥಾನ ಖಚಿತವಾಗಿದೆ. ಆದ್ರೆ ಪ್ರಮುಖ ಖಾತೆಯಾದ ಗೃಹ ಸಚಿವಾಲಯ, ಹಣಕಾಸು ಸಚಿವಾಲಯ, ನಗರಾಭಿವೃದ್ಧಿ ಮತ್ತು ಕಂದಾಯ ಇಲಾಖೆಗಳು 3ರಲ್ಲಿ ಯಾವ ಪಕ್ಷದ ಪಾಲಾಗುತ್ತೆ ಅನ್ನೋ ಕುತೂಹಲ ಕೂಡ ಹೆಚ್ಚಾಗಿದೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಸಿಎಂ ಯಾರನ್ನ ಮಾಡ್ತಾರೆ ಅನ್ನೋ ಗೊಂದಲ ಹೆಚ್ಚಾಗಿದ್ದು, ಕ್ಷಣ ಕ್ಷಣಕ್ಕೂ ಸಾಕಷ್ಟು ಬದಲಾವಣೆ ಆಗುತ್ತಿದೆ.