ಯಾರಿಗೂ ಬೇಡವಾದ ದ್ರಾವಿಡ್ ಪುತ್ರ – ಆರ್ಸಿಬಿ ಪಡಿಕ್ಕಲ್ಗೆ ಬಂಪರ್ ಲಾಟ್ರಿ
ಮಹಾರಾಜ ಟ್ರೋಫಿಗೆ ಯಾರಿಗೆಲ್ಲಾ ಚಾನ್ಸ್

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 4 ನೇ ಸೀಸನ್ ಹರಾಜು ಭರ್ಜರಿಯಾಗಿ ನಡೆಯಿತು. ಮನೀಶ್ ಪಾಂಡೆ, ಪಡಿಕ್ಕಲ್, ಅಭಿನವ್ ಮನೋಹರ್ ಸೇರಿ 1000ಕ್ಕೂ ಹೆಚ್ಚು ಆಟಗಾರರು ಹರಾಜಿಗೆ ನೋಂದಾಯಿಸಿಕೊಂಡಿದ್ದರು. ಪ್ರತಿ ತಂಡಕ್ಕೂ 50 ಲಕ್ಷ ರು. ಮಿತಿಯಲ್ಲಿ ಕನಿಷ್ಠ 16, ಗರಿಷ್ಠ 18 ಆಟಗಾರರನ್ನು ಖರೀದಿಸಲು ಅವಕಾಶವಿತ್ತು. ಮಂಗಳೂರು ಡ್ರ್ಯಾಗನ್ಸ್ ಹೊರತುಪಡಿಸಿ ಉಳಿದ 5 ತಂಡಗಳು ತಲಾ 18 ಆಟಗಾರರನ್ನು ಖರೀದಿಸಿದರೆ, ಮಂಗಳೂರು ತಂಡ 16 ಆಟಗಾರರನ್ನು ಆಯ್ಕೆ ಮಾಡಿಕೊಂಡಿತು. ಒಟ್ಟು 106 ಆಟಗಾರರು ಸೋಲ್ಡ್ ಆದ್ರು..
ಪಡಿಕ್ಕಲ್ಗೆ ಬಂಪರ್ ಲಾಟರಿ
2025ರ ಮಹಾರಾಜ ಟ್ರೋಫಿ ಹರಾಜಿನಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಆಯ್ಕೆಯಾಗುವ ಮೂಲಕ RCB ಆಟಗಾರ ಕರ್ನಾಟಕದ ಸ್ಟೈಲಿಶ್ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಗಮನ ಸೆಳೆದರು. ದೇವದತ್ ಪಡಿಕ್ಕಲ್ ಅವರನ್ನು ಹುಬ್ಬಳ್ಳಿ ಟೈಗರ್ಸ್ 13.20 ಲಕ್ಷ ರೂಪಾಯಿಗೆ ಖರೀದಿಸಿದೆ. ಐಪಿಎಲ್ ಅನುಭವ ಮತ್ತು ಇತ್ತೀಚಿನ ಫಾರ್ಮ್ ನಿಂದಾಗಿ ಅವರನ್ನು ಆಯ್ಕೆ ಮಾಡಿಕೊಳ್ಳಲು ಫ್ರಾಂಚೈಸಿಗಳು ಮುಗಿಬಿದ್ದಿದ್ದವು. ಆದರೆ ಪಟ್ಟು ಬಿಡದ ಹುಬ್ಬಳ್ಳಿ ಟೈಗರ್ಸ್ 13.20 ಲಕ್ಷಕ್ಕೆ ಬಿಡ್ ಮಾಡ್ತು. 2025ರ ಅದ್ಭುತ ಐಪಿಎಲ್ ಋತುವಿನ ನಂತರ ಪಡಿಕ್ಕಲ್ ಅವರ ಮೌಲ್ಯ ಹೆಚ್ಚಾಯಿತು. 150.61 ರ ಸ್ಫೋಟಕ ಸ್ಟ್ರೈಕ್ ರೇಟ್ನಲ್ಲಿ 247 ರನ್ ಗಳಿಸಿದ ಪಡಿಕ್ಕಲ್ ಆರ್ಸಿಬಿಯ ಅತ್ಯಂತ ವಿಶ್ವಾಸಾರ್ಹ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು ಎಂದು ಸಾಬೀತಾಯಿತು.. ಹೀಗಾಗಿ ಮಹರಾಜ ಟ್ರೋಪಿಯಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಬಿಡ್ ಆದ್ರು..
ಅನ್ಸೋಲ್ಡ್ ಆದ ದ್ರಾವಿಡ್ ಪುತ್ರ ಸಮಿತ್
ಅಚ್ಚರಿಯ ಬೆಳವಣಿಗೆಯಲ್ಲಿ ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಅವರು ಮಹಾರಾಜ ಟ್ರೋಫಿ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದಾರೆ. ಸಮಿತ್ ಹಿಂದಿನ ಟಿ20 ಪಂದ್ಯಾವಳಿಯಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆದರೆ ಕೊಚ್ ಬೆಹರ್ ಟ್ರೋಫಿಯಲ್ಲಿ ಅದ್ಬುತ ಪ್ರದರ್ಶನ ನೀಡಿದ್ದರು. ಸಮಿತ್ ದ್ರಾವಿಡ್ ಅವರು ಕರ್ನಾಟಕದ ಪರವಾಗಿ ಜೂನಿಯರ್ ಕ್ರಿಕೆಟ್ ಆಡಿದ ಅನುಭವ ಹೊಂದಿದ್ದಾರೆ.. 2024 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಭಾರತದ U19 ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ, ಗಾಯದ ಕಾರಣದಿಂದಾಗಿ ಅವರು ಆ ಸರಣಿಯಲ್ಲಿ ಆಡಲು ಸಾಧ್ಯವಾಗಲಿಲ್ಲ. ಕಳೆದ ಬಾರಿ ಅವರು ಮೈಸೂರು ವಾರಿಯರ್ಸ್ ತಂಡದಲ್ಲಿದ್ದ ಇವರಿಗೆ ಸಾಕಷ್ಟು ಅವಕಾಶ ನೀಡಿದ್ರೂ ಅದ್ದನ್ನ ಸರಿಯಾಗಿ ಬಳಸಿಕೊಳ್ಳಲಿಲ್ಲ.. ಕಳೆದ ಆವೃತ್ತಿಯಲ್ಲಿ ಅವರು 7 ಪಂದ್ಯಗಳಲ್ಲಿ 11.71ರ ಸರಾಸರಿಯಲ್ಲಿ ಕೇವಲ 82 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಹೀಗಾಗಿ ಈ ಬಾರಿ ಅವರನ್ನು ಖರೀದಿಸಲು ಯಾವ ತಂಡವೂ ಆಸಕ್ತಿ ತೋರಲಿಲ್ಲ.
ದುಬಾರಿ ಬೆಲೆಗೆ ಸೋಲ್ಡ್ ಆದ ಆಟಗಾರರು
ಆಟಗಾರರು ಹಣ ತಂಡ
ದೇವದತ್ ಪಡಿಕ್ಕಲ್ – ₹13.20 ಲಕ್ಷ – ಹುಬ್ಬಳ್ಳಿ ಟೈಗರ್ಸ್
ಅಭಿನವ್ ಮನೋಹರ್ – ₹12.20 ಲಕ್ಷ – ಹುಬ್ಬಳ್ಳಿ ಟೈಗರ್ಸ್
ಮನೀಶ್ ಪಾಂಡೆ – ₹12.20 ಲಕ್ಷ – ಮೈಸೂರು ವಾರಿಯರ್ಸ್
ವಿದ್ವತ್ ಕಾವೇರಪ್ಪ – ₹10.80 ಲಕ್ಷ – ಶಿವಮೊಗ್ಗ ಲಯನ್ಸ್
ವಿದ್ಯಾಧರ್ ಪಾಟೀಲ್ – ₹8.40 ಲಕ್ಷ – ಬೆಂಗಳೂರು
14 ಲಕ್ಷಕ್ಕೆ ಮಯಾಂಕ್ ರೀಟೈನ್
ಹರಾಜಿಗೂ ಮೊದಲು ಪ್ರತಿ ತಂಡ ತಲಾ ನಾಲ್ಕು ಆಟಗಾರರನ್ನು ರೀಟೈನ್ ಮಾಡಿಕೊಂಡಿತ್ತು. ಬೆಂಗಳೂರು ಬ್ಲಾಸ್ಟರ್ಸ್ ಮಯಾಂಕ್ ಅಗರ್ವಾಲ್ಗೆ 14 ಲಕ್ಷ ರು. ನೀಡಿ ತನ್ನಲ್ಲೇ ಉಳಿಸಿಕೊಂಡಿತ್ತು. ಮಯಾಂಕ್ ಮಹಾರಾಜ ಟ್ರೋಫಿಯ ದುಬಾರಿ ಆಟಗಾರ ಎನಿಸಿದ್ದಾರೆ. ಇನ್ನು, ಎಲ್ಲಾ 6 ತಂಡಗಳು ಸೇರಿ ಒಟ್ಟು 2 ಕೋಟಿ 92 ಲಕ್ಷದ 85 ಸಾವಿರ ರು. ಖರ್ಚು ಮಾಡಿವೆ. ರೀಟೈನ್ ಮಾಡಿಕೊಂಡ ಆಟಗಾರರಿಗೆ ನೀಡಿದ ಮೊತ್ತವೂ ಇದರಲ್ಲಿ ಸೇರಿದೆ. ಕರುಣ್ ನಾಯರ್, ಪ್ರಸಿದ್ಧ್ ಕೃಷ್ಣ ಸೇರಿ ಪ್ರಮುಖ ಆಟಗಾರರು ಹರಾಜಿಗೂ ಮೊದಲೇ ರೀಟೈನ್ ಆಗಿದ್ದರು. ಇನ್ನೂ ಮಹರಾಜ ಟ್ರೋಪಿಯ ಪಂದ್ಯಾವಳಿಯು ಆ.11 ರಿಂದ 27ರ ತನಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದ್ರೆ ಆರ್ಸಿಬಿಯ ಕರಾಳ ಘಟನೆಯಿಂದ ಮಹಾರಾಜ ಟ್ರೋಫಿ ಪಂದ್ಯಾವಳಿಯನ್ನ ವೀಕ್ಷಣೆ ಮಾಡೋಕೆ ಫ್ಯಾನ್ಸ್ ಅವಕಾಶ ನೀಡಿಲ್ಲ..

ನೋಡಿರಿ

