ಒಲ್ಲದ ಮದ್ವೆ.. ಪ್ರಾಣ ಪಣಕ್ಕೆ.. ಹೆತ್ತವರ ಸೂರಿಗಾಗಿ ಬದುಕಿಗೇ ಚಾಲೆಂಜ್! – ಮಹಾನಟಿ ವರ್ಷಾಗೆ ತಾರಮ್ಮ ಮನೆ ಗಿಫ್ಟ್!

ಒಲ್ಲದ ಮದ್ವೆ.. ಪ್ರಾಣ ಪಣಕ್ಕೆ.. ಹೆತ್ತವರ ಸೂರಿಗಾಗಿ ಬದುಕಿಗೇ ಚಾಲೆಂಜ್! – ಮಹಾನಟಿ ವರ್ಷಾಗೆ ತಾರಮ್ಮ ಮನೆ ಗಿಫ್ಟ್!

ಮಹಾನಟಿ ಸೀಸನ್‌ 2 ಶೋ ಈಗ ರೋಚಕ ಘಟ್ಟ ತಲುಪಿದೆ. ಎಲ್ಲಾ ಸ್ಪರ್ಧಿಗಳ ಮಧ್ಯೆ ಟಫ್‌ ಫೈಟ್‌ ಏರ್ಪಟ್ಟಿದೆ. ದಿನದಿಂದ ದಿನಕ್ಕೆ ಮಹಾನಟಿಯರು ಜಬರ್ದಸ್ತ್ ಪರ್ಫಾರ್ಮೆನ್ಸ್​ ಜಡ್ಜ್‌ಗಳ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಈ ಶೋನಲ್ಲಿ ಆರಂಭದಿಂದಲೂ ಹೆಚ್ಚು ಹೈಲೈಟ್‌ ಆಗಿರೋದು ಅಂದ್ರೆ ಅದು ಚಿಕ್ಕೋಡಿಯ ವರ್ಷ ಡಿಗ್ರಜೆ. ಪ್ರತಿ ವಾರವೂ ಬ್ಲಾಕ್‌ ಬಾಷ್ಟರ್‌ ಪರ್ಫಾಮೆನ್ಸ್‌ ನೀಡ್ತಿದ್ದಾರೆ. ಉತ್ತರ ಕರ್ನಾಟಕದ ಜವಾರಿ ಹುಡುಗಿ ಪಟ ಪಟ ಮಾತು, ನಟನೆ ವೀಕ್ಷಕರಿಗೆ ಇಷ್ಟವಾಗಿದೆ. ಆದ್ರೆ ಈ ಜವಾರಿ ಹುಡುಗಿ ಜೀವನದಲ್ಲಿ ಸಾಕಷ್ಟು ನೋವು ತಿಂದಿದ್ದಾರೆ. ಸಣ್ಣ ವಯಸ್ಸಿನಲ್ಲೇ ಮದ್ವೆ ತಿರಸ್ಕರಿಸಲು ಆತ್ಮಹತ್ಯೆಗೂ ಯತ್ನಿಸಿದ್ರು. ಅದಾದ ಬಳಿಕ ಹೆತ್ತವರ ಸೂರಿಗಾಗಿ ಪಟ್ಟ ಕಷ್ಟ ಒಂದೆರಡಲ್ಲ.. ಜೀವನದಲ್ಲಿ ಬರೀ ಕಷ್ಟಗಳನ್ನೇ ನೋಡಿದ ವರ್ಷಾಗೆ ಈಗ ನಟಿ ತಾರಮ್ಮ ಮನೆ ಗಿಫ್ಟ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: ಬಗೆದಷ್ಟು ಬಿಗಿಯಾಗುತ್ತಿದೆ ಬಂಗ್ಲೆ ಗುಡ್ಡದ ರಹಸ್ಯ – SIT ಗೊಂದಲ.. ಮತ್ತೆ ಕಾರ್ಯಾಚರಣೆ ನಡೆಯುತ್ತಾ?

ಮಹಾನಟಿ ಸೀಸನ್‌ 2 ಸ್ಪರ್ಧಿ ವರ್ಷಾ ಡಿಗ್ರಜೆ ಈಗ ಪ್ರತಿ ಸಂಚಿಕೆಯಲ್ಲೂ ಬೆಸ್ಟ್‌ ಪರ್ಫಾಮೆನ್ಸ್‌ ನೀಡ್ತಿದ್ದಾರೆ. ಫೋಟೋ ಶೂಟ್‌ ಇರ್ಲಿ.. ಡ್ಯಾನ್ಸ್‌ ಇರ್ಲಿ.. ಆಕ್ಟಿಂಗ್‌.. ಎಲ್ಲದ್ರಲ್ಲೂ ಸೈ ಎನಿಸಿಕೊಂಡಿದ್ದಾರೆ. ಈಕೆಯ ಪರ್ಫಾಮೆನ್ಸ್‌ ಗೆ ಜಡ್ಜಸ್‌ ಕೂಡ ಫಿದಾ ಆಗಿದ್ದಾರೆ. ಕಳೆದ ಮಹಾನಟಿ & ನಾವು ನಮ್ಮವರು ‘ಮಹಾಸಂಗಮ ನಡೆದಿತ್ತು. ಈ ವೇಳೆ ಎರಡು ಶೋ ಸ್ಪರ್ಧಿಗಳು ಹಾಗೂ ಜಡ್ಜಸ್‌ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ರು. ಈ ವೇಳೆ ವರ್ಷಾ ಡಿಗ್ರಜೆ ಉಳಿದವರು ಕಂಡಂತೆ ಸಿನಿಮಾದ ತಾಯಿಯ ಅಪ್ಪುಗೆ ಸಾಂಗ್‌ ಗೆ ಡ್ಯಾನ್ಸ್‌ ಮಾಡಿದ್ದಾರೆ. ವರ್ಷಾಗೆ ಯುವನ್‌ ಸಾಥ್‌ ಕೊಟ್ಟಿದ್ದಾರೆ. ಈ ವೇಳೆ ನಟಿ ತಾರಾ ವರ್ಷಾ ಜೀವನ ಬಗ್ಗೆ ಕೇಳಿದ್ದಾರೆ. ಆಗ ವರ್ಷ ಜೀವನ ಕಹಿ ಘಟನೆ ಬಗ್ಗೆ ತಿಳಿಸಿದ್ದು, ನಟಿ ತಾರಮ್ಮ ಸೂರು ಕೊಡುಗೆಯಾಗಿ ನೀಡಿದ್ದಾರೆ.

ಹೌದು, ವರ್ಷಾ ಪರ್ಫಾಮೆನ್ಸ್‌ ಮುಗಿಯುತ್ತಿದ್ದಂತೆ ನಟಿ ತಾರಮ್ಮ ವರ್ಷಾ ಬಳಿ ಜೀವನದ ಬಗ್ಗೆ ಹೇಳುವಂತೆ ಹೇಳಿದ್ದಾರೆ. ಈ ವೇಳೆ ನಮ್ಮದು ಬಡ ಕುಟುಂಬ.. ಅಪ್ಪ ಅಮ್ಮ ಸಾಲ ಮಾಡಿ ಊರು ಬಿಟ್ಟು ಬಂದ್ರು.. ಮನೆಯ ಆಧಾರ ತಾನೇ.. ತಾನು ಲೋನ್‌ ಮಾಡಿ ಓದಿದ್ದೇನೆ.. ಬಳಿಕ ಒಡಿಶಾದ ಜಿಂಧಾಲ್‌ ನಲ್ಲಿ  ಕೆಲಸ ಮಾಡಿ ಸಾಲ ತೀರಿಸಿದ್ದೇನೆ, ತಂದೆ ತಾಯಿಯನ್ನ ನೋಡಿಕೊಳ್ತಿದ್ದೀನಿ.. ಅಣ್ಣನಿಗೆ ಮದುವೆ ಮಾಡಿಸಿದ್ದೀನಿ ಎಂದಿದ್ದಾರೆ. ಈ ವೇಳೆ ನಟಿ ತಾರಮ್ಮ ಭಾವುಕರಾಗಿದ್ದಾರೆ. ಬಳಿಕ ಮನೆ ಇದ್ಯಾ ಎಂದು ಕೇಳಿದ್ದಕ್ಕೆ ವರ್ಷಾ ಇಲ್ಲ ಅಂದ್ರು. ಈ ವೇಳೆ ತಾರಮ್ಮ ಈ ವೇಳೆ ವೇದಿಕೆಯಲ್ಲಿ ಪ್ರಾಮಿಸ್‌ ಮಾಡ್ತೀನಿ.. ಸರ್ಕಾರದಿಂದ ಮನೆ ಸಿಗುವಂತೆ ಮಾಡ್ತೀನಿ ಅಂದಿದ್ದಾರೆ. ಈ ವೇಳೆ ವರ್ಷಾ ಭಾವುಕರಾಗಿದ್ದಾರೆ.

ಅಂದ್ಹಾಗೆ ವರ್ಷಾ ಡಿಗ್ರಜೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಇಂಗಳಿ ಎಂಬ ಹಳ್ಳಿಯವರು. ಇಂಜಿನಿಯರಿಂಗ್ ಪದವೀಧರೆಯಾಗಿ ಪ್ರಸ್ತುತ ಜಿಂದಾಲ್ ಕಂಪನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲ್ಸ ಮಾಡ್ತಿದ್ದಾರೆ. ಆದ್ರೆ, ವರ್ಷಾ ಡಿಗ್ರಜೆ ಜೀವನದಲ್ಲಿ ಸಾಕಷ್ಟು ಸವಾಲು ಎದುರಿಸಿದ್ದಾರೆ. ತನ್ನ ಜೀವನ ಕತೆಯನ್ನ  ಮಹಾನಟಿ ವೇದಿಕೆಯಲ್ಲಿ ಹೇಳಿದ್ದಾರೆ. ವರ್ಷಾಗೆ ಸುಮಾರು 14 ವರ್ಷ ಇದ್ದಾಗ ಆಕೆಯ ಮನೆಯವರು ಮದುವೆ ಮಾಡಿಸಲು ಮುಂದಾಗಿದ್ರು.. ಆದ್ರೆ ಆಕೆಗೆ ತಾನು ಏನಾದ್ರೂ ಸಾಧನೆ ಮಾಡ್ಬೇಕು ಅನ್ನೋ ಆಸೆ, ಕನಸು ಇತ್ತು. ಹೀಗಾಗಿ ಬಾಲ್ಯ ವಿವಾಹದಿಂದ ತಪ್ಪಿಸಿಕೊಳ್ಳಲು ಆಕೆ ಆತ್ಮಹತ್ಯೆಯ ದಾರಿ ಹಿಡಿದಿದ್ರು. ಇದು ಗೊತ್ತಾಗ್ತಿದ್ದಂತೆ ಆಕೆಯನ್ನ ಮನೆಯವರು ಆಸ್ಪತ್ರೆಗೆ ಅಡ್ಮಿಟ್‌ ಮಾಡ್ತಾರೆ. ಕೆಲ ದಿನ ಸಾವು ಬದುಕಿನ ಮಧ್ಯೆ ಹೋರಾಡಿದ್ದ ವರ್ಷಾ ಕೊನೆಗೂ ಕಂಟಕದಿಂದ ಪಾರಾಗ್ತಾರೆ. ಅಷ್ಟೇ ಅಲ್ಲ ಫಿಕ್ಸ್‌ ಆಗಿದ್ದ ಮದುವೆ ಕೂಡ ನಿಂತು ಹೋಗುತ್ತೆ. ಮದುವೆ ನಿಲ್ತಿದ್ದಂತೆ ವರ್ಷಾ ಮತ್ತೆ ಸ್ಕೂಲ್‌ ಗೆ ಹೋಗಲು ಶುರುಮಾಡ್ತಾರೆ.. ಆದ್ರೆ ಮತ್ತೆ ವರ್ಷಾಗೆ ಮನೆಯವರಿಂದ ಪ್ರೆಷರ್‌ ಬೀಳುತ್ತೆ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ.95ರಷ್ಟು ಮಾರ್ಕ್ಸ್‌ ತಗೊಂಡ್ರೆ ಮುಂದಕ್ಕೆ ಹೋಗ್ತಿಯಾ. ಇಲ್ಲ ಅಂದ್ರೆ ನಿಮ್ ಸೋದರಮಾವನ ಜೊತೆ ಮದುವೆ ಮಾಡಿಸ್ತೀನಿ ಅಂತಾ ಆಕೆಯ ತಾಯಿ ಭಯಪಡಿಸಿದ್ರು.. ಇದನ್ನೇ ವರ್ಷಾ ಸವಾಲಾಗಿ ತೆಗೆದುಕೊಂಡ್ರು.  95 ಅಲ್ಲ, 98 ಪರ್ಸೆಂಟ್ ಅಂಕ ಪಡೆದು ಎಲ್ಲರಿಗೂ ಮಾದರಿಯಾದ್ರು.. ಇನ್ನು ಇಂಜಿನಿಯರಿಂಗ್ ಸೇರುವಾಗಲೂ ಆಕೆ ಹತ್ರ ದುಡ್ಡು ಇರಲಿಲ್ಲ. ಆಕೆಯ ಗುರುಗಳೊಬ್ಬರು ಎಜುಕೇಷನ್‌ ಗೆ 2 ಲಕ್ಷ ರೂಪಾಯಿ ಕೊಟ್ಟು ಸಹಾಯ ಮಾಡಿದ್ರಂತೆ. ಅದಾದ ನಂತ್ರ ಎಜುಕೇಷನ್ ಲೋನ್ ಮಾಡಿ, ವಿದ್ಯಾಭ್ಯಾಸ ಮುಂದುವರಿಸಿದ್ದಾರಂತೆ.. ಆಕೆಯ ಸಾಧನೆ ನೋಡಿದ ಹಳ್ಳಿ ಮಂದಿ, ಬಳಿಕ ಅವ್ರ ಮಕ್ಕಳನ್ನ ಕೂಡ ವಿದ್ಯಾಭ್ಯಾಸಕ್ಕೆಂದು ಸ್ಕೂಲ್‌, ಕಾಲೇಜ್‌ ಗೆ ಕಳಿಸ್ತಿದ್ದಾರೆ.   ವರ್ಷಾಳಿಂದಾಗಿ ಆ ಹಳ್ಳಿಯಲ್ಲಿ ಅನೇಕ ಹೆಣ್ಣುಮಕ್ಕಳು ವಿದ್ಯಾವಂತರಾಗಿದ್ದಾರೆ.. ಇದೀಗ ಸೂರಿಲ್ಲ ವರ್ಷಾಗೆ ತಾರಮ್ಮ ಸರ್ಕಾರದಿಂದ ಮನೆ ಕೊಡಿಸೋದಾಗಿ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ವರ್ಷಾ ನಟನೆ ಮೂಲಕ ದೊಡ್ಡ ಸಾಧನೆ ಮಾಡಲಿ.. ದೊಡ್ಡ ಸ್ಟಾರ್‌ ಆಗಿ ಬೆಳೆಯಲಿ.. ಜೀವನ ಕಷ್ಟಗಳೆಲ್ಲ ಆದಷ್ಟು ಬೇಗ ದೂರವಾಗಿ ಆಕೆ ಬಾಳು ಬೆಳಕಿನಿಂದ ಕೂಡಿರಲಿ ಅನ್ನೋದೇ ಎಲ್ಲರ ಆಶಯ.

Shwetha M